More

    ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ

    ಚಿತ್ರದುರ್ಗ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆಗಳಿದ್ದು,ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿ ದರು.
    ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಡಿಸಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆರು ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿತವಾಗಿವೆ. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸದಂತೆ ಸಾಕಷ್ಟು ದೂರುಗಳು ಈಗಾಗಲೇ ಕೇಳಿ ಬರುತ್ತಿವೆ. ಶಾಸಕರ ಅಧ್ಯಕ್ಷತೆ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಏರ್ಪಡಿಸಿ, ಸಮಸ್ಯೆಗಳ ಪರಿಹಾರಕ್ಕಾಗಿ ಮಾರ್ಗೋಪಾಯಗಳನ್ನು ಕಂಡು ಕೊಳ್ಳ ಬೇಕು.
    ನೀರಿನ ಮೂಲಗಳ ಗುರುತು,ಪೈಪ್‌ಲೈನ್‌ವಿಸ್ತರಣೆ, ಬೋರ್‌ವೆಲ್ಗಳ ದುರಸ್ತಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಸಭೆ ಯಲ್ಲಿ ಚರ್ಚಿಸಿ,ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸ ಬೇಕು. ಖಾಸಗಿ ಬೋ ರ್‌ವೆಲ್ ಮಾಲೀಕರ ಮನವೊಲಿಸಿ ಬಾಡಿಗೆ ನಿಗದಿಪಡಿಸಬೇಕು. ಅಂತಹ ಬೋರ್‌ವೆಲ್ಗಳಿಗೆ ಅಗತ್ಯವಿದ್ದರೆ ಪೈಪ್ ಲೈನ್ ಅಳವಡಿಸ ಬಹುದು.
    ನೀರು ಲಭ್ಯವಿಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಬೇಕು. ಆದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಕೊನೆಯ ಆದ್ಯತೆಯಾಗಿರಬೇಕೆಂದು ತಾಕೀತು ಮಾಡಿದರು.
    ಚಳ್ಳಕೆರೆ ತಾಪಂ ಇಒ ಎಚ್.ಶಶಿಧರ್ ಮಾತನಾಡಿ,ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈಗಾಗಲೇ 53 ಹಳ್ಳಿಗಳನ್ನು ಸ ಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಲಾಗಿದೆ. 18 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್ಗಳನ್ನು ಗುರುತಿಸಲಾಗಿದ್ದು,ಇವುಗಳಲ್ಲೂ ನೀರು ಕಡಿಮೆಯಾಗುವ ಸಂಭವ ಇದೆ. 14 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗದ ಸನ್ನಿವೇಶ ಎದುರಾಗಲಿದೆ ಎಂದರು.
    ಪರಿಸ್ಥಿತಿ ಗಂಭೀರವಾಗಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ,ಪ್ರತಿ ತಾಲೂಕಿಗೆ ತುರ್ತು ಕಾರ್ಯಗಳಿಗೆ 40 ಲಕ್ಷ ರೂ.ಅನುದಾನ ಒದಗಿಸಲಾಗಿದೆ ಎಂದು ಡಿಸಿ ಹೇಳಿದರು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯ ಲಾಗಿದ್ದು,ತುರ್ತಾಗಿ ಅಗತ್ಯವಿರುವೆಡೆ ತಹಸೀಲ್ದಾರ್ ಸೂಚನೆ ಮೇರೆಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವವರಿಗೆ ಟೆಂಡರ್ ದರದಂತೆ ಹಣ ಪಾವತಿಸಲಾಗುವುದು ಎಂದರು.
    ನೀರಿನ ಗುಣಮಟ್ಟ ಪರೀಕ್ಷೆ
    ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಪೈಪ್‌ಲೈನ್‌ಗಳನ್ನು ಪರಿಶೀಲಿಸಬೇಕು. ಕಲುಷಿತ ನೀರಿನಿಂದ ಅಹಿತಕರ ಘಟನೆಗಳಾಗದಂತೆ ಕ್ರಮ ವಹಿಸಬೇಕೆಂದು ಡಿಸಿ ಸೂಚಿಸಿದರು. ಮುಂಬರುವ ತಿಂಗಳುಗಳಲ್ಲಿ ಜಿಲ್ಲೆಯ 289 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು. ಹಾಗಾಗಿ ಚಳ್ಳಕೆರೆ ತಾಲೂಕಿ ನಲ್ಲಿ 24, ಚಿತ್ರದುರ್ಗ-1, ಹಿರಿಯೂರು-54, ಹೊಳಲ್ಕೆರೆ-13 ಹಾಗೂ ಮೊಳಕಾಲ್ಲೂರು ತಾಲೂಕಿನಲ್ಲಿ 78 ಸೇರಿ 170 ಬೋರ್ ವೆಲ್ ಗಳನ್ನು ಒಪ್ಪಂದಕ್ಕಾಗಿ ಗುರುತಿಸಲಾಗಿದೆ ಎಂದರು.
    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡಮಟಿಪಾಟೀ, ಪಂ.ರಾಜ್‌ಇಂಜಿನಿಯರಿಂಗ್ ವಿಭಾಗದ ಇಇ ಪಾತಪ್ಪ, ನಗರಸಭೆ ಪೌರಾಯುಕ್ತರಾದ ಎಂ.ರೇಣುಕಾ, ಸಿ.ಚಂದ್ರಪ್ಪ ಹಾಗೂ ಡಾ.ನಾಗವೇಣಿ,ರೆಹನಾಪಾಷಾ ಮತ್ತಿತರ ತಾಲೂಕುಗಳ ತಹಸೀಲ್ದಾರ್‌ಗಳು,ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಳು,ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.


    ಜಿಲ್ಲೆಯಲ್ಲಿ ಸದ್ಯ ಗುರುತಿಸಿರುವ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳು
    ತಾಲೂಕು-ಗ್ರಾಮಗಳ ಸಂಖ್ಯೆ
    ಚಳ್ಳಕೆರೆ-53
    ಚಿತ್ರದುರ್ಗ-44
    ಹಿರಿಯೂರು-57
    ಹೊಳಲ್ಕೆರೆ-53,
    ಹೊಸದುರ್ಗ-36
    ಮೊಳಕಾಲ್ಮೂರು-67


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts