More

    ಕೋಳಿಫಾರ್ಮ್ ಮಾಲೀಕರಿಗೆ ನೋಟಿಸ್

    ದಾವಣಗೆರೆ: ತಾಲೂಕಿನ ವಿವಿಧ ಗ್ರಾಮಗಳ ಕೋಳಿ ಫಾರಂಗಳ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ಫಾರಂಗಳಲ್ಲಿನ ನ್ಯೂನತೆ ಸರಿಪಡಿಸಲು ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ.
    ಕೋಳಿಫಾರ್ಮ್ ಗಳ ತ್ಯಾಜ್ಯದಿಂದ ನೊಣಗಳ ಕಾಟ ಹೆಚ್ಚಿದ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳ ಫಾರಂಗಳಿಗೆ ಉಪ ನಿರ್ದೇಶಕರು, ತಾಂತ್ರಿಕ ಸಹಾಯಕರು, ಪಶುವೈದ್ಯ ತಜ್ಞರು ಹಾಗೂ ಪಶುವೈದ್ಯರೊಂದಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಭೇಟಿ ನೀಡಿದ್ದರು. ಫಾರ್ಮ್ ಗಳಲ್ಲಿ ತಾಂತ್ರಿಕವಾಗಿ ಹಲವು ಸಲಹಾ ಸೂಚನೆ ಒಂದು ವಾರದೊಳಗೆ ಅಳವಡಿಸಿಕೊಂಡು ನೊಣಗಳ ಹಾವಳಿ ನಿಯಂತ್ರಿಸಲು ಫಾರ್ಮ್ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.
    ಮರು ಪರಿಶೀಲನೆ ಸಂದರ್ಭದಲ್ಲಿ ನೊಣಗಳ ಹಾವಳಿ ನಿಯಂತ್ರಿಸಲು ವಿಫಲವಾದಲ್ಲಿ ಅಂತಹ ಕೋಳಿಫಾರ್ಮ್ ಮುಚ್ಚಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಸುಂಕದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts