More

    ಕೂಡಲಸಂಗಮದಲ್ಲಿ ಶರಣ ಮೇಳ 11ರಿಂದ

    ಹುಬ್ಬಳ್ಳಿ: ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲಸಂಗಮ ಕ್ಷೇತ್ರದಲ್ಲಿ ಜ. 11ರಿಂದ 14ರವರೆಗೆ 33ನೇ ಶರಣ ಮೇಳ ಆಯೋಜಿಸಲಾಗಿದೆ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

    ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.13ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶರಣ ಮೇಳ ಉದ್ಘಾಟಿಸುವರು. ಬಸವ ಧರ್ಮಪೀಠದ ಡಾ. ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸುವರು. ಯೋಗಗುರು ಬಾಬಾ ರಾಮದೇವ ಅವರು ಲಿಂಗೈಕ್ಯ ಮಾತಾಜಿಯವರ ಪುತ್ಥಳಿ ಅನಾವರಣಗೊಳಿಸುವರು ಎಂದರು.

    ಹಳೇ ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿಯ ಶ್ರೀ ಸಂಗನಬಸವ ಸ್ವಾಮೀಜಿ ಸೇರಿ ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಪ್ರಭು ಚವ್ಹಾಣ, ಶಾಸಕ ದೊಡ್ಡನಗೌಡ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ಮೇಳದಲ್ಲಿ ಯೋಗ ಶಿಬಿರ, ಸಾಮೂಹಿಕ ಇಷ್ಟಲಿಂಗ ಪೂಜೆ, ರೈತ ಸಮಾವೇಶ, ಚಿಂತನ ಗೋಷ್ಠಿಗಳು, ರಾಷ್ಟ್ರೀಯ ಬಸವದಳದ 29ನೇ ಅಧಿವೇಶನ, ವಚನ ದುಂದುಭಿ, ಪಥ ಸಂಚಲನ, ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಧಾರವಾಡ ಘಟಕದ ಅಧ್ಯಕ್ಷ ಪ್ರಕಾಶ ಗರಗ, ಹುಬ್ಬಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಜೋಡಳ್ಳಿ, ಗಣನಾಯಕರಾದ ಬಿ.ಜಿ. ಹೊಸಗೌಡ್ರು, ರಾಷ್ಟ್ರೀಯ ಬಸವ ದಳದ ಧಾರವಾಡ ಘಟಕದ ಅಧ್ಯಕ್ಷ ಶಿವಾನಂದ ಹಬಲೂರ, ಸೂರ್ಯಕಾಂತ ಶೀಲವಂತ, ಕೆ.ಎಸ್. ಕೋರಿಶೆಟ್ಟರ್ ಇದ್ದರು.

    ಲಿಂಗಾಯತ ಸ್ವತಂತ್ರ ಧರ್ಮ ಚರ್ಚೆ

    ಶರಣ ಮೇಳದಲ್ಲಿ ಜ. 11ರಂದು ಸಂಜೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವ ಕುರಿತು ಚರ್ಚಾ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮಾನ್ಯತೆ ಹೇಗೆ ಪಡೆಯಬೇಕು, ಮುಂದಿನ ಹೋರಾಟ ಹೇಗಿರಬೇಕೆಂಬ ಕುರಿತು ರ್ಚಚಿಸಲಾಗುವುದು. ಜ. 10ರಂದು ಮಧ್ಯಾಹ್ನ ರಾಷ್ಟ್ರೀಯ ಬಸವ ದಳ ವತಿಯಿಂದ ಕೂಡಲಸಂಗಮದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಕೈಬಿಟ್ಟಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಳುಹಿಸಿದ್ದ ಪ್ರಸ್ತಾವನೆಯನ್ನು ಒಪ್ಪುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶ್ರೀ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

    ಸಿಎಎಗೆ ಬೆಂಬಲವಿಲ್ಲ

    ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರೀಯ ಬಸವದಳದ ಬೆಂಬಲವಿಲ್ಲ. ದೇಶದಲ್ಲಿ ಕೋಟ್ಯಂತರ ಜನ ಅನಕ್ಷರಸ್ಥರು, ಬಡವರಿದ್ದಾರೆ. ಅಂಥ ಜನರಲ್ಲಿ ತಾರತಮ್ಯದ ವಿಷಬೀಜ ಬಿತ್ತುವುದು ಸರಿಯಲ್ಲ ಎಂದು ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts