More

    ಕೌಶಲಗಳ ಮೇಲೆ ಬದುಕುವ ಸಾಮರ್ಥ್ಯ ಅಗತ್ಯ

    ಬಾಗಲಕೋಟೆ: ಒಂದು ಅವಧಿಯಲ್ಲಿ ಕಲಿತ ಮತ್ತು ಅಭ್ಯಾಸ ಮಾಡುವ ಕೌಶಲಗಳ ಮೇಲೆ ಬದುಕುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಜೆ.ಒಡೆಯರ ಹೇಳಿದರು.

    ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮಹಿಳಾ ಸಶಕ್ತಿಕರಣಘಟಕ ಹಾಗೂ ಉದ್ಯಮಶೀಲ ಅಭಿವೃದ್ಧಿ ಘಟಕಗಳ ಅಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಫುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಶ್ರೇಷ್ಠ ಶಿಕ್ಷಣವೆಂದರೆ ಕೌಶಲವನ್ನು ಕಲಿಸುವುದು ಮಾತ್ರವಲ್ಲದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಕಲಿಸುವುದು. ಈ ವೇಗದ ಅತ್ಯಂತ ಸ್ಪರ್ಧಾತ್ಮಕ ಜಗತ್ತಿನಲ್ಲಿ, ವಿದ್ಯಾರ್ಥಿಗಳು ಒಂದು ಅವಽಯಲ್ಲಿ ಕಲಿತ ಮತ್ತು ಅಭ್ಯಾಸ ಮಾಡುವ ಕೌಶಲಗಳ ಮೇಲೆ ಬದುಕುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ, ವಿದ್ಯಾರ್ಥಿನಿಯರು ತಮ್ಮ ಕಲಿಕಾ ಹಂತದಲ್ಲಿ ಈ ರೀತಿ ವ್ಯಾಪಾರದ ಕೌಶಲವನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ಉದ್ಯೋಗ ಕೌಶಲವು ಉಪಕ್ರಮಗಳನ್ನು ತೆಗೆದುಕೊಳ್ಳುವುದು. ಆಸಕ್ತಿ ತೋರಿಸುವುದು, ದೀರ್ಘಾವಧಿಯ ಯಶಸ್ಸಿನ ಒಂದು ರಹಸ್ಯವೆಂದರೆ ವಿಶ್ಲೇಷಣಾತ್ಮಕ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಬಲಪಡಿಸುವುದು ಮಾಡಿಕೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಪಿ.ಕೆ.ಚೌಗಲಾ, ಉದ್ಯಮಶೀಲ ಅಭಿವೃದ್ಧಿ ಘಟಕ ಸಂಯೋಜಕ ಸೀಮಾ ಚಾಹುಸ್, ಮಹಿಳಾ ಸಶಕ್ತಿಕರಣ ಘಟಕದ ಸಂಯೋಜಕಿ ವಾಣಿಶ್ರೀ ತಾಳಿಕೋಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts