More

    ಕೊಳ್ಳೇಗಾಲ ಬಸ್ ಟರ್ಮಿನಲ್ ಉದ್ಘಾಟನೆಗೆ ಆಗ್ರಹ

    ಕೊಳ್ಳೇಗಾಲ: ಕೊಳ್ಳೇಗಾಲ ಬಸ್ ಟರ್ಮಿನಲ್ ಉದ್ಘಾಟನೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ನಗರಸಭೆ ಬಿಜೆಪಿ ಸದಸ್ಯರು ಬಸ್ ನಿಲ್ದಾಣದ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದರು.

    ಮಾ.4ರಂದು ನಗರಸಭಾ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಸ್ ನಿಲ್ದಾಣ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ಉದ್ಘಾಟನೆ ಮಾಡಬಾರದೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಡೆ ಖಂಡಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದ್ದಾರೆ. ಈ ಕೂಡಲೇ ಉದ್ಘಾಟನೆ ದಿನವನ್ನು ನಿಗದಿಪಡಿಸಬೇಕು. ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ನಗರಸಭಾ ನಾಮ ನಿರ್ದೇಶಿತ ಸದಸ್ಯ ಮಧುಚಂದ್ರ ಮಾತನಾಡಿ, ಉದ್ಘಾಟನೆ ಹಂತದಲ್ಲಿರುವ ಬಸ್ ನಿಲ್ದಾಣ ಕಾಮಗಾರಿಯಲ್ಲಿ ಲೋಪವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ತಕರಾರು ಮಾಡುತ್ತಿದ್ದಾರೆ. ಇಷ್ಟು ದಿನ ಎಲ್ಲಿ ಹೊಗಿದ್ದರು. ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಸಿಲು, ಮಳೆ , ಚಳಿ ಎನ್ನದೆ ರಸ್ತೆಯಲ್ಲಿ ನಿಲ್ಲುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಉದ್ಘಾಟನೆ ದಿನ ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.

    ಮುಖಂಡ ರಮೇಶ್ ಮಾತನಾಡಿ, ಬಸ್ ನಿಲ್ದಾಣವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಬಿಸಿಲಿನ ತಾಪವೂ ಪ್ರಸ್ತುತ ಹೆಚ್ಚಾಗಿದ್ದು, ಜನರು ಹೈರಾಣಾಗುತ್ತಿದ್ದಾರೆ. ಆದ್ದರಿಂದ ನಾವು ಉಪವಾಸ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಈ ಹೋರಾಟದಲ್ಲಿ ಯಾರೊಬ್ಬರಿಗೂ ಸಮಸ್ಯೆಯಾದರೂ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.

    ನಗರಸಭಾ ಬಿಜೆಪಿ ಸದಸ್ಯರಾದ ಕವಿತಾ, ಮಧುಚಂದ್ರ, ನಾಸೀರ್ ಶರೀಫ್, ಚಿಂತು ಪರಮೇಶ್, ಮಧುಚಂದ್ರ, ಕವಿತಾ, ನಟರಾಜು , ಮುಖಂಡ ರಮೇಶ್, ಜಗದೀಶ್, ಸತೀಶ್, ಖಾಸಗಿ ಬಸ್ ಏಜೆಂಟರಾದ ನಾಗರಾಜು, ಶಿವಸ್ವಾಮಿ, ಮಹೀಂದ್ರ, ದೊರೆಸ್ವಾಮಿ, ಮಧು, ರಮೇಶ್, ಪೀಟರ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts