More

    ಕ್ಷೇತ್ರಕ್ಕೆ 7.20 ಕೋಟಿ ರೂ. ಮಂಜೂರು

    ಹಿರೇಕೆರೂರ: ಹಿರೇಕೆರೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ 13 ಕಾಮಗಾರಿಗಳಿಗೆ ಕರ್ನಾಟಕ ನೀರಾವರಿ ನಿಗಮದಿಂದ 7.20 ಕೋಟಿ ರೂ. ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

    ತಾಲೂಕಿನ ಬಾಳಂಬೀಡ ಗ್ರಾಮದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಸೇವಾಲಾಲ್ ಸಮುದಾಯ ಭವನ ನಿರ್ವಣಕ್ಕೆ 50 ಲಕ್ಷ ರೂ., ಬೀರೇಶ್ವರ ಸಮುದಾಯ ಭವನಕ್ಕೆ 50 ಲಕ್ಷ ರೂ., ಉಪ್ಪಾರ ಸಮುದಾಯ ಭವನಕ್ಕೆ 50 ಲಕ್ಷ ರೂ., ಗಂಗಾಮತ ಸಮುದಾಯ ಭವನಕ್ಕೆ 50 ಲಕ್ಷ ರೂ, ಮಡಿವಾಳ ಮಾಚಿದೇವ ಸಮುದಾಯ ಭವನಕ್ಕೆ 50 ಲಕ್ಷ ರೂ., ಚಿಕ್ಕೇರೂರು ಗ್ರಾಮದಲ್ಲಿ ವೀರಭದ್ರೇಶ್ವರ ಸಮುದಾಯ ಭವನಕ್ಕೆ 50 ಲಕ್ಷ ರೂ., ಹೊಸಕಟ್ಟೆ ಗ್ರಾಮದಲ್ಲಿ ಬಸವೇಶ್ವರ ಸಮುದಾಯ ಭವನಕ್ಕೆ 50 ಲಕ್ಷ ರೂ., ಮಡ್ಲೂರು ಗ್ರಾಮದಲ್ಲಿ ಮುರುಘಾಮಠ ಸಮುದಾಯ ಭವನಕ್ಕೆ 50 ಲಕ್ಷ ರೂ., ಮೇದೂರು ಗ್ರಾಮದ ಬಸವೇಶ್ವರ ಸಮುದಾಯ ಭವನಕ್ಕೆ 1 ಕೋಟಿ ರೂ., ಚಟ್ನಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ವಣಕ್ಕೆ 50 ಲಕ್ಷ ರೂ., ಚಟ್ನಳ್ಳಿ ಗ್ರಾಮದ ಆಂಜನೇಯ ಸಮುದಾಯ ಭವನಕ್ಕೆ 50 ಲಕ್ಷ ರೂ., ಚಟ್ನಳ್ಳಿ ಗ್ರಾಮದಲ್ಲಿ ರೈತ ಸಂಪರ್ಕ ರಸ್ತೆಗೆ 70 ಲಕ್ಷ ರೂ. ಹಾಗೂ ಪುರದಕೇರಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಸಮೀಪ ತಡೆಗೋಡೆ ನಿರ್ವಣಕ್ಕೆ 50 ಲಕ್ಷ ರೂ. ಮಂಜೂರಾಗಿದೆ ಎಂದರು.

    ಜನತೆಯ ಋಣ ತೀರಿಸಲು ವೈಯಕ್ತಿಕವಾಗಿ ಸುಮಾರು 40 ಲಕ್ಷ ರೂ. ಮೌಲ್ಯದ 2.50 ಲಕ್ಷ ಮಾಸ್ಕ್​ಗಳನ್ನು ಜನತೆಗೆ ಪಕ್ಷಾತೀತವಾಗಿ ವಿತರಣೆ ಮಾಡುತ್ತೇವೆ. ಕರೊನಾ ಭಯಪಡುವ ರೋಗ ಅಲ್ಲ, ಬೇರೆ ಕಾಯಿಲೆ ಇದ್ದವರಿಗೆ ತೊಂದರೆಯಾಗಿದೆ. ಜನತೆ ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದರು.

    ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜಿ.ಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ. ಇದಕ್ಕೆ ರಾಜಕೀಯ ಹಿನ್ನೆಲೆ ಇದೆ. ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಹಚ್ಚಿದವರನ್ನೇ ಕಾಂಗ್ರೆಸ್ಸಿಗರು ಅಮಾಯಕರು ಎಂದು ಹೇಳುತ್ತಿದ್ದಾರೆ. ಅವರು ಅಮಾಯಕರಲ್ಲ, ದೇಶದ್ರೋಹಿಗಳು. ಭಯೋತ್ಪಾದಕರು, ಅವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.
    | ಬಿ.ಸಿ. ಪಾಟೀಲ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts