More

    ಕೊಬ್ಬರಿ ಖರೀದಿ ಸ್ಥಗಿತಕ್ಕೆ ರೈತರ ಅಸಮಾಧಾನ

    ಚಿತ್ರದುರ್ಗ: ನಿಗದಿದ ಗಾತ್ರಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕೆ ಖರೀದಿಸಿದ ಕೊಬ್ಬರಿ ಮೂರು ಲೋಡ್ ಲಾರಿ ಕೊಬ್ಬರಿ ರವಾನಿಸದೆ ಹೊಸ ದುರ್ಗ ಖರೀದಿ ಕೇಂದ್ರದಲ್ಲಿ ಇಡಲಾಗಿದೆ ಹಾಗೂ ಇಲ್ಲಿ ಕೊಬ್ಬರಿ ಖರೀದಿ ಸ್ಥಗಿತಗೊಳಿಸಲಾಗಿದೆ ಎಂದು ಆಕ್ಷೇಪಿಸಿ ರೈತರು ಡಿಸಿ ಟಿ.ವೆಂಕಟೇಶ್ ಅ ವರಿಗೆ ಗುರುವಾರ ಮನವಿ ಸಲ್ಲಿಸಿದರು.
    ಅಧಿಕ ತಾಪಮಾನದ ಈ ವಾತಾವರಣದಲ್ಲಿ ನಿಗಿದಿತ ಗಾತ್ರದಂತೆ ಶೇ.50 ಪ್ರಮಾಣದಲ್ಲಿ ರೈತರು ಕೊಬ್ಬರಿ ಮಾರಾಟ ಮಾಡಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದ ರೈತರು, ಖರೀದಿಗೆ ಗಾತ್ರದಲ್ಲಿ ವ್ಯತ್ಯಾಸವಿದ್ದರೂ ಗುಣಮಟ್ಟವನ್ನು ಗಣನೆಗೆ ತಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
    ಖರೀದಿ ಮತ್ತು ತೂಕಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಸಡಿಲಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.22 ರಂದು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸಮಸ್ಯೆ ಇತ್ಯರ್ಥವಾಗದಿದ್ದರೆ 23ರಿಂದ ಹೊಸದುರ್ಗ ತಾಲೂಕು ಕಚೇ ರಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
    ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ,ಡಿಎಸ್‌ಹಳ್ಳಿ ಮಲ್ಲಿಕಾರ್ಜುನ,ಬೈಲಪ್ಪ,ಮುರಿಗೇಂದ್ರಪ್ಪ,ಶಿವಕುಮಾರ್,ಕರಿ ಬಸಪ್ಪ,ರಮೇಶ್,ಅಪ್ಪಸ್ವಾಮಿ,ಆರ್.ರಾಮಚಂದ್ರಪ್ಪ, ಚಂದ್ರಶೇಖರಪ್ಪ,ಗೋವಿಂದಪ್ಪ ಪವನ್,ಬೋರೇಶ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts