More

    ಕೋಟೆ ಮಾರಿಯಮ್ಮ ದೇಗುಲ ವಾರ್ಷಿಕೋತ್ಸವ

    ಮಡಿಕೇರಿ: ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ನಾಗಪ್ರತಿಷ್ಠ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ ಕೋಲ ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ಜರುಗಿತು.
    ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ವಾರ್ಷಿಕೋತ್ಸವದ ಪ್ರಯುಕ್ತ ಮುಂಜಾನೆಯಿಂದಲೇ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸ ಪೂಜೆ, ಕಳಶಾಭಿಷೇಕ ಸರ್ವಾಲಂಕಾರ, ಮಹಾಪೂಜೆ ಹಾಗೂ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಮತ್ತು ಮಂಗಳಾರತಿ, ವಿಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ ನಡೆಯಿತು. ನಾಗದರ್ಶನ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ಏರ್ಪಡಿಸಲಾಗಿತ್ತು. ಉಡುಪಿಯ ಪೆಲರ್ಂಪಾಡಿ ರಮಾನಂದ ಭಟ್ ನಾಗಪಾತ್ರಿಗಳಾಗಿ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಸಿಕೊಟ್ಟರು. ನಗರದ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts