More

    ಕೈಗಾರಿಕೆ ವಸಾಹತು ಸ್ಥಾಪನೆಗೆ ಮನವಿ

    ನರೇಗಲ್ಲ: ಪಟ್ಟಣದಲ್ಲಿ ಸಣ್ಣ ಕೈಗಾರಿಕೆ ವಸಾಹತು ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿಯವರಿಗೆ ಪಟ್ಟಣದ ನಾಗರಿಕರು ಶನಿವಾರ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.

    ಮನವಿ ಸಲ್ಲಿಸಿ ಮಾತನಾಡಿದ ಉದ್ಯಮಿ ಬಸವರಾಜ ವಂಕಲಕುಂಟಿ, ಪಟ್ಟಣವು ವೇಗವಾಗಿ ಬೆಳೆಯುತ್ತಿದ್ದು, ಸಣ್ಣ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಹೊಂದಿದೆ. ಸಣ್ಣ ಕೈಗಾರಿಕೆಗೆ ಅವಶ್ಯಕವಾದ ಭೂಮಿ, ನೀರು, ವಿದ್ಯುತ್ ಸೇರಿ ಇತರೆ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಕೈಗಾರಿಕೆ ವಸಾಹತು ಸ್ಥಾಪಿಸಬೇಕು. ಆ ಮೂಲಕ ಈ ಭಾಗದ ವೃತ್ತಿ ಕೌಶಲ ಹೊಂದಿದ ವಿದ್ಯಾವಂತ ಹಾಗೂ ಉದಯೋನ್ಮುಖ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಲಿವೆ. ಹೀಗಾಗಿ ನಿಗಮದಿಂದ ನರೇಗಲ್ಲನಲ್ಲಿ ಕೈಗಾರಿಕೆ ವಸಾಹತು ಸ್ಥಾಪಿಸಲು ಮುಂದಾಗಬೇಕು ಎಂದರು.

    ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕಳಕಪ್ಪ ಬಂಡಿ, ಸ್ಥಳೀಯ ಪಪಂ ಹಾಗೂ ಸಣ್ಣ ಕೈಗಾರಿಕೆ ನಿಗಮ ಸೇರಿ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ರ್ಚಚಿಸಿ ವಸಾಹತು ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಈ ವೇಳೆ ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ನಿಂಗಪ್ಪ ಕಣವಿ,ಯಲ್ಲಪ್ಪ ಮಣ್ಣೋಡ್ಡರ, ಮೌನೇಶ ಹೊಸಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts