More

    ಕೋಲಿ ಸಮಾಜದ ಎಸ್ಟಿಗೆ ಸೇರಿಸಿ

    ಯಾದಗಿರಿ: ರಾಜ್ಯದಲ್ಲಿನ ಬಹುಸಂಖ್ಯಾತ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ರಾಜ್ಯ ಮತ್ತು ಕೇಂದ್ರ ಸಕರ್ಾರ ನಿರ್ಲಕ್ಷ್ಯಿಸುತ್ತಿದೆ ಎಂದು ಟೋಕರಿ ಕೋಲಿ ಸಮಾಜದ ಸಂಘಟನಾ ಕಾರ್ಯದಶರ್ಿ ಉಮೇಶ ಮುದ್ನಾಳ್ ಆರೋಪಿಸಿದರು.
    ತಾಲೂಕಿನ ಹೋರುಂಚಾ ಗ್ರಾಮದಲ್ಲಿ ಆಯೋಜಿಸಿದ್ದ ಹಿರಿಯ ಮುತ್ಸದ್ದಿ ದಿ.ವಿಠ್ಠಲ್ ಹೇರೂರ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೇರೂರು ಕಂಡಿದ್ದ ಕನಸುಗಳನ್ನು ನಾವೆಲ್ಲರೂ ನನಸು ಮಾಡಲು ಮುಂದಾಗಬೇಕಿದೆ. ತಮ್ಮ ಜೀವಿತದ ಕೊನೆ ಕ್ಷಣದವರೆಗೂ ಸಮಾಜದ ಬಗ್ಗೆ ಚಿಂತಿಸದ ಚೇತನರಾಗಿದ್ದಾರೆ ಎಂದರು.

    ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಆಳಿದ ಎಲ್ಲ ಪಕ್ಷಗಳು ನಮ್ಮ ಸಮಾಜವನ್ನು ರಾಜಕೀಯವಾಗಿ ಬಳಸಿಕೊಂಡಿವೆ. ಯಾರೂ ಸಹ ನಮ್ಮ ನೋವಿಗೆ ಸ್ಪಂದಿಸಿಲ್ಲ. ಪ್ರಸ್ತುತ ಚಳಿಗಾಲದ ಅವೇಶನದಲ್ಲಿ ಸರ್ಕರ ಈ ಬಗ್ಗೆ ಗಂಭೀರವಾಗಿ ಚಚರ್ಿಸಿ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಪ್ರಮುಖರಾದ ಈಶ್ವರ ದಂಡಗುಂಡ, ತಿಮ್ಮಣ್ಣ ಹುಟ್ಟಿನ್, ಕಾಶಪ್ಪ ತಳವಾರ, ನಿಂಗಣ್ಣ ನಾಯ್ಕೋಡಿ, ಗಂಗಾಧರ ತಳವಾರ, ಹಣಮಂತ ಬೆಳಗೇರಿ, ದೇವೇಂದ್ರಪ್ಪ, ಶರಣಪ್ಪ, ತಿಮ್ಮಣ್ಣ, ಗ್ರಾಪಂ ಸದಸ್ಯರಾದ ಸಿದ್ರಾಮಪ್ಪ ಯರಗೋಳ, ಕಾಶಪ್ಪ ದೊಡ್ಡಮನಿ, ಚಂದಪ್ಪ ಡೊಳ್ಳೆನೋರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts