More

    ಕುಡಿಯುವ ನೀರಿಗಾಗಿ ಪ್ರತಿಭಟನೆ

     ಆಲ್ದೂರು: ಕುಡಿಯುವ ನೀರು ಹಾಗೂ ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ಮಾಚಗೊಂಡನಹಳ್ಳಿಯ ಭೀಮಾನಗರದ ಗುಡಿಸಲು ನಿವಾಸಿಗಳು ಸೋಮವಾರ ಖಾಲಿ ಕೊಡ ಹಿಡಿದು ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

    ಮಾಚಗೊಂಡನಹಳ್ಳಿ ಸರ್ವೆ ನಂ.167ರಲ್ಲಿ ಹಲವು ವರ್ಷಗಳಿಂದ ನಿವೇಶನಕ್ಕಾಗಿ 80 ಕುಟುಂಬಗಳು ಗುಡಿಸಲು ನಿರ್ವಿುಸಿಕೊಂಡು ವಾಸ ಮಾಡುತ್ತಿವೆ. ಆದರೆ ಕುಡಿಯುವ ನೀರು ಹಾಗೂ ಮೂಲ ಸೌಕರ್ಯ ಒದಗಿಸದೆ ನಮ್ಮ ಬದುಕು ದುಸ್ತರವಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

    ಭೀಮಾನಗರ ಹೋರಾಟ ಸಮಿತಿ ಅಧ್ಯಕ್ಷ ವಿನೋದ್ ಮಾತನಾಡಿ, ಮಾಚಗೊಂಡನಹಳ್ಳಿ ಸರ್ವೆ ನಂ.167ರಲ್ಲಿ 116 ಎಕರೆ ಜಾಗವಿದ್ದು ಆರ್ಥಿಕ ಸದೃಢರಾಗಿರುವವರು ಇದರಲ್ಲಿ 113 ಎಕರೆ ಒತ್ತುವರಿ ಮಾಡಿ ಕಾಫಿ ತೋಟ ಮಾಡಿಕೊಂಡಿದ್ದಾರೆ. ಉಳಿದ 3 ಎಕರೆ ಜಾಗದಲ್ಲಿ ಕೂಲಿ ಕಾರ್ವಿುಕರು, ಬಡ ಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ವಿುಸಿಕೊಂಡು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಪಿಎಸ್​ಐ ಸಜಿತ್ ಗೌಡ ಗ್ರಾಪಂ ಪ್ರಮುಖರ ಜತೆ ಮಾತನಾಡಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂಪಡೆದರು. ಹೋರಾಟ ಸಮಿತಿ ಖಜಾಂಚಿ ರವಿ, ಸದಸ್ಯರಾದ ಅಣ್ಣಪ್ಪ, ಮಂಜು, ಧನಂಜಯ್, ಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts