More

    ಕೊಳ್ಳೇಗಾಲದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ

    ಕೊಳ್ಳೇಗಾಲ: ಪಟ್ಟಣದ ವಿಶ್ವ ಚೇತನ ಕಾಲೇಜಿನಲ್ಲಿ ಭಾನುವಾರ ಎಚ್.ಕೆ.ಟ್ರಸ್ಟ್, ರೋಟರಿ ಕ್ಲಬ್, ರೋಟರಿ ಮಿಡ್‌ಟೌನ್ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ‘ನೇತ್ರ ನಿರಂತರ’ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

    ಶಿಬಿರಕ್ಕೆ ಎಚ್.ಕೆ. ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಚಾಲನೆ ನೀಡಿ ಮಾತನಾಡಿ, ಕೊಳ್ಳೇಗಾಲ ಹಾಗೂ ಹನೂರು ಭಾಗದಲ್ಲಿ ಬಡವರ ಧ್ವನಿ ಎಂದೇ ಹೆಸರು ಪಡೆದಿದ್ದ ಎಚ್.ಕೃಷ್ಣಸ್ವಾಮಿ ಅವರ ಆಶಯದಂತೆ ಬಡವರ ಸೇವೆ ಮಾಡುವ ಉದ್ದೇಶ ಹೊತ್ತು ನಮ್ಮ ಕುಟುಂಬ ನೇತ್ರ ತಪಾಸಣೆ ಸೇವೆಯನ್ನು ಮಾಡುತ್ತಿದೆ ಎಂದರು.
    ದೇಹದಲ್ಲಿ ಅತಿ ಮುಖ್ಯ ಹಾಗೂ ಸೂಕ್ಷ್ಮವಾದ ಅಂಗವೆಂದರೆ ಕಣ್ಣು. ಇತ್ತೀಚೆಗೆ ದೃಷ್ಟಿ ದೋಷದ ಸಮಸ್ಯೆ ಹೆಚ್ಚಿದ್ದು, ಬಡ ಜನರು, ಕೂಲಿ ಕಾರ್ಮಿಕರಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಪ್ರತಿ ತಿಂಗಳ ಎರಡನೇ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಸಾವಿರಾರು ಜನರು ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

    120 ರೋಗಿಗಳು ಭಾಗಿ: ಶಿಬಿರದಲ್ಲಿ 120 ರೋಗಿಗಳು ತಪಾಣೆಗೆ ಒಳಪಟ್ಟರು. ಈ ಪೈಕಿ 58 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

    ನಗರಸಭಾ ಮಾಜಿ ಸದಸ್ಯ ಜೆ.ಹರ್ಷ, ರೋಟರಿ ಮಿಡ್ ಟೌನ್ ಸಂಸ್ಥೆಯ ದಕ್ಷಿಣಾ ಮೂರ್ತಿ, ವೈದ್ಯರಾದ ಡಾ. ಸುಜಯ್, ಡಾ.ಗೋರಾಂಗ್, ವಿಜಯ್‌ಕುಮಾರ್ ಸಂಸ್ಥೆಯ ವ್ಯವಸ್ಥಾಪಕ, ರವೀಂದ್ರ, ಮಹಾದೇವ ನಾಯಕ. ಚೇತನ್ ರಾಜ್, ಮೋಹನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts