More

    ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಗೆ ಕೆ.ಬಿ.ಸುಬ್ರಹ್ಮಣ್ಯ ನೂತನ ಅಧ್ಯಕ್ಷ

    ಕೊಪ್ಪ: ಸಹಕಾರ ಸಾರಿಗೆ ಸಂಸ್ಥೆ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ.ಬಿ.ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಅವಿರೋಧವಾಗಿ ಆಯ್ಕೆಯಾದರು. ಜು.11ರಂದು 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.

    ನೂತನ ಅಧ್ಯಕ್ಷ ಕೆ.ಬಿ.ಸುಬ್ರಹ್ಮಣ್ಯ ಮಾತನಾಡಿ, 2020ರ ಫೆ.16ರಂದು ಸಂಸ್ಥೆ ಮುಚ್ಚಿದ ನಂತರ ಪುನರಾರಂಭಕ್ಕೆ ವಿವಿಧ ರೀತಿಯ ಹೋರಾಟಗಳನ್ನು ನಡೆಸಿದ್ದೇವೆ. ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್​ಫೋರ್ಟ್ ಆಂಡ್ ಜನರಲ್ ಮಜ್ದೂರ್ ಸಂಘದ ನೇತೃತ್ವದಲ್ಲಿ ನಿರಂತರ ಕಾನೂನು ಹೋರಾಟ ನಡೆಸಿದ್ದು ಅದರ ಫಲವಾಗಿ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ ಎಂದರು.

    ಮುಂದಿನ ದಿನಗಳಲ್ಲಿ ಸಂಸ್ಥೆಗೆ ಆರ್ಥಿಕ ನೆರವು ನೀಡಲು ಸರ್ಕಾರದ ಮುಂದೆ ಬೇಡಿಕೆ ಇಡುತ್ತೇವೆ. ಶಾಸಕ ಟಿ.ಡಿ.ರಾಜೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸರ್ಕಾರದ ಜತೆ ಮಾತುಕತೆ ನಡೆಸಿ ಸಂಸ್ಥೆಯ ಪುನಶ್ಚೇತನಕ್ಕೆ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಅವರಲ್ಲಿ ಮನವಿ ಮಾಡುತ್ತೇವೆ ಎಂದರು.

    ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್​ಫೋರ್ಟ್ ಆಂಡ್ ಜನರಲ್ ಮಜ್ದೂರ್ ಸಂಘದ ಅಧ್ಯಕ್ಷ ಎಚ್.ಆರ್.ಸಂಜೀವ ಮಾತನಾಡಿ, ಸಹಕಾರ ಸಾರಿ ಸಂಸ್ಥೆಯ ಬಸ್​ಗಳು ರಸ್ತೆಯಲ್ಲಿ ಸಂಚಾರ ನಡೆಸುವವರೆಗೆ ಹೋರಾಟ ನಿರಂತರ ನಡೆಯತ್ತದೆ ಎಂದರು.

    ಸರ್ಕಾರ ಎಲ್ಲ ಬಸ್​ಗಳ ರಸ್ತೆ ತೆರಿಗೆ ಮನ್ನಾ ಮಾಡಬೇಕು. ಸಂಸ್ಥೆಯ ಪುನಶ್ಚೇತನಕ್ಕೆ 12 ಕೋಟಿ ರೂ. ಅನುದಾನ ನೀಡಬೇಕು. ಅನುದಾನ ನೀಡಲು ಸಾಧ್ಯವಾಗದಿದ್ದರೆ ರಾಜ್ಯ ಅಪೆಕ್ಸ್ ಬ್ಯಾಂಕ್ ಸಂಸ್ಥೆಯ ಎಲ್ಲ ಸ್ವತ್ತನ್ನು ವಶದಲ್ಲಿಟ್ಟುಕೊಂಡು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸಬೇಕು ಎಂದು ಒತ್ತಾಯಿಸಿದರು.

    ಸಂಸ್ಥೆ ನೂತನ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಾ, ಸದಸ್ಯರಾದ ಎನ್.ಎಂ.ನಾಗೇಶ್, ಎಂ.ಸಿ.ಕುಮಾರ್, ಪಿ.ಎಂ.ಅಬ್ದುಲ್ ಅಜೀಜ್, ಕೆ.ಎ.ಕೇಶವಮೂರ್ತಿ, ಕೆ.ಡಿ.ಚೇತನ್, ಎಂ.ಹರೀಶ್, ಎ.ಬಿ.ಸುಮಾ, ಎ.ಜಿ.ಜಾನಕಿ, ಎಸ್.ಸಂದೀಪ್, ಎಸ್.ರಾಘವೇಂದ್ರ, ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್​ಫೋರ್ಟ್ ಆಂಡ್ ಜನರಲ್ ಮಜ್ದೂರ್ ಸಂಘದ ಉಪಾಧ್ಯಕ್ಷ ಕಟ್ಟೇಗೌಡ, ಸಿ.ಬಿ.ರಮೇಶ್ ಶಾಸ್ತ್ರೀ, ಹಾಲಪ್ಪಗೌಡ, ರಘುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts