More

    ಕೆರೆ ತುಂಬಿದ್ದಕ್ಕೆ ಸಂಕಟಪಟ್ಟರೆ ದೇವರೂ ಮೆಚ್ಚಲಾರ

    ಚಿಕ್ಕಮಗಳೂರು: ಕೆರೆ ತುಂಬಿದಾಗ ವಿಪಕ್ಷದ ಮುಖಂಡರು ಸಂಭ್ರಮ ಪಡಿ. ಅದನ್ನು ಬಿಟ್ಟು ಕೆರೆ ತುಂಬಿದ್ದಕ್ಕೆ ಸಂಕಟಪಟ್ಟರೆ ದೇವರೂ ಮೆಚ್ಚುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದರು.

    ಬೆಳವಾಡಿ ಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಹೊಟ್ಟೆನೋವಿಗೆ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವ ಮದ್ದೂ ಇಲ್ಲ. ಹೊಟ್ಟೆಕಿಚ್ಚಿನ ರಾಜಕಾರಣದಿಂದ ಯಾರಿಗೂ ಒಳಿತಾಗುವುದಿಲ್ಲ ಎಂದರು.

    ಜನೋಪಯೋಗಿ ರಾಜಕಾರಣ ಮಾಡಿದರೆ ಅದರಿಂದ ಜನರಿಗೆ ಹಿತವಾಗುತ್ತದೆ. ಪೆನ್ನು- ಪೇಪರ್ ಹಿಡಿದು, ಜಾತಿ ಲೆಕ್ಕಾಚಾರ ಹಾಕಿ 2008ರಲ್ಲೇ ಸಿ.ಟಿ.ರವಿ ರಾಜಕಾರಣ ಮುಗೀತು ಎಂದು ಕೆಲವರು ಲೆಕ್ಕಹಾಕಿದ್ದರು. ಆದರೆ ಜನ ಜಾತಿ ಲೆಕ್ಕಾಚಾರ ಹಾಕುವುದಿಲ್ಲ. ಹಾಕುವುದಾಗಿದ್ದರೆ ನೀವು ನಾಲ್ಕು ಬಾರಿ ನನ್ನನ್ನು ಎಂಎಲ್​ಎ ಮಾಡುತ್ತಿರಲಿಲ್ಲ. ನೀವು ಏನೋ ಒಂದು ಒಳ್ಳೆಯದನ್ನು ಗುರುತಿಸಿದ್ದೀರಿ ಎಂದು ಹೇಳಿದರು.

    ಈಗ ವಿಪಕ್ಷದಲ್ಲಿದ್ದವರಿಗೆ ಒಂದು ಅವಕಾಶ ಸಿಕ್ಕು ಅಧಿಕಾರಕ್ಕೇರಿದರೆ ಅಭಿವೃದ್ಧಿಯಲ್ಲಿ ಸ್ಪರ್ಧೆ ಮಾಡಿ. ಸಿ.ಟಿ.ರವಿ 220 ಕೋಟಿ ರೂ. ಕೆಲಸ ಮಾಡಿದ್ದರೆ, ನಾವು 250 ಕೋಟಿ ರೂ. ಕೆಲಸ ಮಾಡುತ್ತೇವೆ ಎಂದು ಜನರ ಮುಂದೆ ಹೇಳಲಿ. ಆಗ ಊರಿನ, ಗ್ರಾಮಗಳ ಅಭಿವೃದ್ಧಿಯಾಗುತ್ತದೆ. ರಾಜಕಾರಣದಲ್ಲಿ ಪೈಪೋಟಿ ಸ್ವಾಭಾವಿಕ. ಆದರೆ ಕ್ರೀಡಾ ಸ್ವರೂಪದಲ್ಲಿರಬೇಕು. ಎಲೆಕ್ಷನ್ ಬಂದಾಗ ಪೈಪೋಟಿ ನಡೆಸಿ ಉಳಿದ ಸಂದರ್ಭಗಳಲ್ಲಿ ಅಭಿವೃದ್ಧಿ ಜತೆ ಕೈಜೋಡಿಸಿ ಎಂದರು.

    ನನಗೆ 54 ವರ್ಷಗಳ ಕಾಲ ಅಪ್ಪ, ಅಮ್ಮ ಇಬ್ಬರೂ ಆಶೀರ್ವಾದ ಮಾಡಿದ್ದರು. 55ನೇ ಜನ್ಮದಿನದಂದು ಅಮ್ಮನ ಆಶೀರ್ವಾದ ಪಡೆಯಲಿಕ್ಕೆಂದು ಹೋದಾಗ ‘ಮಗ ನಿನ್ನ ಬಳಿ ಏನೂ ಕೇಳುವುದಿಲ್ಲ. ಕೆಟ್ಟ ಹೆಸರು ತೆಗೆದುಕೊಳ್ಳದಂತೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದು ಮಾಡು’ ಎಂದು ಆಶೀರ್ವದಿಸಿದರು. ಹಾಗಾಗಿ ರಾಜಕಾರಣದಲ್ಲಿ ಎಲ್ಲರಿಗೂ ಒಳಿತು ಮಾಡಲಾಗದಿದ್ದರೂ ಸಿ.ಟಿ.ರವಿಯಿಂದ ನಮಗೆ ಕೆಟ್ಟದ್ದಾಗಿದೆ ಎಂದು ಯಾರೂ ಬೆಟ್ಟು ತೋರಿಸುವಂತಿಲ್ಲ. ಶಕ್ತಿಮೀರಿ ಒಳಿತು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts