More

    ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ 20ರಿಂದ

    ಹೊನ್ನಾವರ: ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಫೆ. 20 ರಿಂದ 24ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಆಯೋಜಿಸಲಾಗಿದೆ ಎಂದು ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು. ಈ ಬಾರಿಯ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಗೆ ಪದ್ಮಶ್ರೀ ಡಾ. ಪದ್ಮಾಸುಬ್ರಹ್ಮಣ್ಯಂ ಅವರು ಭಾಜನರಾಗಿದ್ದು, ಫೆ. 24ರಂದು ಪ್ರದಾನ ಮಾಡಲಾಗುವುದು ಎಂದರು.

    20 ರಂದು ಸಂಜೆ 5 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸುವರು. ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು ಅಗಲಿದ ಚೇತನಗಳನ್ನು ಸ್ಮರಿಸುವರು. ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ಜಿ.ಎಸ್.ಭಟ್ ಅವರ ‘ಇಡಗುಂಜಿ ಮೇಳ 85’ ಕೃತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕ ಸುನೀಲ ನಾಯ್ಕ, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ತಿಮ್ಮಪ್ಪ ಭಟ್, ಯಕ್ಷರಂಗದ ಗೋಪಾಲಕೃಷ್ಣ ಭಾಗವತ ಇತರರು ಪಾಲ್ಗೊಳ್ಳುವರು.

    ಸಂಜೆ 6-30 ರಿಂದ ಸೈಯದ್ ಸಲ್ಲಾವುದ್ದೀನ್ ಪಾಷಾ ಅವರಿಂದ ನೃತ್ಯ, ಬೆಂಗಳೂರು ಕಲಾದರ್ಶಿನಿಯಿಂದ ಯಕ್ಷಗಾನ ಬ್ಯಾಲೆ ಪ್ರದರ್ಶನಗೊಳ್ಳಲಿದೆ ಎಂದರು.

    ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದವರನ್ನು ನಾಟ್ಯೋತ್ಸವದಲ್ಲಿ ಗೌರವಿಸಲಾಗುತ್ತಿದೆ. ಪ್ರತಿದಿನದ ಕಾರ್ಯಕ್ರಮವನ್ನು ಅಗಲಿದ ಯಕ್ಷಚೇತನಗಳಾದ ರಾಮ ಮಹಾಬಲ ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಕೆ.ಎಂ. ಉಡುಪ ಮಂದಾರ್ತಿ, ಡಾ. ಡಿ.ಕೆ. ಚೌಡ, ಹೊಸ್ತೋಟ ಮಂಜುನಾಥ ಭಾಗವತರಿಗೆ ಸಮರ್ಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಶಾಮಸುಂದರ ಭಾಗವತ, ಕೆ.ಜಿ.ಹೆಗಡೆ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.

    ಕಾರ್ಯಕ್ರಮದ ವಿವರ: · ಫೆ. 21ರಂದು ಸಂಜೆ 5 ಗಂಟೆಗೆ ಯಕ್ಷಗಾನ ವಿದ್ವಾಂಸ ಡಾ. ರಮಾನಂದ ಬನಾರಿ, ಅರ್ಥಧಾರಿ ಎಂ.ಎನ್. ಹೆಗಡೆ, ಯಕ್ಷಗಾನ ಕಲಾವಿದ ಡಾ. ಶ್ರೀಧರ ಭಂಡಾರಿ, ಕಲಾ ಸಂಘಟಕ ಮನ್ಮಥಕುಮಾರ ಸತ್ಪತಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6 ರಿಂದ ಓಡಿಸ್ಸಿ ನೃತ್ಯ, ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ.

    · 22ರಂದು ಯಕ್ಷಗಾನ ಕಲಾವಿದರಾದ ಕೃಷ್ಣ ಗಾಣಿಗ ಜಲವಳ್ಳರ್ಕ, ಎಂ.ಕೆ. ರಮೇಶ ಆಚಾರ್ಯ, ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಛಾಯಾಗ್ರಾಹಕ ಕೆ.ಎಸ್.ರಾಜಾರಾಮ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6 ಗಂಟೆಗೆ ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲು, ಶಂಕರ ಕಬಾಡಿ ವಯೋಲಿನ್, ಅಸ್ಸಾಂ ತಂಡದ ಜಾನಪದ ನೃತ್ಯ, ಕೇರಳದ ತೊಗಲು ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ.

    · 23ರಂದು ಯಕ್ಷಗಾನ ಕಲಾವಿದ ಎ.ಎಸ್. ನಂಜಪ್ಪ, ಕಲಾ ಸಂಘಟಕ ಪ್ರಭಾಕರ ಹೆಗಡೆ ಚಿಟ್ಟಾಣಿ, ಮದ್ದಲೆ ವಾದಕ ನಾಗೇಶ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6 ಗಂಟೆಗೆ ದೀಪ್ತಿ ನವರತ್ನ ಅವರಿಂದ ಕರ್ನಾಟಕ ಸಂಗೀತ, ವಿದ್ಯಾ ಅಂಗಾರ ಅವರಿಂದ ಕುಚುಪುಡಿ ಮತ್ತು ಶ್ರೀಹರಿ ಮತ್ತು ಚೇತನ ಅವರಿಂದ ಕಥಕ್ ನೃತ್ಯ ನಡೆಯಲಿದೆ.

    · 24 ರಂದು ನಡೆಯುಬ ಕಾರ್ಯಕ್ರಮವನ್ನು ಸಚಿವ ಸಿ.ಟಿ. ರವಿ ಉದ್ಘಾಟಿಸುವರು. ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts