More

    ಕೆರೆಗೆ ಕೊನೆಗೂ ಬಂತು ನೀರು

    ರೈತರ 15 ದಿನಗಳ ಹೋರಾಟಕ್ಕೆ ಸಂದ ಜಯ

    ಹಾರೂಗೇರಿ: ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರ ಕುಡಿಯುವ ನೀರಿನ ಮೂಲವಾದ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೆರೆಗೆ ಮಂಗಳವಾರ ಕೊನೆಗೂ ನೀರು ಬಂದಿದ್ದು, ರೈತ ಸಂಘದ ಸದಸ್ಯರು ಘಟಪ್ರಭಾ ಎಡದಂಡೆ ಕಾಲುವೆ ಬಳಿ ಸುಮಾರು 15 ದಿನಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.

    ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಕೊಳವೆ ಬಾವಿಗಳು ಬತ್ತಿಹೋಗಿ ಕುಡಿಯುವ ನೀರಿಗೆ ಜನ-ಜಾನುವಾರು ತತ್ತರಿಸಿದ್ದವು. ಹಾಗಾಗಿ, ಕೆರೆಗೆ ನೀರು ತುಂಬಿಸುವಂತೆ ಹೋರಾಟ ನಡೆಸಲಾಗಿತ್ತು. ರೈತ ಸಂಘದ ಜತೆಗೆ ನೀರಾವರಿ ಇಲಾಖೆ, ಹಾರೂಗೇರಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಅಕಾರಿಗಳ ಸಹಾಯ ಸಹಕಾರದಿಂದ ಕೆರೆಗೆ ನೀರು ತರಲು ಅನುಕೂಲವಾಯಿತು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಬಾಬುರಾವ ಪಾಟೀಲ ತಿಳಿಸಿದರು.

    ಹಾರೂಗೇರಿ ವೃತ್ತ ಸಿಪಿಐ ರವಿಚಂದ್ರ ಡಿ.ಬಿ., ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಭರಮು ಚಿಮಡ, ಬಿಡುಗಡೆ ಬಸ್ತವಾಡ, ಕಾಶಪ್ಪ ಜಂಬಗಿ, ಕುಮಾರ ಬಾಬಣ್ಣವರ, ಕರೆಪ್ಪ ಲಟ್ಟೆ, ಶಿವಲಿಂಗ ಲುಡಬುಡೆ, ಬಸಪ್ಪ ನಾಗನೂರ, ಭುಜಪ್ಪ ಹಳಿಂಗಳಿ, ಶ್ರೀಮಂತ ನಾಗನೂರ, ಕರೆಪ್ಪ ಕುರಿ, ಪಾರೀಸ್ ನಾಗನೂರ, ಮುತ್ತಪ್ಪ ಗಸ್ತಿ, ಮಹಾವೀರ ನಾಗನೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts