More

    ಕೆಲವು ಮತಗಟ್ಟೆಗಳ ಸ್ಥಳ,ಹೆಸರು ಬದಲಾವಣೆಗೆ ಪ್ರಸ್ತಾವನೆ

    ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮತದಾನ ಕೇಂದ್ರಗಳ ಹೆಸರು ಹಾಗೂ ವಿಳಾಸ ಬದಲಾವಣೆ ಪ್ರಸ್ತಾವನೆಗೆ ಭಾರತ ಚುನಾ ವಣಾ ಆಯೋಗದ ಅನುಮೋದನೆ ಪಡೆಯುವ ಕುರಿತಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆ ಡಿಸಿ ಕಚೇರಿಯಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಿತು.
    ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಸ್ತುತ ಮತಗಟ್ಟೆಗಳ ಪಟ್ಟಿ ಹಾಗೂ ಹೆಸರು ಹಾಗೂ ವಿಳಾಸ ಬದಲಾವಣೆಗೆ ಪ್ರಸ್ತಾಪಿತ ಮತ ಗಟ್ಟೆಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಗಮನಕ್ಕೆ ತರಲಾಯಿತು.
    ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 4 ಮತಗಟ್ಟೆಗಳ ಸ್ಥಳ ಹಾಗೂ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತಗಟ್ಟೆ ಸಂಖ್ಯೆ 217ರ ಸರ್ಕಾರಿ ಪ್ರೌಢಶಾಲೆ, ಪಿ.ಮಹದೇವಪುರ-1(ರೂಂ ನಂ-1)ಮತಗಟ್ಟೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿ. ಮಹ ದೇವಪುರ-1(ರೂಂ-1)ಗೆ ಬದಲಾಯಿಸಲಾಗಿದೆ.
    ಮತಗಟ್ಟೆ ಸಂಖ್ಯೆ 224 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಓಬಳಾಪುರದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಓಬಳಾಪುರಕ್ಕೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ-225 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ರೂಂ.-1, ತಿಮ್ಮಣ್ಣನಾಯಕನಕೋಟೆ (ಟಿ. ಎನ್.ಕೋಟೆ)ಯಿಂದ ಸರ್ಕಾರಿ ಪ್ರೌಢಶಾಲೆ,ರೂಂ-1, ಟಿ.ಎನ್.ಕೋಟೆಗೆ ಬದಲಾಯಿಸಲಾಗಿದೆ. ಮತಗಟ್ಟೆ ಸಂಖ್ಯೆ 226 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಂ-2 ಟಿ.ಎನ್.ಕೋಟೆಯಿಂದ ಸರ್ಕಾರಿ ಪಿಯು ಕಾಲೇಜು, ರೂಂ-2, ಟಿ.ಎನ್.ಕೋಟೆಗೆ ಬದಲಾಯಿ ಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
    ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2 ಮತಗಟ್ಟೆಗಳ ಸ್ಥಳ ಹಾಗೂ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತಗಟ್ಟೆ ಸಂಖ್ಯೆ 39 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ರೂಂ-1,ಸಿದ್ದವ್ವನಹಳ್ಳಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ರೂಂ-1, ವಡ್ಡ ರಸಿದ್ದವ್ವನಹಳ್ಳಿಗೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 40 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಂ-2, ಸಿದ್ದವ್ವನಹಳ್ಳಿ ಯಿಂ ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ರೂಂ-2, ವಡ್ಡರಸಿದ್ದವ್ವನಹಳ್ಳಿಗೆ ಬದಲಾಯಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 1661 ಮತಗಟ್ಟೆಗಳು ಇವೆ.
    ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್,ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಸಿಪಿಐ ಡಿಒಸಿ ಸಿ.ಕೆ.ಗೌಸ್‌ಪೀರ್,ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಿ.ಜೆ.ನಾಸಿರುದ್ದೀನ್,ಬಿಜೆಪಿ ಜಿಲ್ಲಾಕಾರ್ಯದರ್ಶಿ ಎಚ್.ಬಿ.ನರೇಂದ್ರ,ಬಿಎಸ್‌ಪಿ ಜಿಲ್ಲಾ ಸಂಯೋಜಕ ಎಚ್.ಎನ್.ಶಿವಮೂರ್ತಿ ಮತ್ತಿತರರು ಇದ್ದರು.
    ನಿಸ್ಪಕ್ಷಪಾತ ಕಾರ್ಯನಿರ್ವಹಣೆಗೆ ತಾಕೀತು
    ಲೋಕಸಭಾ ಚುನಾವಣೆ ನೀತಿ ಸಂಹಿತೆ ಶೀಘ್ರ ಜಾರಿ ಸಾಧ್ಯತೆ ಇದ್ದು,ಅಧಿಕಾರಿ ಹಾಗೂ ಸಿಬ್ಬಂದಿ ಮುಕ್ತ,ನ್ಯಾಯ ಸಮ್ಮತ ಚುನಾವಣೆ ಗಾಗಿ ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಜ್ಜಾಗ ಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
    ಡಿಸಿ ಕಚೇರಿಯಲ್ಲಿ ಬುಧ ವಾರ ಜಿಲ್ಲಾಮಟ್ಟದ ಅಧಿಕಾರಿಗಳ ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು,ನೀತಿ ಸಂಹಿತೆ ಜಾರಿ ನಂತರ ಎಲ್ಲ ಅಧಿಕಾರಿ, ಸಿಬ್ಬಂದಿ ಚುನಾವಣಾ ಆಯೋಗದ ಅಡಿ ಕಾರ್ಯ ನಿರ್ವಹಿಸಬೇಕೆಂದು ತಾಕೀತು ಮಾಡಿದರು.
    ಚುನಾವಣೆ ಕೆಲಸಗಳಿಗೆ ಈಗಾಗಲೇ ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆಯೋಗದ ಮಾರ್ಗ ದ ರ್ಶನ ಹಾಗೂ ಸಲಹೆಯೊಂದಿಗೆ ಕೆಲಸ ನಿರ್ವಹಿಸಬೇಕು. ಯಾವುದೇ ಅಕ್ರಮ,ಅವ್ಯವಹಾರಗಳಿಗೆ ಅವಕಾಶ ಮಾಡಿಕೊಡಬಾರದು.
    ಆಯೋಗದ ಹೊಸ ನಿರ್ದೇಶನಗಳು ಹಾಗೂ ತೀರ್ಮಾನಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿ ಮನವರಿಕೆ ಮಾಡಿ ಕೊಡಬೇಕು. ಅಂಚೆ ಮತಪತ್ರಕ್ಕೆ ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಚುನಾವಣೆ ಅಕ್ರಮ ಅಥವಾ ಅವ್ಯವಹಾರಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
    ಚುನಾವಣೆ ಕಾರ್ಯದ ನಡುವೆಯೂ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಚುನಾವಣೆ ನೆಪ ದಲ್ಲಿ ದೈನಂದಿನ ಕೆಲಸ ಕಾರ್ಯಗಳೆಡೆ ನಿರ್ಲಕ್ಷ್ಯ ಸಲ್ಲದು. ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಆದ್ಯತೆ ನೀಡಬೇಕೆಂದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮತ್ತಿತರರು ಇದ್ದರು.


    ವಿಧಾನಸಭಾ ಕ್ಷೇತ್ರ-ಮತಗಟ್ಟೆಗಳ ಸಂಖ್ಯೆಗಳು
    ಮೊಳಕಾಲ್ಮೂರು -285
    ಚಳ್ಳಕೆರೆ-260
    ಚಿತ್ರದುರ್ಗ-288
    ಹಿರಿಯೂರು-287
    ಹೊಸದುರ್ಗ-242
    ಹೊಳಲ್ಕೆರೆ-299

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts