ಕೆ.ಆರ್.ಪೇಟೆ ಕ್ಷೇತ್ರದ ನಾಗರಿಕರ ಹಿತಕಾಯಲು ಬದ್ಧ

27 krp 01
Published on

ಕೆ.ಆರ್.ಪೇಟೆ: ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿ ನನ್ನ ಗೆಲುವಿಗೆ ಕಾರಣರಾಗಿರುವ ಕ್ಷೇತ್ರದ ನಾಗರಿಕರ ಹಿತಕಾಯಲು ನಾನು ಬದ್ಧ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.

ತಾಲೂಕಿನ ಶೀಳನೆರೆ ಹೋಬಳಿಯ ಹಲವೆಡೆ ಮತದಾರರಿಗೆ ಕೃತಜ್ಞತಾ ಸಭೆ ನಡೆಸಿ ಮಾತನಾಡಿದರು.

ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ 5-6 ಖಾತೆಗಳನ್ನು ನೀಡಿದ್ದರೂ ತಾಲೂಕಿನಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಗತ್ಯವಾಗಿ ಆಗಬೇಕಿದ್ದ ಕೆಲಸಕಾರ್ಯಗಳನ್ನು ಮಾಡಲಾಗಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳ ಅನನುಕೂಲವಾಗಿದ್ದು, ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದನ್ನು ನಾನು ನೋಡಿದ್ದೇನೆ. ಕನಿಷ್ಠ ಮೂಲ ಸೌಕರ್ಯಗಳಾದ ನೀರು, ಒಳಚರಂಡಿ, ರಸ್ತೆ, ನೀರಾವರಿ ಸೌಲಭ್ಯ, ವಸತಿ ಸೇರಿದಂತೆ ಹಲವು ಕೆಲಸಗಳು ಮರೀಚಿಕೆಯಾಗಿಯೇ ಉಳಿದಿವೆ. ಇದರಿಂದಾಗಿ ಜನತೆ ಬೇಸರಗೊಂಡು ಈ ಬಾರಿ ಜೆಡಿಎಸ್‌ಗೆ ಆಶೀರ್ವಾದ ಮಾಡಿದ್ದಾರೆ. ನಿಮ್ಮ ಮತಗಳಿಗೆ ಗೌರವ ತರುವ ಕೆಲಸಗಳನ್ನು ಮಾಡುತ್ತೇನೆ. ನಿಮ್ಮೊಡನೆ ನಿರಂತರ ಸಂಪರ್ಕದಲ್ಲಿದ್ದು, ನಿಮ್ಮ ಆಶೋತ್ತರಗಳನ್ನು ಈಡೇರಿಸುತ್ತೇನೆ ಎಂದರು.

ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net