More

    ಕೇವಲ ಒಕ್ಕಲಿಗರಿಗಾಗಿ ಜೆಡಿಎಸ್ ಇಲ್ಲ: ಜನತಾ ಸಂಗಮ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿಕೆ

    ಕೊರಟಗೆರೆ: 2018ರ ಲೋಕಸಭೆ ಚುನಾವಣೆ ಸಮಯದಲ್ಲಿ ಇದೇ ನನ್ನ ಕೊನೇ ಚುನಾವಣೆ ಎಂದು ೋಷಿಸಿದ್ದರಿಂದ ಸ್ಪರ್ಧಿಸುವಂತಾಯಿತು. ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ನೋಡಿದ್ದೇನೆ. ಗೆದ್ದಾಗ ಹಿಗ್ಗ್ಲಿ, ಸೋತಾಗಲೂ ಕುಗ್ಗ್ಲಿ, ನನ್ನ ಮನಸ್ಥಿತಿಯೇ ಅಂತಹದ್ದು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.

    ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜನತಾ ಸಂಗಮ ಮತ್ತು ಜೆಡಿಎಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ನಾನು ಸೋತೆ ಎಂದು ಎದೆ ಗುಂದ್ಲಿ, ಮತ್ತೆ ಅದೀಗ ಇತಿಹಾಸ. ವಿದ್ಯಾವಂತ, ಬುದ್ದಿವಂತ, ದಕ್ಷ ಅಧಿಕಾರಿ, ಅದರಲ್ಲೂ ಹಿಂದುಳಿದ ವರ್ಗದ ರೈತ ಕುಟುಂಬದಿಂದ ಬಂದವರಿಗೆ ಪರಿಷತ್ ಟಿಕೆಟ್ ನೀಡಿದ್ದೇವೆ. ಗೆಲ್ಲಿಸಿ ಜನಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದರು.

    ಕೇವಲ ಒಕ್ಕಲಿಗರಿಗಾಗಿ ಜೆಡಿಎಸ್ ಇಲ್ಲ. ಎಲ್ಲ ಸಮುದಾಯದ, ಹಿಂದುಳಿದ ವರ್ಗಗಳ ನೇತಾರರ ಪಕ್ಷ ಇದಾಗಿದ್ದು, ವಿರೋಧ ಪಕ್ಷದವರು ಬಳಸುವಂತಹ ಜಾತಿ ಎನ್ನುವ ಟ್ರಂಪ್ ಕಾರ್ಡ್‌ಗೆ ಮನ್ನಣೆ ನೀಡಬೇಡಿ. ಪಕ್ಷದ ಸಿದ್ಧಾಂತಕ್ಕೆ ಮನ್ನಣೆ ನೀಡಿ ಎಂದು ಮನವಿ ಮಾಡಿದರು.

    ನನ್ನ ಚುನಾವಣೆ, ನನ್ನ ಸೋಲು ಎ್ಲವೂ ಮುಗಿದ ಅಧ್ಯಾಯ. ಯಾರನ್ನೋ ಗೆಲ್ಲಿಸಲು ನಾವು ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇ್ಲ, ಜಾತಿ ಬೆಂಬಲಿಸುವ ಅವಶ್ಯಕತೆಯೂ ಇ್ಲ, ನಮ್ಮದು ಜಾತ್ಯತೀತ ಜನತಾದಳ ಎ್ಲ ಸಮುದಾಯದವರು ನಮಗೆ ಬೇಕು, ಯಾರ ಮಾತಿಗೂ ಕಿವಿ ಕೊಡಬೇಡಿ, ಸಮುದಾಯಕ್ಕೆ ಜೋತು ಬೀಳದೆ ನಮ್ಮ ಅಭ್ಯರ್ಥಿ ಪರವಾಗಿ ಮತಚಲಾಯಿಸಿ.
    ದೇವೇಗೌಡ, ಜೆಡಿಎಸ್ ವರಿಷ್ಠ

    ಜೆಡಿಎಸ್‌ನಲ್ಲಿಯೇ ನನ್ನ ಭವಿಷ್ಯ: ನನ್ನ ಬಗ್ಗೆ ಇ್ಲಸ್ಲದ ವದಂತಿಗಳನ್ನು ಅಬ್ಬಿಸುತ್ತಿದ್ದಾರೆ, ನಾನು ಯಾರ ಪರವಾಗಿಯೂ ಕೆಲಸ ಮಾಡುವುದ್ಲಿ, ನಾನು ಕೆಲಸ ಮಾಡುವುದು ಜೆಡಿಎಸ್‌ಗಾಗಿ ಮತ್ತು ನನ್ನ ರಾಜಕೀಯ ಉನ್ನತಿಗೆ ಕಾರವಾಗಿರುವ ಪಕ್ಷಕ್ಕೆ, ನನ್ನ ರಾಜಕೀಯ ಭವಿಷ್ಯ ಏನೇ ಇದ್ದರೂ ಜೆಡಿಎಸ್‌ನಲ್ಲಿಯೇ ಎಂದು ಮಾಜಿ ಶಾಸಕ ಪಿ.ಆರ್ ಸುಧಾಕರ್‌ಲಾಲ್ ಹೇಳಿದರು.

    ಜನರ ಸೇವೆ ಮಾಡಬೇಕು ಎನ್ನುವ ಮಹದಾಸೆಯಿಂದ ಸರ್ಕಾರಿ ಸೇವೆ ಬಿಟ್ಟು ಬಂದಿದ್ದೇನೆ,
    ಜೆಡಿಎಸ್ ಸಿದ್ಧಾಂತಗಳಿಗೆ ತಕ್ಕಂತೆ ರಾಜಕೀಯ ಜೀವನ ಆರಂಭ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ಪ್ರಾರಂಭ ಮತ್ತು ಅಂತ್ಯ ಜೆಡಿಎಸ್‌ನಲ್ಲಿಯೇ ಇರುತ್ತದೆ.
    ಅನಿಲ್ ಕುಮಾರ್ ಅಭ್ಯರ್ಥಿ

    ಗೌಡರಿಗೆ ತುಮಕೂರಿನ ಮೇಲೆ ಪ್ರೀತಿ: ದೇವೇಗೌಡರನ್ನು ಲುವಾಗಿ ಪರಿಗಣಿಸಬೇಡಿ, 88 ವರ್ಷ ವಯಸ್ಸಿನಲ್ಲಿಯೂ ಪಕ್ಷವನ್ನು ಕಟ್ಟುವ ಹುರುಪು, ತಾಕತ್ತು ಅವರಿಗಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ತಿಳಿಸಿದರು. 1962 ರಿಂದ 1999 ರವರೆಗೆ ಹಾಸನ ಜನ ಸತತವಾಗಿ ಗೌಡರಿಗೆ ಆಶೀರ್ವಾದ ಮಾಡುತ್ತ ಬಂದಿದ್ದರು. ನಂತರ ಒಮ್ಮೆ ಸೋಲಾಯಿತು. ಅಂದಿನಿಂದ ಗೌಡರು ಹಾಸಕ್ಕೆ ಮತ್ತೆ ಕಾಲಿಡಲ್ಲಿ, ಕನಕಪುರ ಕ್ಷೇತ್ರದಿಂದ ಗೆದ್ದರು, ಆದರೆ ತುಮಕೂರು ಕ್ಷೇತ್ರದಲ್ಲಿ ಕಳೆದ ಬಾರಿ ಸೋತರೂ ಗೌಡರು ಮತ್ತೆ ತುಮಕೂರಿಗೆ ಬಂದು ಮತಯಾಚನೆ ಮಾಡುತ್ತಿದ್ದಾರೆ ಎಂದರೆ ಇದು ಅವರಿಗೆ ತುಮಕೂರಿನ ಜನರ ಮೇಲೆ ಇರುವ ಪ್ರೀತಿಗೆ ಸಾಕ್ಷಿ ಎಂದರು.

    ಯಾರೇ ಹಣ ಕೊಟ್ಟರೂ ತೆಗೆದುಕೊಳ್ಳಿ, ನಮಗೆ ಮತಹಾಕಿ: ನಮ್ಮ ತಾತನ ಸೋಲನ್ನು ಮರೆಸಲು ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕು. ತುಮಕೂರು ಗ್ರಾಮಾಂತರದಲ್ಲಿ ಎಂಎಲ್‌ಎ ಆಗಿದ್ರೂ ಕೊರಟಗೆರೆ ಕ್ಷೇತ್ರವನ್ನು ಮರೆಯೊದಕ್ಕೆ ಆಗ್ಲ. ಇದು ನಮ್ಮ ಕುಟುಂಬದ ಕ್ಷೇತ್ರ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಹೇಳಿದರು.
    ಕಾಂಗ್ರೆಸ್ ಅಭ್ಯರ್ಥಿ ರಾಮ್ರಾಜ್ ಪಂಚೆ, ಚೆಡ್ಡಿ, ಸೀರೆ, ಗಡಿಯಾರ ಕೊಡುತ್ತಿದ್ದಾರೆ, ಬಿಜೆಪಿಯಲ್ಲಿ ಇಬ್ಬರು ಸಚಿವರಿದ್ದಾರೆ. ಆದರೂ ಹೊರಗಿನಿಂದ ಅಭ್ಯರ್ಥಿ ಕರೆದುಕೊಂಡು ಬಂದಿದ್ದಾರೆ ಎಂದರು. ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ಹೊರಗಿನಿಂದ ಅಭ್ಯರ್ಥಿ ಕರೆದುಕೊಂಡು ಬಂದಿದೆ. ಬಿಜೆಪಿ ಕ್ಯಾಂಡಿಡೇಟ್ ಕಡೆಯವ್ರ ಹಣ ಕೊಟ್ಟು ನಿಮ್ಮ ಹೆಸರು ಬರೆದುಕೊಳ್ಳುತ್ತಿದ್ದಾರೆ. ಅವರು ಸೋತರೆ ನಿಮ್ಮ ಮೇಲೆ ಬಂದು ಬೀಳುತ್ತಾರೆ, ಎಚ್ಚರವಾಗಿರಿ. ಯಾರೇ ಹಣ ಕೊಟ್ಟರೂ ತೆಗೆದುಕೊಳ್ಳಿ, ಆದರೆ ನಮ್ಮ ಅಭ್ಯರ್ಥಿಗೆ ವೋಟು ಹಾಕಿ ಎಂದರು.

    ಶಾಸಕ ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ, ತಾಲೂಕು ಕಾರ್ಯಾಧ್ಯಕ್ಷ ಜೆ.ಎನ್.ನರಸಿಂಹರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಮಹಾಲಿಂಗಪ್ಪ, ತಾಲೂಕು ವಕ್ತಾರ ಟಿ.ಲಕ್ಷ್ಮೆಶ್, ಜಿಪಂ ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಸದಸ್ಯ ಜಿ.ಆರ್.ಶಿವರಾಮಯ್ಯ, ಪಪಂ ಅಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಸದಸ್ಯರಾದ ಕೆ.ಎನ್.ಲಕ್ಷ್ಮಿನಾರಾಯಣ್, ಪುಟ್ಟನರಸಪ್ಪ, ಮುಖಂಡರಾದ ಬೆಳ್ಳಿ ಲೋಕೇಶ್, ಅಂದಾನಪ್ಪ, ರಮೇಶ್, ಕಲೀಂ ಹುಲ್ಲಾ, ಸೈುಲ್ಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts