More

    ಕೈ ಹಿಡಿಯದ ಕುಲಕಸುಬು

    ಕೊಡೇಕಲ್ : ಒಂದು ಕಾಲದಲ್ಲಿ ಪ್ರತಿ ಮನೆಗೆ ಬೇಕಿದ್ದ ಒಳ್ಕಲ್ (ಒಳಕಲ್ಲು)-ಬೀಸುವ ಮತ್ತು ರೊಟ್ಟಿ ಮಾಡುವ ಕಲ್ಲುಗಳಿಗೆ ಇಂದು ಯಂತ್ರಗಳ ಭರಾಟೆಯಲ್ಲಿ ಯಾರೂ ಕೇಳದಂತಾಗಿದೆ. ಇದರಿಂದಾಗಿ ಇವುಗಳನ್ನು ತಯಾರಿಸುವ ಕುಲ ಕಸುಬುದಾರ (ಕಲ್ಲು ವಡ್ಡರ)ರ ಬದುಕು ಶೋಚನೀಯವಾಗಿದೆ.

    ಈ ಮೊದಲು ಮನೆಯಲ್ಲಿ ನಿತ್ಯ ಅವುಗಳನ್ನು ಬಳಸುತ್ತಿದ್ದರು. ಆದರೆ ಇಂದು ಕೇವಲ ಸಂಪ್ರದಾಯಕ್ಕೆ ಬಳಸಲು ಸೀಮಿತವಾಗಿವೆ. ಹೀಗಾಗಿ ನಾವು ತಯಾರಿಸಿದ ಒಳ್ಕಲ್ ಮತ್ತು ಬೀಸುವ ಕಲ್ಲುಗಳನ್ನು ಯಾರೂ ಕೇಳದಂತಾಗಿದೆ. ನಮ್ಮ ಕುಲ ಕಸುಬಿನಿಂದ ಯಾವುದೇ ರೀತಿಯ ಆದಾಯ ಇಲ್ಲದ್ದರಿಂದ ದೂರ ಉಳಿಯುವಂಥ ಸ್ಥಿತಿ ಬಂದಿದೆ ಎಂದು ಕಲ್ಲು ಕಟಿಯುವ ಶಂಕರ ವಡ್ಡರ ಗೋಳಿಡುತ್ತಾರೆ.

    ಒಳ್ಕಲ್, ರೊಟ್ಟಿ ಕಲ್ಲು ಮತ್ತು ಬೀಸುವ ಕಲ್ಲುಗಳನ್ನು ತಯಾರಿಸಿ ಮಾರಾಟ ಮಾಡಿ ಬರುವ ಹಣದಿಂದ ಜೀವನ ಸಾಗಿಸುತ್ತಿರುವ ಭೋವಿ ಸಮುದಾಯದ ಕುಟುಂಬಗಳು ಇಂದು ಆಧುನಿಕ ಭರಾಟೆಗೆ ಸಿಲುಕಿ ನಲುಗುವಂತಾಗಿದೆ.

    ಇಳಕಲ್, ಗೋವಾ, ವಿಜಯಪುರಗಳಿಂದ ಸಾವಿರಾರು ರೂಪಾಯಿ ನೀಡಿ ಕಲ್ಲು ತಂದು ರೂಪ ನೀಡಲಾಗುತ್ತದೆ. ನಂತರ ಮಾರಾಟ ಮಾಡಲು ತಿಂಗಳುಗಟ್ಟಲೆ ಕಾಯಬೇಕಿದೆ. ಹಿಂದಿನ ಕಾಲದಲ್ಲಿ ಒಳಕಲ್ಲು ಮತ್ತು ಬೀಸುವ ಕಲ್ಲು ದಿನಬಳಕೆ ವಸ್ತುಗಳಾಗಿದ್ದವು. ಆದರೆ ಇಂದು ಕೇವಲ ಸಂಪ್ರದಾಯಕ್ಕೆ ಎಂಬAತೆ ಹೊಸ ಮನೆ ಕಟ್ಟಿದವರು ಖರೀದಿಸುತ್ತಿದ್ದಾರೆ. ಪ್ರತಿ ಮನೆಯಲ್ಲಿ ಮಿಕ್ಸರ್ ಮತ್ತು ಗ್ರೆÊಂಡರ್ ಬಳಕೆಯಿಂದ ಭೋವಿ ವಡ್ಡರ ಸಮುದಾಯ ಅಕ್ಷರಶಃ ಬೀದಿಗೆ ಬರುವಂತಾಗಿದೆ. ಇಂತಹ ಶ್ರಮಿಕ ಸಮುದಾಯಕ್ಕೆ ಸರ್ಕಾರ ಸಹಾಯಹಸ್ತ ಚಾಚುವ ಅಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts