More

    ಕೋವಿಡ್-19 ರ್ಯಾಪಿಡ್ ಆ್ಯಂಟಿಂಜೆನ್ ಟೆಸ್ಟ್


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕೋವಿಡ್-19 ರ್ಯಾಪಿಡ್ ಆ್ಯಂಟಿಂಜೆನ್ ಟೆಸ್ಟ್ ಶುರು ಮಾಡುವ ಮೂಲಕ ನಗರದ ಯುನೈಟೆಡ್ ಆಸ್ಪತ್ರೆ ಬೆಂಗಳೂರು ಹೊರುತು ಪಡಿಸಿದಂತೆ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಈ ಟೆಸ್ಟ್ ಶುರು ಮಾಡಿದ ಮೊದಲ ಖಾಸಗಿ ಆಸ್ಪತ್ರೆ ಎನ್ನಿಸಿಕೊಳ್ಳುವ ಮೂಲಕ ಮತ್ತೊಂದು ಹೆಜ್ಜೆ ಮುಂದಡಿ ಇರಿಸಿದೆ.
    ಕೋವಿಡ್- 19 ಗಾಗಿ ಯುನೈಟೆಡ್ ಡಯಾಗ್ನೋಸ್ಟಿಕ್ಸ್ನಲ್ಲಿ ಈ ಟೆಸ್ಟ್ ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. ಕ್ಷಿಪ್ರ ಮತ್ತು ಆರಂಭಿಕ ಪತ್ತೆಗಾಗಿ ಈ ಟೆಸ್ಟ್ ತುಂಬಾ ಉಪಯುಕ್ತ ಎನಿಸಿಕೊಂಡಿದೆ ಎಂದು ಆಸ್ಪತ್ರೆಯ ಚೇರ್ಮನ್ ಡಾ.ವಿಕ್ರಮ ಸಿದ್ದಾರೆಡ್ಡಿ ಮತ್ತು ಲ್ಯಾಬ್ ಮುಖ್ಯಸ್ಥೆ ಡಾ.ಆಯೇಷಾ ಮೊಹ್ಮದ್ ಬಶೀರ್ ಹೇಳಿದರು.
    ಈ ಕುರಿತು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಡಾ.ವಿಕ್ರಮ, ಡಾ.ಆಯೇಷಾ ನೀಡಿದ ವಿವರ ಹೀಗಿದೆ.
    ಅತ್ಯಾಧುನಿಕ ತಂತ್ರಜ್ಞಾನ, ಅತ್ಯುನ್ನತ ಕೌಶಲದ ಮೂಲಕ ಲ್ಯಾಬ್ನಲ್ಲಿ ಟೆಸ್ಟ್ಗಳು ನಡೆಯಲಿದ್ದು, ಐಸಿಎಂಆರ್ ಅನುಮೋದನೆ ಹೊಂದಿರುವ ಮೊದಲ ಖಾಸಗಿ ಪ್ರಯೋಗಾಲಯವೂ ಇದಾಗಿದೆ. ಆರ್ಟಿಪಿಸಿಆರ್ ಪರೀಕ್ಷೆಗೂ ಅನುಮೋದನೆ ದೊರೆತಿದೆ. ಇದರಲ್ಲೂ ನಮ್ಮ ಆಸ್ಪತ್ರೆಯ ಲ್ಯಾಬ್ ಬೆಂಗಳೂರು ಹೊರತುಪಡಿಸಿ ಹೊರಗಿನ ಏಕೈಕ ಖಾಸಗಿ ಆಸ್ಪತ್ರೆಯಾಗಿದೆ. ಲ್ಯಾಬ್ ಸೆಟಪ್ ಗುಣಮಟ್ಟದ ಸಾಧನೆಗೆ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ.
    ಎನ್ಎಬಿಎಲ್ ಮಾನ್ಯತೆ: ಯುಎಸ್ ಎಫ್ಡಿಎ ಅನುಮೋದನೆ ಮಾಡಿದ್ದು, ಎನ್ಎಬಿಎಲ್ (ಪರೀಕ್ಷೆ ರಾಷ್ಟ್ರೀಯ ಮಾನ್ಯತೆ ಮಂಡಳಿ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳು) ಪ್ರಮಾಣೀಕರಿಸಿದೆ. ಉತ್ತಮವಾದ ಪಾಯಿಂಟ್-ಆಫ್-ಕೇರ್-ರ್ಯಾಪಿಡ್ (ಸ್ಥಳದಲ್ಲೇ) ಪ್ರತಿಜನಕ ಪತ್ತೆ ಪರೀಕ್ಷೆಯ ತುರ್ತು ಅವಶ್ಯಕತೆಯಿದೆ. ರೋಗದ ಆರಂಭಿಕ ಪತ್ತೆ, ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಗೆ ಯುನೈಟೆಡ್ ಡಯಾಗ್ನೋಸ್ಟಿಕ್ಸ್ನಲ್ಲಿ ಇದೀಗ ಪರೀಕ್ಷಿಸಲು ಸಾಧ್ಯವಾಗಲಿದೆ.
    ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕೋವಿಡ್ -19 ಪರೀಕ್ಷೆಯು ವೈರಸ್ನ ಭಾಗವಾಗಿರುವ ಕೆಲ ಪ್ರೊಟೀನ್ಗಳನ್ನು ಪತ್ತೆ ಮಾಡಲಿದ್ದು, ಈ ಪ್ರಕ್ರಿಯೆ 30 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ. ಕರೊನಾ ರೋಗ ನಿರ್ಣಯಕ್ಕಾಗಿ ಪ್ರಮಾಣಿತ ಮುಂಚೂಣಿ ಪರೀಕ್ಷೆ ಇದಾಗಿದೆ. ಈ ಪ್ಲಾಟ್ಫಾರ್ಮಗಳಿಗೆ ವಿಶೇಷ ಪ್ರಯೋಗಾಲಯ ಯುನೈಟೆಡ್ ಹೊಂದಿದೆ. ಉಪಕರಣಗಳು, ಜೈವಿಕ ಸುರಕ್ಷತೆ ಮತ್ತು ಜೈವಿಕ ಸುರಕ್ಷತೆಯ ವಿಷಯದಲ್ಲಿ ಸೌಲಭ್ಯ, ಪರೀಕ್ಷೆಗೆ ತೆಗೆದುಕೊಂಡ ಕನಿಷ್ಠ ಸಮಯ ಪರಿಗಣನೆಗೆ ಬರುತ್ತದೆ.
    ತುರ್ತು ಫಲಿತಾಂಶ: ಕಡಿಮೆ ಸಂವೇದನಾಶೀಲತೆಯ ಸಂದರ್ಭದಲ್ಲಿ ಅದರ ಹೆಚ್ಚಿನ ನಿರ್ದಿಷ್ಟತೆಯ ದೃಷ್ಟಿಯಿಂದ ಐಸಿಎಂಆರ್ ಸ್ಟ್ಯಾಂಡರ್ಡ ಬಳಕೆಯನ್ನು ಶಿಫಾರಸು ಮಾಡುತ್ತದೆ. ಹಾಟ್ಸ್ಪಾಟ್ ವಲಯ, ಕಂಟೇನ್ಮೆಂಟ್ ಝೋನ್ಗಳಲ್ಲೂ ಈ ಟೆಸ್ಟ್ ಉತ್ತಮವಾಗಿದೆ. ಜತೆಗೆ ವಿವಿಧ ರೋಗಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದ ಶಂಕಿತರು, ಶಂಕಿತರಲ್ಲದವರ ಪರೀಕ್ಷೆ ಈ ಮೂಲಕ ನಮ್ಮ ಆಸ್ಪತ್ರೆಯಲ್ಲಿ ನಡೆಸಲಾಗುವುದು.
    ಕರೊನಾ ವಾರಿಯರ್ಸ್ ಆದ ಪೊಲೀಸ್, ಆಶಾ ಕಾರ್ಯಕರ್ತೆಯರು, ನರ್ಸಗಳು, ವೈದ್ಯರು ಇತರರಿಗೆ ಈ ಟೆಸ್ಟ್ ಮೂಲಕ ವೈರಸ್ ಪತ್ತೆ ಆದ್ಯತೆ ಆಧಾರದ ಮೇಲೆ ಮಾಡಬಹುದಾಗಿದೆ. ಈ ಟೆಸ್ಟ್ನಲ್ಲಿ ಪಾಸಿಟಿವ್ ಬಂದಲ್ಲಿ ನಂತರ ಆರ್ಟಿಪಿಸಿಆರ್ ಟೆಸ್ಟ್ಗೆ ಒಳಗಾಗಬೇಕಿಲ್ಲ. ಆದರೆ ನೆಗೆಟಿವ್ ಬಂದಲ್ಲಿ ಆರ್ಟಿಪಿಸಿಆರ್ ಟೆಸ್ಟ್ ಮೂಲಕ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳಲು ಐಸಿಎಂಆರ್ ನಿಯಮಾವಳಿಯಲ್ಲಿ ಸೂಚಿಸಿದೆ.
    ಟೆಸ್ಟ್ ಹೆಚ್ಚಳಕ್ಕೆ ಯೋಜನೆ
    ಆರ್ಟಿಪಿಸಿಆರ್ ಟೆಸ್ಟ್ ಗಾಗಿ ನಮ್ಮ ಲ್ಯಾಬ್ಗೆ ಖಾಸಗಿ ಆಸ್ಪತ್ರೆಗಳಿಂದ ನಿತ್ಯ 35-40 ಸ್ಯಾಂಪಲ್ಸ್ ಬರುತ್ತಿದ್ದು, ಸರ್ಕಾರಿ ಆಸ್ಪತ್ರೆಯಿಂದ ಸುಮಾರು 100 ಸ್ಯಾಂಪಲ್ಸ್ ಬರುತ್ತಿವೆ. ಪರೀಕ್ಷಿಸಿದ ಒಟ್ಟು ಸ್ಯಾಂಪಲ್ಸ್ಗಳಲ್ಲಿ ಶೇ.15ರಷ್ಟು ಪಾಸಿಟಿವ್ ಬರುತ್ತಿವೆ. ಈ ಟೆಸ್ಟ್ನ ಪ್ರಸಕ್ತ ಸಾಮಥ್ರ್ಯ 200 ಸ್ಯಾಂಪಲ್ಸ್ ಇದ್ದು, ಇದನ್ನು 500 ಸ್ಯಾಂಪಲ್ಸ್ ಟೆಸ್ಟ್ಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
    ಕಲಬುರಗಿ ಜಿಲ್ಲಾಧಿಕಾರಿಗೆ ನಮ್ಮ ಆಸ್ಪತ್ರೆ ಲ್ಯಾಬ್ನಲ್ಲಿ ಆಂಟಿಂಜೆನ್ ಟೆಸ್ಟ್ ಮಾಹಿತಿ ನೀಡಿದಾಗ ಪ್ರಶಂಸೆ ವ್ಯಕ್ತಪಡಿಸಿದ್ದು, ಕರೊನಾ ವಾರಿಯರ್ಸ್ಗೆ ಆದ್ಯತೆ ಆಧಾರದ ಮೇಲೆ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದು ವಿವರಿಸಿದರು.


    ಆಂಟಿಂಜೆನ್ ಟೆಸ್ಟ್ಗೆ ಸಂಬಂಧಿಸದಿಂತೆ ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಮೊದಲ ಖಾಸಗಿ ಆಸ್ಪತ್ರೆ ಎನಿಸಿರುವುದು ಹೆಮ್ಮೆಯ ಸಂಗತಿ. ಕಡಿಮೆ ಸಮಯದಲ್ಲಿ ತುತರ್ು ಫಲಿತಾಂಶ ಬರಲಿದ್ದು, ರ್ಯಾಡಮ್ ಟೆಸ್ಟ್, ಕರೊನಾ ವಾರಿಯರ್ಸ್ಗೆ ಅನುಕೂಲ ಮತ್ತು ಆರ್ಟಿಪಿಸಿಆರ್ ಟೆಸ್ಟ್ನಲ್ಲಿರುವ ಒತ್ತಡ ಈ ಮೂಲಕ ಕಡಿಮೆ ಮಾಡಬಹುದಾಗಿದೆ.
    ಡಾ.ವಿಕ್ರಮ ಸಿದ್ದಾರೆಡ್ಡಿ, ಮುಖ್ಯಸ್ಥ,
    ಯುನೈಟೆಡ್ ಆಸ್ಪತ್ರೆ, ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts