More

    ಕೋವಿ ಹಕ್ಕು ಅಭಾದಿತವಾಗಿ ಮುಂದುವರಿಯಲಿ

    ಶ್ರೀಮಂಗಲ: ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡರೂ ಆ ಪಕ್ಷ ಅಥವಾ ಮುಖಂಡರಿಂದ ಜನಾಂಗಕ್ಕೆ ಆಗುತ್ತಿರುವ ದ್ರೋಹವನ್ನು ಅದುಮಿಟ್ಟುಕೊಳ್ಳಬಾರದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿ.ಎಸ್.ಸಿ.) ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಹೇಳಿದರು.


    ಬಿರುನಾಣಿಯ ಮರೆನಾಡು ಪ್ರೌಢಶಾಲೆ ಮೈದಾನದಲ್ಲಿ ಮರೆನಾಡ್ ಶೂಟರ್ಸ್‌ ಕ್ಲಬ್ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಮಾತನಾಡಿದರು. ಕೊಡವ ಜನಾಂಗದ ಕೋವಿ ಹಕ್ಕು ಸೇರಿದಂತೆ ಜನಾಂಗದ ಹಕ್ಕುಗಳನ್ನು ಕಸಿದು ಜನಾಂಗವನ್ನು ನಿರ್ನಾಮ ಮಾಡಲು ಕೊಡವರ ಒಡನಾಟ ಇಟ್ಟುಕೊಂಡ ಮುಖಂಡರು ಕುತಂತ್ರ ರೂಪಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಬೇಕು. ಕೊಡವರ ವಿಶೇಷವಾದ ಕೋವಿ ಹಕ್ಕನ್ನು ಸೂರ್ಯ ಚಂದ್ರ ಇರುವವರೆಗೆ ಅಭಾದಿತವಾಗಿ ಮುಂದುವರಿಯಬೇಕು ಎಂದು ಹೇಳಿದರು.


    ತಾಯಿ, ಸಹೋದರಿಯರ ಮೇಲೆ ದೌರ್ಜನ್ಯ ಮಾಡಿದವರು ಪಕ್ಷದವರು ಎಂದು ಮನ್ನಿಸಲು ಸಾಧ್ಯವಿಲ್ಲ. ಮಹಾಭಾರತ ಯುದ್ಧದಲ್ಲಿ ಪಾಂಡವ-ಕೌರವ ಸಹೋದರರೇ ಎದುರಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ದಯೆ, ಕನಿಕರ ಕಟ್ಟಿಟ್ಟು ಯುದ್ಧ ಮಾಡುವಂತೆ ಶ್ರೀಕೃಷ್ಣ ಉಪದೇಶ ಮಾಡಿದ್ದನ್ನು ನಾಚಪ್ಪ ಉದಾಹರಣೆ ನೀಡಿದರು.
    ಹಿರಿಯರಾದ ಕುಪ್ಪುಡಿರ ಕಾಳಪ್ಪ, ಮರೆನಾಡ್ ಶೂಟರ್ಸ್‌ ಕ್ಲಬ್ ಅಧ್ಯಕ್ಷ ಕುಪ್ಪುಡಿರ ಪೊನ್ನುಮುತ್ತಪ್ಪ, ಕಾರ್ಯದರ್ಶಿ
    ನೆಲ್ಲೀರ ಧನು ಹಾಜರಿದ್ದರು.


    ಫಲಿತಾಂಶ: 22 ಬೋರ್ ವಿಭಾಗದಲ್ಲಿ ಬಡುವಮಂಡ ದೇವಯ್ಯ(ಪ್ರಥಮ), ನೆಲ್ಲೀರ ಧನು (ದ್ವಿತೀಯ), ಶಮನ ಬೆಳ್ಯಪ್ಪ (ತೃತೀಯ), ಸ್ಥಾನ ಪಡೆದು ಅನುಕ್ರಮವಾಗಿ 20 ಸಾವಿರ ರೂ., 15 ಸಾವಿರ ರೂ., 10 ಸಾವಿರ ರೂ. ನಗದು ಮತ್ತು ಟ್ರೋಫಿ ಬಹುಮಾನ ಪಡೆದರು.


    12 ಬೋರ್ ವಿಭಾಗದಲ್ಲಿ ಮಾಲೆಯಂಡ ವಿಜು ಚಂಗಪ್ಪ(ಪ್ರಥಮ), ಪಟ್ಟಡ ಬೋಪಣ್ಣ(ದ್ವಿತೀಯ), ಬ್ರಿಜೇಶ್(ತೃತೀಯ) ಸ್ಥಾನ ಪಡೆದು ಅನುಕ್ರಮವಾಗಿ ಟ್ರೋಫಿ ಮತ್ತು 20 ಸಾವಿರ ರೂ., 15 ಸಾವಿರ ರೂ.ಮತ್ತು 10 ಸಾವಿರ ರೂ.ನಗದು ಬಹುಮಾನ ಪಡೆದರು.


    ಏರ್ ರೈಫಲ್ ವಿಭಾಗದಲ್ಲಿ ಪುತ್ತೇರಿರ ನಂಜಪ್ಪ (ಪ್ರಥಮ), ಶಮನ್ ಬೆಳ್ಯಪ್ಪ (ದ್ವಿತೀಯ), ಕಾಳಿಮಾಡ ಶರತ್(ತೃತೀಯ) ಸ್ಥಾನಗಳಿಸುವ ಮೂಲಕ ಅನುಕ್ರಮವಾಗಿ 5 ಸಾವಿರ ರೂ., 3 ಸಾವಿರ ರೂ.ಮತ್ತು 2 ಸಾವಿರ ರೂ.ಬಹುಮಾನ ಪಡೆದರು.


    12 ಬೋರ್ ವಿಭಾಗದಲ್ಲಿ 25 ಮೀಟರ್ ವಿಭಾಗದಲ್ಲಿ ಮಾಲೆಯಂಡ ಸುಬ್ಬಯ್ಯ(ಪ್ರಥಮ), ಚೋನೀರ ರಂಜನ್(ದ್ವಿತೀಯ),ಪ್ರಖ್ಯಾತ್ ಚಿಣ್ಣಪ್ಪ (ತೃತೀಯ)ಸ್ಥಾನ ಪಡೆಯುವ ಮೂಲಕ ಅನುಕ್ರಮವಾಗಿ 10 ಸಾವಿರ ರೂ., 7ಸಾವಿರ ರೂ.ಮತ್ತು 5 ಸಾವಿರ ರೂ.ನಗದು ಹಾಗೂ ಟ್ರೋಫಿ ಪಡೆದರು.


    ಮರೆನಾಡ್ ಶೂಟರ್ಸ್‌ ಕ್ಲಬ್‌ನ ಅಧ್ಯಕ್ಷ ಕುಪ್ಪುಡಿರ ಪೊನ್ನು ಮುತ್ತಪ್ಪ , ಕಾರ್ಯದರ್ಶಿ ನೆಲ್ಲೀರ ಧನು, ಖಜಾಂಚಿ ಕಳ್ಳಂಗಡ ನವೀನ್ ಚಂಗಪ್ಪ, ಸದಸ್ಯರಾದ ಚೋನೀರ ಸಜನ್ ಉತ್ತಪ್ಪ, ಚೋನೀರ ಸೋಮಣ್ಣ, ಬಲ್ಯಮೀದೇರಿರ ಶರೀನ್ ಬೆಳ್ಯಪ್ಪ, ಕಾಯಪಂಡ ಮೋಹನ್, ಕುಪ್ಪುಡೀರ ಪ್ರಖ್ಯಾತ್ ಚಿಣ್ಣಪ್ಪ, ಕುಪ್ಪಣಮಾಡ ಮಂಜು, ೆಲ್ಲೀರ ರಾಕೇಶ್, ಕಾಳಿಮಾಡ ಶರತ್ ಮುತ್ತಪ್ಪ, ಕರ್ತಮಾಡ ಸುಜನ್, ಚೇರಂಡ ಪಾಪು ಕಾರ್ಯಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts