More

    ಕ್ಷೇತ್ರದ ಜನರ ಬಹುದಿನದ ಬೇಡಿಕೆ ಈಡೇರಿಕೆ

    ಮೂಡಲಗಿ, ಬೆಳಗಾವಿ: ಮೂಡಲಗಿಗೆ ಉಪನೋಂದಣಿ ಅಧಿಕಾರಿಗಳ ಕಚೇರಿ ಆರಂಭಿಸುವ ಮೂಲಕ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಿದ್ದೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ನೂತನವಾಗಿ ಆರಂಭಗೊಂಡಿರುವ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಯಲ್ಲಿ ಕಚೇರಿಯ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರು ಹಾಗೂ ರೈತರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿರುವುದಾಗಿ ಹೇಳಿದರು. ರಾಜ್ಯದಲ್ಲಿ ಮೂಡಲಗಿ ಹೊಸ ತಾಲೂಕಿಗೆ ಮಾತ್ರ ಉಪನೋಂದಣಾಧಿಕಾರಿಗಳ ಕಚೇರಿ ಆರಂಭಿಸಲಿಕ್ಕೆ ಸರ್ಕಾರ ಅನುಮತಿ ನೀಡಿದೆ. ಉಳಿದ ಯಾವ ಹೊಸ ತಾಲೂಕಿಗೂ ಈ ಕಚೇರಿ ಆರಂಭಿಸಲಿಕ್ಕೆ ಸರ್ಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಮತಿ ನೀಡಿಲ್ಲ. ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರಿದ್ದೆ, ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ. ಮೂಡಲಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನಗೆ ಮುಖ್ಯವಾಗಿದ್ದು, ಯಾರೂ ಏನೇ ಅಂದರೂ ಅದಕ್ಕೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದರು. ಎಲ್ಲ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡಿಸುತ್ತಿದ್ದೇನೆ. ಈಗಾಗಲೇ ಅಗ್ನಿ ಶಾಮಕ ಠಾಣೆ ಮಂಜೂರಾತಿ ಹಂತದಲ್ಲಿದೆ. ಮಿನಿ ವಿಧಾನಸೌಧ ಕೂಡ ಪ್ರಗತಿಯಲ್ಲಿದೆ. ರಸ್ತೆಗಳ ಪ್ರಗತಿಗಾಗಿ ಮೂಡಲಗಿಗೆ ನಗರೋತ್ಥಾನ ಯೋಜನೆ ಅಡಿ 4 ಕೋಟಿ ರೂ. ಅನುದಾನ ಬಂದಿದ್ದು. ಭೂಮಿ ಪೂಜೆ ಮಾಡಲಾಗಿದೆ. ಇನ್ನೂ 2ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಹೂರ್ತ ಪ್ರಕಾರ ಸೋಮವಾರ ಪೂಜೆ ಸಲ್ಲಿಸಲಾಗಿದೆ. ನ. 10ರಿಂದ ಉಪನೋಂದಣಾಧಿಕಾರಿಗಳ ಕಚೇರಿಯು ಸಾರ್ವಜನಿಕರ ಸೇವೆಗೆ ಅಣಿಯಾಗಲಿದೆ ಎಂದರು.

    ಸಾನ್ನಿಧ್ಯವನ್ನು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ವಹಿಸಿದ್ದರು.
    ಗುಂಡು ಆಚಾರ್ಯ ತೇಗ್ಗಿ ಮತ್ತು ರಾಘವೇಂದ್ರ ಆಚಾರ್ಯ ತೇಗ್ಗಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ, ತಹಸೀಲ್ದಾರ್ ಡಿ.ಜಿ.ಮಹಾತ, ತಾಪಂ ಇಒ ಎಫ್.ಎಸ್.ಚಿನ್ನನವರ, ಮೂಡಲಗಿ ಉಪನೋಂದಣಾಧಿಕಾರಿ ಓ.ಹರಿಯಪ್ಪ, ಮುಖಂಡರಾದ ಜಿ.ಟಿ.ಸೋನವಾಲ್ಕರ, ರಾಮಣ್ಣ ಹಂದಿಗುಂದ, ರವಿ ಸೋನವಾಲ್ಕರ, ಬಸವಪ್ರಭು ನಿಡಗುಂದಿ, ವಿಜಯಕುಮಾರ ಸೋನವಾಲ್ಕರ, ಅಜೀಜ್ ಡಾಂಗೆ, ಡಾ.ಎಸ್.ಎಸ್.ಪಾಟೀಲ, ಮರೆಪ್ಪ ಮರೆಪ್ಪಗೋಳ, ಅನ್ವರ್ ನದಾಫ್, ಗಿರೀಶ ಢವಳೇಶ್ವರ, ಮಹಾದೇವ ಶೆಕ್ಕಿ, ಐ.ಎಸ್.ಕೊಣ್ಣೂರ, ರಮೇಶ ಸಣ್ಣಕ್ಕಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts