More

    ಕೋಟಿ ಕಂಠ ಗಾಯನ: ಹಾಡು ಹೇಳಿ ಗಮನ ಸೆಳೆದ ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಕನ್ನಡದ ಮನಸುಗಳು ಸುಮಧುರವಾದ ಕೋಟ್ಯಂತರ ಕಂಠಗಳ ಸಮಾಗಮದಿಂದ ಕನ್ನಡೋತ್ಥಾನಕ್ಕೆ ಸಂಕಲ್ಪ ಮಾಡಿದಂತಿದೆ ಈ ಕನ್ನಡದ ಕೋಟಿ ಕಂಠ ಗಾಯನ ಕಾರ್ಯಕ್ರಮ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಇದೇ ವೇಳೆ ಸ್ವತಃ ಮೈಕ್ ಹಿಡಿದು ಹಾಡುಹೇಳಿ ಬಿ.ವೈ.ರಾಘವೇಂದ್ರ ಗಮನ ಸೆಳೆದರು.
    ಗುಳೇದಹಳ್ಳಿಯ ಕಾವಿ ಮಲ್ಲೇಶ್ವರ ಗ್ರಾಮಾಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಹಾಗೂ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ಅದ್ಭುತವಾದ ಕಾರ್ಯಕ್ರಮ, ವಿಶಿಷ್ಟವಾದ ಕಲ್ಪನೆ. ಕನ್ನಡ ನಮ್ಮ ಉಸಿರು, ಕನ್ನಡ ನಮ್ಮ ಹೆಸರು, ಕನ್ನಡ ನಮ್ಮ ಬದುಕ ುಹಾಗೂ ಬೆಳಕು. ಕನ್ನಡದ ಕೆಲಸ ಬಂದಾಗ ನಾವು ಮುನ್ನುಗ್ಗಬೇಕು ಎಂದು ಹೇಳಿದರು.
    ರಾಜ್ಯ ಸರ್ಕಾರದ ಈ ಕಾರ್ಯಕ್ರಮ ಕನ್ನಡದ ಬಗ್ಗೆ ಅರಿವು ಮತ್ತು ಅಭಿಮಾನವನ್ನು ಮೂಡಿಸುತ್ತಿದೆ. ಇದೊಂದು ವಿನೂತನವಾದ ಪ್ರಯತ್ನ. ಕನ್ನಡದ ನೆಲ, ಜಲ, ಭಾಷೆ ಸಂಸ್ಕೃತಿ ಸಂಸ್ಕಾರ ಮತ್ತು ಪರಂಪರೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಕನ್ನಡಿಗರು ಪರಭಾಷೆ ಮತ್ತು ಪರಧರ್ಮ ಸಹಿಷ್ಣುಗಳು. ಕನ್ನಡತನಕ್ಕೆ ಕೊಡಲಿಯೇಟು ಬೀಳುವ ಪರಿಸ್ಥಿತಿ ಬಂದರೆ ನಾವು ಕನ್ನಡಕ್ಕಾಗಿ ಎದ್ದು ನಿಲ್ಲಬೇಕು, ಕನ್ನಡವೇ ನಿತ್ಯ, ಕನ್ನಡವೇ ಸತ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts