More

    ಕೆಎಚ್​ಬಿ ನಿರ್ವಿುಸಿದ ಕೊಠಡಿಗಳನ್ನು ಹಸ್ತಾಂತರಿಸಿ

    ಹುಬ್ಬಳ್ಳಿ: ರಾಜ್​ನಗರದಲ್ಲಿ 7 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡ ಕಾಮಗಾರಿಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಯಾವುದೇ ಹೊಸ ಯೋಜನೆಗಳಿಗೆ ಅನುಮತಿ ನೀಡುತ್ತಿಲ್ಲ. ಈಗಾಗಲೇ ಕಾಲೇಜ್ ಕಟ್ಟಡ ನಿರ್ವಣಕ್ಕೆ 7 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ವಿಳಂಬಿಸದೇ ಕೆಲಸ ಪೂರ್ಣಗೊಳಿಸಬೇಕು. ಸುರಕ್ಷತೆ ದೃಷ್ಟಿಯಿಂದ ಕಟ್ಟಡದ ಸುತ್ತ ತಡೆಗೋಡೆ ನಿರ್ವಿುಸಲು ಬೇಕಾಗುವ ಹೆಚ್ಚುವರಿ 1.5 ಕೋಟಿ ರೂ. ಅನುದಾನ ಬಿಡುಗಡೆಗೆ ಉನ್ನತ ಶಿಕ್ಷಣ ಸಚಿವರನ್ನು ಕೋರಲಾಗುವುದು. ಆರು ತಿಂಗಳೊಳಗಾಗಿ ನಿರ್ಮಾಣ ಕಾರ್ಯ ಪೂರ್ಣವಾಗಬೇಕು. ಈಗಾಗಲೇ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ನಿರ್ವಿುಸಲಾಗಿರುವ ಕೊಠಡಿಗಳನ್ನು ಕಾಲೇಜ್​ಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಪ್ರಾಂಶುಪಾಲ ಡಾ.ಪಿ.ಬಿ. ಕಲ್ಯಾಣ ಶೆಟ್ಟರ್, ಪ್ರಾಧ್ಯಾಪಕ ಡಾ. ರಘು ಅಂಕಮಂಚಿ, ಗುತ್ತಿಗೆದಾರ ಪ್ರವೀಣ, ಮಹೇಶ ಹಿರೇಮಠ, ಸುಷ್ಮಾ ಇತರರು ಇದ್ದರು.

    3 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ
    ಹುಬ್ಬಳ್ಳಿ: ನೃಪತುಂಗ ಬೆಟ್ಟ, ಫಾರೆಸ್ಟ್ ಕಾಲನಿಗೆ ಹೊಂದಿಕೊಂಡಿರುವ ಬಾಪೂಜಿ ನಗರದಲ್ಲಿ ಮಳೆಯಿಂದಾಗಿ ಚರಂಡಿ ನೀರು ಮನೆಗಳಿಗೆ ನುಗ್ಗಿ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಒಳಚರಂಡಿ ನಿರ್ವಿುಸಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿನ ಬಾಪೂಜಿನಗರಕ್ಕೆ ಭಾನುವಾರ ಭೇಟಿ ನೀಡಿದ ಸಚಿವರು, ನಾಗರಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

    ಮಹಾನಗರ ಪಾಲಿಕೆ ಆಯುಕ್ತರಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದೇನೆ. ಭಾರತೀಯ ಸೇನಗೆ ಸೇರಿದ ಜಾಗದಲ್ಲಿ ಒಳಚರಂಡಿ ಹಾದು ಹೋಗುವುದರಿಂದ ಅವರ ಒಪ್ಪಿಗೆ ಪಡೆದು ಯೋಜನೆ ರೂಪಿಸಲಾಗುವುದು ಎಂದರು. ಬಾಪೂಜಿ ನಗರದ ಸಮುದಾಯ ಭವನದ ಮೊದಲ ಅಂತಸ್ತಿನ ಕಟ್ಟಡ ನಿರ್ವಣಕ್ಕೆ ಅನುದಾನ ಹಾಗೂ ಅಕ್ರಮ ಸಕ್ರಮದ ಅರ್ಜಿಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ನಾಗರಿಕರು, ಸಚಿವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts