More

    ಕೃಷಿ ಕಾಯಕದಲ್ಲಿ ತೊಡಗಿದರೆ ಶರೀರ ಗಟ್ಟಿ

    ತೆಲಸಂಗ: ನಿತ್ಯ ಹೊಲ ಗದ್ದೆಗಳಲ್ಲಿ ಮೈಮುರಿದು ದುಡಿಯುವ ರೈತರ ಶರೀರ ಗಟ್ಟಿಯಾಗಿರುತ್ತದೆ ಎಂದು ತಾಲೂಕು ಕೃಷಿ ಅಧಿಕಾರಿ ನಿಂಗಣ್ಣ ಬಿರಾದರ ಹೇಳಿದರು.

    ಸ್ಥಳಿಯ ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಲ್ಲದೆ ಜೀವನ ಮತ್ತು ಅಸ್ತಿತ್ವ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಕುಳಿತು ತಿಣ್ಣುವ ಹುಚ್ಚಿನಿಂದ ಹೊರಬಂದು ದುಡಿದರೆ ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯ ಎಂದರು.

    ವಿವೇಕಾನಂದ ಹಳಿಂಗಳಿ ಮಹಾರಾಜರು ಮಾತನಾಡಿ, ಮೂಲ ಸೌಲಭ್ಯಗಳಾದ ನೀರು, ವಿದ್ಯುತ್​, ರಸ್ತೆ, ಶಿಣ ರೈತರಿಗೆ ದೊರೆತಾಗ ಮಾತ್ರ ರೈತ ನೆಮ್ಮದಿಯಿಂದ ಬದುಕಲು ಸಾಧ್ಯ.
    ನೀರಾವರಿಯಿಂದ ವಂಚಿತಗೊಂಡ ತೆಲಸಂಗ ಗ್ರಾಮದ ಸುತ್ತಲಿನ 7 ಗ್ರಾಮಗಳಿಗೆ ನೀರೊದಗಿಸಲು ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿಗೆ 325 ಕೋಟಿ ರೂ. ಸರ್ಕಾರದಿಂದ ಮೊದಲ ಅನುಮೋದನೆ ದೊರೆತಿದೆ. ಇದಕ್ಕೆ ಶಾಸಕ ಮಹೇಶ ಕುಮಠಳ್ಳಿ ಕಾರಣಿಭೂತರಾಗಿದ್ದಾರೆ ಎಂದರು.

    ಗ್ರಾಪಂ ಅಧ್ಯ ವಿಲಾಸ ಮೋರೆ, ಕೃಷಿ ಅಧಿಕಾರಿಗಳಾದ ಯಂಕಪ್ಪ ಉಪ್ಪಾರ, ನಾಮದೇವ ಲಮಾಣಿ, ಎಂ.ಆರ್​.ಕೋತ್ವಾಲ್​, ಗೂಗಲ್​.ಸ.ನಿ.ಶರಣಗೌಡ, ಸಂಯೋಜಕ ಶಿವಾನಂದ ಸಾವಗಾಂವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts