More

    ಕೊಡೇಕಲ್ ಬಸವೇಶ್ವರ ಜಾತ್ರೆ ಯಶಸ್ಸಿಗೆ ಶ್ರಮಿಸಿ

    ಕೊಡೇಕಲ್ : ಕಾಲಜ್ಞಾನಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನ.೨೮ರಿಂದ ಆರಂಭವಾಗಿ ಐದು ದಿನಗಳ ಕಾಲ ನಡೆಯುವ ಈ ಮಹೋತ್ಸವವನ್ನು ಎಲ್ಲರೂ ಸೇರಿ ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಸವ ಪೀಠಾಧಿಪತಿ ಮಹಲಿನಮಠದ ಶ್ರೀ ವೃಷಭೇಂದ್ರ ಅಪ್ಪ ಹೇಳಿದರು.

    ಗ್ರಾಮದ ಮಹಲಿನಮಠದಲ್ಲಿ ಗುರುವಾರ ಹಮ್ಮಿಕೊಂಡ ಹಮ್ಮಿಕೊಂಡ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾವೈಕ್ಯತೆಯ ಹರಿಕಾರ ಕೊಡೇಕಲ್ ಬಸವಣ್ಣನವರ ಜಾತ್ರೆ ವರ್ಷದಲ್ಲಿ ಎರಡು ಬಾರಿ ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷ ನ. ೨೮ ಮಂಗಳವಾರ ಬೆಳಗ್ಗೆ ನಗಾರಿ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು.

    ಅಂದು ರಾತ್ರಿ ಕಳಸಾರೋಹಣ, ನ.೨೯ರಂದು ಬೆಳಗ್ಗೆಯಿಂದ ಸಂಜೆವರೆಗೆ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ ನಡೆಯಲಿದೆ. ಐದು ದಿನಗಳ ಕಾಲ ಜಾತ್ರೆಯಲ್ಲಿ ದೂರದಿಂದ ಆಗಮಿಸುವ ಭಕ್ತರಿಗೆ ದಾಸೋಹ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

    ಮಹೋತ್ಸವ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ, ತಹಸೀಲ್ದಾರ್ ಬಸಲಿಂಪ್ಪ ನೈಕೋಡಿ ಮಾತನಾಡಿ, ಕಾಲಜ್ಞಾನಿ ಶ್ರೀ ಬಸವೇಶ್ವರ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿಬ್ಬಂದಿ ಸಭೆ ಮಾಡಲಾಗಿದ್ದು, ಗ್ರಾಮದ ಜಕಣಿ ಬಾವಿ ಬಳಿಯ ಸ್ನಾನಗೃಹಗಳ ಸ್ವಚ್ಛತೆ, ಪ್ಯಾಟಿ ದೇವಸ್ಥಾನದ ಪಕ್ಕದಲ್ಲಿರುವ ಶೌಚಗೃಹ ಸ್ವಚ್ಛತೆ ಮತ್ತು ದೇವಸ್ಥಾನದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ಜಾತ್ರೆಗೆ ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಸೂಚನೆ ನೀಡಿದ್ದು, ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಜತೆಗೆ ಆತಿಥ್ಯ ನೀಡುವಂತೆ ಮನವಿ ಮಾಡಿದರು.

    ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ವೀರಸಂಗಪ್ಪ ಹಾವೇರಿ, ಸೋಮಲಿಂಗಪ್ಪ ದೋರಿ, ಮೋಹನ ಪಾಟೀಲ್, ಬಸಣ್ಣ ಹಳೇ ಪೂಜಾರಿ, ಸಂಗಣ್ಣ ಪೂಜಾರಿ, ಆದಪ್ಪ ತೋಟಗೇರ, ಪಿಡಿಒ ಸಂಗಣ್ಣ ನಾಗಬೇನಾಳ, ಗ್ರಾಮ ಲೇಖಪಾಲಕ ದೇವು ಚವ್ಹಾಣ್, ಮಾಳಪ್ಪ ಪೂಜಾರಿ, ಹಣಮಯ್ಯ ಕೆಂಡದ, ಬಸವರಾಜ ಕೆಂಡದ, ಚನ್ನಪ್ಪಗೌಡ ರಾಜನಕೋಳೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts