More

    ಕೈಗಾರಿಕೆಗಳಿಂದ ಜಿಡಿಪಿ ವೃದ್ಧಿಗೆ ಬಲ  – ಜಿಲ್ಲಾಧಿಕಾರಿ ವೆಂಕಟೇಶ್ – ಉದ್ಯಮ ಕುರಿತ ಕಾರ್ಯಾಗಾರ

    ದಾವಣಗೆರೆ: ಖಾಸಗಿ ಕ್ಷೇತ್ರದ ಕೈಗಾರಿಕೆಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವ ಅವಕಾಶವಿದೆ. ಇದರಿಂದ ಸ್ಥಳೀಯ ಉತ್ಪಾದನೆ ಜತೆಗೆ ದೇಶದ ಜಿಡಿಪಿ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
    ದಲಿತ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ನಗರದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಉದ್ಯಮ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಸಾಲ ಸೌಲಭ್ಯ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ದೇಶದಲ್ಲಿ ಜಿಡಿಪಿ ಅಭಿವೃದ್ಧಿಯಾದಂತೆ ಪ್ರತಿ ವ್ಯಕ್ತಿಯ ತಲಾದಾಯವೂ ಹೆಚ್ಚಾಗಲಿದೆ. ಅಲ್ಲದೆ ಸಮಾಜದ ಪ್ರತಿಯೊಬ್ಬರೂ ಉದ್ಯಮದತ್ತ ತೊಡಗಲು ಅನುಕೂಲವಾಗಲಿದೆ ಎಂದು ಹೇಳಿದರು.
    ಒಂದು ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರಲು, ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಕೈಗಾರಿಕೆಗಳ ಅವಶ್ಯಕತೆ ಹೆಚ್ಚಿದೆ. ಸರ್ಕಾರಿ ಸಂಸ್ಥೆಯಲ್ಲಿ ಕೆಲವು ಜನರಿಗೆ ಉದ್ಯೋಗ ಸಿಗಬಹುದು. ಆದರೆ ಕೈಗಾರಿಕೆಗಳಲ್ಲಿ ವಿಪುಲ ಅವಕಾಶವಿದೆ ಎಂದು ತಿಳಿಸಿದರು.
    ಶಿಕ್ಷಣ ಮತ್ತು ಕೌಶಲ ಒಬ್ಬ ವ್ಯಕ್ತಿಯ ಎರಡು ಕಣ್ಣುಗಳು. ಇವೆರಡರಿಂದ ಸಮಾಜಕ್ಕೆ ಕೊಡುಗೆ ನೀಡಬಹುದು. ಕೌಶಲದಿಂದ ಪ್ರತಿ ವ್ಯಕ್ತಿಯೂ ಉದ್ಯಮಿಯಾಗಿ ಪರಿವರ್ತನೆ ಆಗಬಹುದು. ತಲೆತಲಾಂತರದಿಂದ ಶೋಷಣೆಗೆ ಒಳಗಾದವರಿಗೆ ಕೌಶಲ ಕಲ್ಪಿಸುವ ಕನಸು ಇಟ್ಟುಕೊಂಡು ಅದನ್ನು ಅನುಷ್ಠಾನ ಮಾಡುತ್ತಿರುವ ಡಿಐಸಿಸಿಐ ಸಂಸ್ಥೆಯು ದೇಶದ ಶಕ್ತಿ ತುಂಬಿದೆ ಎಂದು ಹೇಳಿದರು.
    ಡಿಐಸಿಸಿಐ ಸಂಸ್ಥೆಯ ಬುಡಕಟ್ಟು ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಿ. ರಾಜಾನಾಯಕ ಅಧ್ಯಕ್ಷತೆ ವಹಿಸಿದ್ದರು. ಎಸ್ಸಿ-ಎಸ್ಟಿ ಹಬ್ ಶಾಖಾ ಮುಖ್ಯಸ್ಥ ಎ. ಕೋಕಿಲಾ, ಕೆಎಸ್‌ಎಫ್‌ಸಿ ಶಾಖಾ ಮುಖ್ಯಸ್ಥ ಮಾಲತೇಶ್ ಬಿ. ಹಮ್ಮಿಗಿ, ಡಿಐಸಿಸಿಐ ಜಿಲ್ಲಾಧ್ಯಕ್ಷ ಮಂಜುನಾಥ ವೈ. ಕಬ್ಬೂರು, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರಿ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಂ, ಬೇಬಿ ಸುನೀತಾ, ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts