More

    ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ

    ಕೆ.ಆರ್.ಸಾಗರ: ಕೆ.ಆರ್. ಸಾಗರದ ಬೃಂದಾವನದಲ್ಲಿ ಕೆಲಸ ನಿರ್ವಹಿಸುತ್ತಿದ್ದ 6 ಮಂದಿ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ಖಂಡಿಸಿ ಹೊರ ಗುತ್ತಿಗೆ ನೌಕರರು ಕಾವೇರಿ ನಿರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕಳೆದ 15 ವರ್ಷಗಳಿಂದ ಬೃಂದಾವನದಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ನೋಟಿಸ್ ನೀಡದೆ ಒಂದು ತಿಂಗಳ ಹಿಂದೆ ಏಕಾಏಕಿ ತೆಗೆದುಹಾಕಲಾಗಿದೆ. ಇದಕ್ಕೆ ಅಧಿಕಾರಿಗಳು ಸೂಕ್ತ ಕಾರಣ ನೀಡಬೇಕು. ಕೂಡಲೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೊಂದ ನೌಕರರು ಎಚ್ಚರಿಸಿದರು.

    ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಕಾರಣದಿಂದ 6 ಮಂದಿ ನೌಕರರನ್ನು ಏಕಾಏಕಿ ತೆಗೆದುಹಾಕಿದ್ದಾರೆ. ಈ ಹಿಂದೆ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎನ್ನುತ್ತಿದ್ದ ಅಧಿಕಾರಿಗಳೇ ಇದೀಗ ಕೆಲಸ ಸರಿಯಾಗಿ ಮಾಡಿಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು.

    ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ ಹಾಗೂ ಅಧೀಕ್ಷಕ ಅಭಿಯಂತರ ಆನಂದ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಇಲಾಖೆಯಿಂದ ಯಾವುದೇ ನೌಕರರನ್ನು ನೇಮಕ ಮಾಡಿಕೊಂಡಿಲ್ಲ. ಬದಲಾಗಿ ಗುತ್ತಿಗೆದಾರನ ಮೂಲಕ ಸೇರಿಸಿಕೊಳ್ಳಲಾಗಿದೆ. ಈ ಸಮಸ್ಯೆ ಗುತ್ತಿಗೆದಾರನಿಗೆ ಸೇರಿದೆ. ಅಲ್ಲದೆ ಸ್ಥಳೀಯ ಎಂಜಿನಿಯರ್ ಈ 6 ಮಂದಿ ಕಾರ್ಮಿಕರರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಗುತ್ತಿಗೆದಾರರಿಗೆ ದೂರು ನೀಡಿದ್ದಾರೆ. ಹೀಗಾಗಿ ಕಾರ್ಮಿಕರು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

    ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ರವಿಕುಮಾರ್, ಪಾಪಣ್ಣ, ಮೂರ್ತಿ, ಹುಲಿಕೆರೆ ಗ್ರಾಪಂ ಸದಸ್ಯ ಮಂಜುನಾಥ್, ಬಂಗಾರಪ್ಪ, ಮುಖಂಡರಾದ ಮಹದೇವು, ವಿಷಕಂಠ, ಪ್ರಕಾಶ್, ರಾಜು, ಮಂಜು, ವಿಜಯ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts