More

    ಕೆ.ಗುಡಿ ವಲಯದಲ್ಲಿ ಮಕ್ಕಳಿಗೆ ಮ್ಯಾರಥಾನ್

    ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕೆ.ಗುಡಿ ವಲಯದಲ್ಲಿ ಶುಕ್ರವಾರ 68ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ನಡೆಯಿತು.

    ಇದರ ನಿಮಿತ್ತ ಶಾಲಾ ಮಕ್ಕಳಿಗೆ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ಮಕ್ಕಳು ಕೊಂಟುಗುಡಿ ದೇಗುಲದಿಂದ ಹೊಂಡರಬಾಳು ಚೆಕ್‌ಪೋಸ್ಟ್‌ವರೆಗೆ ಮಕ್ಕಳು ಮ್ಯಾರಥಾನ್ ಓಟ ನಡೆಸಿದರು. ಜತೆಗೆ ಅರಣ್ಯದಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ತೆಗೆಯಲಾಯಿತು.

    ಕೆ.ಗುಡಿ ವಲಯದ ಆರ್‌ಎಫ್‌ಒ ವಿನೋದ್‌ಗೌಡ ಮಾತನಾಡಿ, ಪರಿಸರ ಜಾಗೃತಿ ನಮ್ಮೆಲ್ಲರ ಕರ್ತವ್ಯವಾಗಿದೆ. ಕಾಡು ಉಳಿದರೆ ನಾಡು ಉಳಿಯುತ್ತದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇವರಿಗೆ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಇದರೊಂದಿಗೆ ವನ್ಯಪ್ರಾಣಿಗಳನ್ನು ಸಂರಕ್ಷಿಸುವ ಕೆಲಸವನ್ನು ಮಾಡುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಪ್ರತಿಯೊಬ್ಬರೂ ಇದಕ್ಕೆ ಕೈಜೋಡಿಸಬೇಕು. ಜೀವವೈವಿಧ್ಯತೆ ಉಳಿದರೆ ಮನುಕುಲ ಉಳಿಯುತ್ತದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ. ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವನ್ಯಜೀವಿಗಳ ನೆಚ್ಚಿನ ತಾಣವಾಗಿದೆ. ಅಲ್ಲದೆ ಇಲ್ಲಿನ ಜೀವವೈವಿಧ್ಯತೆ ವಿಶಿಷ್ಟವಾಗಿದೆ. ಅನೇಕ ಪ್ರಭೇದದ ಕಾಡುಗಳನ್ನು ಒಂದೇ ಬೆಟ್ಟದಲ್ಲಿ ನೋಡುವ ಇದನ್ನು ಉಳಿಸಿ, ಮುಂದಿನ ಪೀಳಿಗೆಗೆ ಜೋಪಾನ ಮಾಡುವ ಕೆಲಸವನ್ನು ಮಾಡಬೇಕಿದೆ ಎಂದರು.

    ಮ್ಯಾರಥಾನ್‌ನಲ್ಲಿ ವಿಜೇತರಾದ ಗೌತಮ್, ಓಂಕಾರ್, ಹಿಮಣಿ ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಡಿಆರ್‌ಎಫ್‌ಗಳಾದ ವಿಕ್ರಮ್ ಪಾಷ, ಸದಾಶಿವ, ಅಮರನಾಥ್ ರಂಗಸ್ವಾಮಿ, ಚಿನ್ನಸ್ವಾಮಿ, ಕಾರ್ತಿಕ, ಮಂಜುನಾಥ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts