More

    ಖಾಲಿ ಹುದ್ದೆ ಭರ್ತಿಗೆ ಕೌಶಲ ಕೊರತೆ

    ಹುಬ್ಬಳ್ಳಿ: ದೇಶದಲ್ಲಿ ವಿವಿಧ ತಾಂತ್ರಿಕ ಹುದ್ದೆಗಳು ಖಾಲಿ ಇದ್ದು, ಕೌಶಲ ಹಾಗೂ ಶ್ರಮವಹಿಸಿ ದುಡಿಯುವವರ ಕೊರತೆ ಕಾಡುತ್ತಿದೆ ಎಂದು ಬೆಂಗಳೂರಿನ ಗ್ಲೋಬಲ್ ಎಡ್ಜ್ ಸಾಫ್ಟ್​ವೇರ್ ಲಿ. ಉಪಾಧ್ಯಕ್ಷ ನಾಗನಗೌಡ ಜಕ್ಕನಗೌಡ್ರ ಅಭಿಪ್ರಾಯಪಟ್ಟರು.

    ಕೆಎಲ್​ಇ ಸಂಸ್ಥೆಯ ಬಿಸಿಎ ಪಿಸಿ ಜಾಬಿನ್ ಕಾಲೇಜ್ ವತಿಯಿಂದ ಇಲ್ಲಿನ ಕೆಎಲ್​ಇ ತಾಂತ್ರಿಕ ವಿವಿಯ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಟೆಕ್ನೋ ಕಾನ್​ಕ್ಲೇವ್-2020’ ಒಂದು ದಿನದ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ತಂತ್ರಜ್ಞಾನ ಒಡ್ಡುತ್ತಿರುವ ಸವಾಲಿಗೆ ಸಜ್ಜಾಗಬೇಕಿದೆ. ತಂತ್ರಜ್ಞಾನ ಉದ್ಯೋಗ ಕಿತ್ತುಕೊಳ್ಳುತ್ತಿಲ್ಲ. ಬದಲಿಗೆ ಕೆಲಸದ ಗತಿಯನ್ನು ಬದಲಿಸುತ್ತಿದೆ. ಸವಾಲುಗಳನ್ನು ಎದುರಿಸಲು ಯುವಜನರು ಕೌಶಲ ಹೊಂದುವ ಮೂಲಕ ತಯಾರಾಗಬೇಕಿದೆ. ಭವಿಷ್ಯದಲ್ಲಿ 5ಜಿ ಬಂದರೆ, ತಂತ್ರಜ್ಞಾನದ ಗತಿ ಇನ್ನೂ ಬದಲಾಗಲಿದೆ ಎಂದರು.

    ದಿನದಿಂದ ದಿನಕ್ಕೆ ನಡೆಯುತ್ತಿರುವ ತಂತ್ರಜ್ಞಾನದ ಆವಿಷ್ಕಾರಕ್ಕೆ ನಾವು ಹೊಂದಿಕೊಳ್ಳುತ್ತಿಲ್ಲ. ಶೇ. 40ರಷ್ಟು ಉದ್ಯೋಗಿಗಳು ಕೌಶಲದ ಕೊರತೆ ಎದುರಿಸುತ್ತಿದ್ದಾರೆ. ಸ್ವ ಅರಿವಿನ ಜೊತೆಗೆ ಸಂವಹನ, ವಿಮರ್ಶಾತ್ಮಕ ಚಿಂತನೆ, ಉದ್ಯೋಗ ಕೌಶಲ, ನಾಯಕತ್ವ ಗುಣವನ್ನು ಯುವಜನರು ಬೆಳೆಸಿಕೊಳ್ಳಬೇಕು. ವಿಶ್ವದಲ್ಲಿಯೇ ಭಾರತ ಶಕ್ತಿಶಾಲಿ ರಾಷ್ಟ್ರವಾ ಗಿದೆ. ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐದು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ನಾಲ್ವರು ಪದವೀಧರರ ಪೈಕಿ ಒಬ್ಬರು ಭಾರತೀಯ ರಿದ್ದಾರೆ. ವಿಶ್ವದ 200 ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಭಾರತದ 25ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಸ್ಥಾನ ಪಡೆದಿವೆ ಎಂದರು.

    ಬೆಂಗಳೂರಿನ ಕ್ಯಾಂಬ್ರಿಡ್ಜ್ ತಾಂತ್ರಿಕ ಸಂಸ್ಥೆ ನಿರ್ದೇಶಕ ಡಾ.ಡಿ.ಎಚ್. ರಾವ್ ‘ಡಿಜಿಟಲ್ ಕ್ಲಿನಿಕ್’, ಮೊಎಂಗೇಜ್ ಕಂಪನಿ ವ್ಯವಸ್ಥಾಪಕ ಜಿತೇಂದರ ಪನಿಹಾರ ‘ಎಂಪ್ಲಾಯೆಬಲಿಟಿ ಸ್ಕಿಲ್ಸ್’, ಎಕ್ಸೆಂಚರ್​ನ ಮಹೇಶ ನಾರಾಯಣ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’, ವಿಪ್ರೋ ಸಂಸ್ಥೆಯ ಭವೇಶ ಪಟೇಲ್ ‘ಎಂಪ್ಲಾಯೆಬಲಿಟಿ ಇನ್ ಟೈಮ್್ಸ ಡಿಸ್ರಪ್ಷನ್’, ವಿಷ್ಣು ಪ್ರಸಾದ ಡಿ. ‘ಇಂಡಸ್ಟ್ರೀ 4.0’ ಕುರಿತು ಮಾತನಾಡಿದರು. ಪ್ರಾಚಾರ್ಯು ಪ್ರೊ. ಜ್ಯೋತಿ ಮಾನೇದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಜಿಲ್ಲೆಗಳ ಬಿಸಿಎ, ಬಿ.ಎಸ್ಸಿ , ಬಿ.ಇ, ಡಿಪ್ಲೊಮಾ, ಎನ್​ಟಿಟಿಎಫ್ ಮತ್ತಿತರ ಮಾಹಿತಿ ತಂತ್ರಜ್ಞಾನ ಅಧ್ಯಯನ ಮಾಡುತ್ತಿರುವ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ. ಸಿದ್ದಲಿಂಗಪ್ಪ ಕಡಕೊಳ, ಪ್ರೊ. ವಂದನಾ ಸುನಾಗ, ಪ್ರೊ. ದೀಪಾ ಬಗಾಡೆ, ಬಿ.ಎಸ್. ಮಾಳವಾಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts