More

    ಕ್ರೀಡೆಗಳು ಆರೋಗ್ಯ ವೃದ್ಧಿಗೆ ಸಹಕಾರಿ

    ಚಿತ್ರದುರ್ಗ: ಕ್ರೀಡೆಗಳು ಆರೋಗ್ಯ ವೃದ್ಧಿಗೆ ಅತ್ಯಂತ ಸಹಕಾರಿಯಾಗಿದ್ದು, ಪಾಲ್ಗೊಳ್ಳುವ ಮನೋಭಾವ ಹೆಚ್ಚಿನ ಸಂಖ್ಯೆಯ ಮಕ್ಕಳು, ಯುವಜನರಲ್ಲಿ ಮೂಡಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.

    ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿವಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಹಮ್ಮಿಕೊಂಡಿರುವ ಅಂತರ್ ಕಾಲೇಜುಗಳ ಹ್ಯಾಂಡ್‌ಬಾಲ್ ಪಂದ್ಯಾವಳಿ, ಪುರುಷ ಮತ್ತು ಮಹಿಳೆಯರ ವಿವಿ ತಂಡದ ಆಯ್ಕೆ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

    ಸದೃಢ ದೇಶಕ್ಕೆ ಆರೋಗ್ಯವಂತ ಸಮಾಜ ನಿರ್ಮಾಣ ಅಗತ್ಯವಿದ್ದು, ಕ್ರೀಡಾ ಮನೋಭಾವ ಹೆಚ್ಚಾಗಬೇಕು. ಪ್ರಾಚೀನ ಕಾಲದಲ್ಲಿ ದೇಸೀಯ ಕ್ರೀಡೆಗಳಿಗೆ ಅಧಿಕ ಮನ್ನಣೆ ದೊರೆಯುತ್ತಿತ್ತು. ಹೀಗಾಗಿ ಅಂದಿನ ಜನರು ಯಾವ ಕಾಯಿಲೆಗಳಿಂದ ನರಳದೇ ಆರೋಗ್ಯವಂತರಾಗಿದ್ದರು. ಆದ್ದರಿಂದ ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

    ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾ ಖೋಟಾದಡಿ ಶೇ 2ರಷ್ಟು ಮೀಸಲಿಟ್ಟಿದೆ. ಸ್ಥಳೀಯ ಸಂಘ-ಸಂಸ್ಥೆಗಳು ಕ್ರೀಡಾಕೂಟಗಳನ್ನು ಹೆಚ್ಚಾಗಿ ಆಯೋಜಿಸಿ, ಕ್ರೀಡಾಪಟುಗಳ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ, ಡಾ.ವೆಂಕಟೇಶ್, ಎಂ.ಜೆ.ಸಾಧಿಕ್, ಬಿ.ಎಚ್.ಕುಮಾರಸ್ವಾಮಿ, ಡಾ.ಡಿ.ಓ.ಸಿದ್ದಪ್ಪ, ಬಿ.ಮಂಜುನಾಥ, ಡಾ.ಸಿ.ಚನ್ನಕೇಶವ, ಕ್ರೀಡಾ ಸಂಚಾಲಕರಾದ ಆರ್.ಶಿವಪ್ರಸಾದ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ತಿಪ್ಪೇಸ್ವಾಮಿ, ಎಚ್.ಶಕುಂತಲಾ, ಡಾ.ಶಿವಣ್ಣ, ಕ್ರೀಡಾಪಟುಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts