More

    ಖಾಲಿ ಕುಳಿತ ಕಂಡಕ್ಟರ್, ಡ್ರೖೆವರ್

    ಮುಂಡರಗಿ: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ. ಆದರೆ, ಕರೊನಾ ಆತಂಕದಿಂದ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿದಿದ್ದು ಸಾರಿಗೆ ಸಂಸ್ಥೆಗೆ ತೀವ್ರ ಹಿನ್ನಡೆಯಾಗಿದೆ. ಕೆಲ ದಿನಗಳ ಹಿಂದೆ ಬಸ್​ಗಳಿಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ಆದರೆ, ಈಗ ಚಾಲಕರು, ನಿರ್ವಾಹಕರು ಪ್ರಯಾಣಿಕರಿಗೆ ಕಾದು ಕುಳಿತುಕೊಳ್ಳುವಂತಾಗಿದೆ.

    ಸ್ಥಳೀಯ ಘಟಕದಿಂದ 30 ಬಸ್​ಗಳು ರಸ್ತೆಗಿಳಿದಿವೆ. ಬೆಂಗಳೂರು, ಗದಗ, ಕೊಪ್ಪಳ, ಹೂವಿನಹಡಗಲಿ, ಶಿರಹಟ್ಟಿ, ಬೆಳ್ಳಟ್ಟಿ, ಹೆಬ್ಬಾಳ, ಹಮ್ಮಿಗಿ ಮೊದಲಾದ ಕಡೆಗಳಿಗೆ ಬಸ್​ಗಳನ್ನು ಬಿಡಲಾಗಿದೆ. ಮುಂಡರಗಿಯಿಂದ ಗದಗಕ್ಕೆ ಹೊರಡುವ ಬಸ್​ಗಳನ್ನು ಹೊರತುಪಡಿಸಿ ಇನ್ನುಳಿದ ಕಡೆಗಳಿಗೆ ಬಹುತೇಕ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ.

    ಕಳೆದೆರಡು ದಿನಗಳಿಂದ ಮಾರ್ಗ ಮಧ್ಯದಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಬಸ್ ನಿಲುಗಡೆ ಮಾಡಲಾಗುತ್ತಿದೆ. ಆದರೂ ಬಸ್ ಸಂಚಾರಕ್ಕೆ ಪಟ್ಟಣ ಹಾಗೂ ಗ್ರಾಮಿಣ ಭಾಗದ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಬಹುತೇಕ ಬಸ್​ಗಳು ಸಂಚಾರವನ್ನು ಪ್ರಾರಂಭಿಸದೆ ಕೇಂದ್ರ ಬಸ್ ನಿಲ್ದಾಣದಲ್ಲಿಯೇ ನಿಲ್ಲುವಂತಾಗಿದೆ.

    ಶನಿವಾರ ಮಧ್ಯಾಹ್ನ 1 ಗಂಟೆಯೊಳಗೆ ಗದಗಿಗೆ 10 ಬಸ್​ಗಲು ಸಂಚರಿಸಿವೆ. ಆದರೆ, ಪ್ರತಿ ಬಸ್​ಗಳಲ್ಲಿ 5, 10, 20 ಜನ ಪ್ರಯಾಣ ಮಾಡಿದ್ದಾರೆ. ಹಮ್ಮಿಗಿ ಮತ್ತು ಶಿರಹಟ್ಟಿಗೆ ತೆರಳಿದ ಬಸ್​ಗಳಲ್ಲಿ ಇದ್ದದ್ದು ಒಬ್ಬ ಪ್ರಯಾಣಿಕ ಮಾತ್ರ. ಕೊಪ್ಪಳ, ಹೂವಿನಹಡಗಲಿ ಬಸ್​ನಲ್ಲಿ ಐದಾರು ಪ್ರಯಾಣಿಕರು ಕಂಡು ಬಂದರು. ಬಹುತೇಕ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬಸ್ ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲ್ದಾಣದಲ್ಲಿ ಖಾಲಿ ಕುಳಿತುಕೊಳ್ಳುವಂತಾಗಿದೆ.

    ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಕರ ಮಾಹಿತಿ ಪಡೆಯಲಾಗುತ್ತಿದೆ. ಬಸ್ ಸಂಚಾರಕ್ಕೆ ಮೊದಲು ಕನಿಷ್ಠ 30 ಪ್ರಯಾಣಿಕರಾದರೂ ಇರಬೇಕಿತ್ತು. ಆದರೆ, ಈಗ ಹೆಚ್ಚಿನ ಜನರು ಬಾರದಿರುವುದರಿಂದ ನಾಲ್ಕೈದು ಪ್ರಯಾಣಿಕರಿದ್ದರೂ ಬಸ್​ಗಳನ್ನು ಓಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts