More

    ಕೋವಿಡ್ ಕೇರ್ ಕೇಂದ್ರಕ್ಕೆ ಡಿಸಿ ಭೇಟಿ

    ಹುಕ್ಕೇರಿ: ಪಟ್ಟಣದ ಹೊರವಲಯದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಿರ್ಮಿಸಿದ ಕೋವಿಡ್ ಕೇರ್ ಸೆಂಟರ್ ಜಿಲ್ಲೆಯಲ್ಲಿ ಮಾದರಿ ಕಾಳಜಿ ಕೇಂದ್ರ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.

    ಸೋಮವಾರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಬೆಳವಿ ಗ್ರಾಮದ ರಾಜು ಕಲ್ಲಪ್ಪ ಭಜಂತ್ರಿ ಕೇಂದ್ರಕ್ಕೆ ಪೂರೈಸಿದ ಸೇಬು ಹಣ್ಣು ಮತ್ತು ಸ್ಯಾನಿಟೈಸರ್ ಅನ್ನು ಕೇಂದ್ರಕ್ಕೆ ಹಸ್ತಾಂತರಿಸಿದ ಅವರು, ಸ್ವಚ್ಛತೆ, ರುಚಿಕಟ್ಟಾದ ಊಟ ಮತ್ತು ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದರು. ದಾನಿಗಳು ನೀಡಿದ ವಿವರ ದಾಖಲಿಸಿ ಹಾಗೂ ಖರ್ಚು ವೆಚ್ಚ ಪಾರದರ್ಶಕವಾಗಿರಲಿ ಎಂದು ಸಲಹೆ ನೀಡಿದರು.

    ಗ್ರಾಮೀಣ ಭಾಗದಲ್ಲಿ ಸೋಂಕಿತರಾದವರು ಕೇಂದ್ರಕ್ಕೆ ಬಂದು ದಾಖಲಾಗುವಂತೆ ಮನವಿ ಮಾಡಿದರು. ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಸಿಪಿಐ ರಮೇಶ ಛಾಯಾಗೋಳ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್.ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಸಿದ್ನಾಳ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಬಿಇಒ ಮೋಹನ ದಂಡಿನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts