More

    ಕುಗ್ರಾಮಗಳ ಅಭಿವೃದ್ಧಿಯಿಂದ ಜೀವನ ಮಟ್ಟ ಸುಧಾರಣೆ: ಶಾಸಕ ಕುಮಾರ ಬಂಗಾರಪ್ಪ ಅಭಿಮತ

    ಸೊರಬ: ಕುಗ್ರಾಮಗಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಅಲ್ಲಿನ ಜನರು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು.
    ತಾಲೂಕಿನ ಹಲಸಿನಕೊಪ್ಪ ಗ್ರಾಮದಲ್ಲಿ ಮಂಗಳವಾರ ಸೊರಬ-ಸಾಗರ ರಸ್ತೆಯ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ಸೊರಬ-ಸಾಗರ ಸಂಪರ್ಕಿಸಲು ಈ ಸೇತುವೆ ಒಂದು ಕೊಂಡಿ. ಸುತ್ತಮುತ್ತಲಿನ ಗ್ರಾಮಸ್ಥರು ಹತ್ತಾರು ಕಿ.ಮೀ. ಸುತ್ತಿ ಸಾಗರಕ್ಕೆ ಹೋಗುವಂತಾಗಿತ್ತು. ಸಾಗರ ಹಾಗೂ ಈ ಭಾಗದ ಗ್ರಾಮಗಳ ಮಧ್ಯೆ ಕೇವಲ 6 ಕಿಮೀ ಅಂತರವಿದೆ ಎಂದರು.
    18 ವರ್ಷಗಳಿಂದ ಈ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗಿದೆ. ಹಲವು ತೊಂದರೆಗಳಿಂದ ವಿಳಂಬವಾಗಿತ್ತು. ಸೇತುವೆ ನಿರ್ಮಾಣಗೊಳ್ಳುವ ಮೂಲಕ ಸ್ಥಳೀಯರ ಬಹುದಿನಗಳ ಕನಸು ನನಸಾಗಿದೆ. ರೈತರು ಕೋರ್ಟ್, ಕಚೇರಿ ತಕರಾರು ತೆಗೆಯದೆ ಸ್ಥಳೀಯ ಮುಖಂಡರ ಮಾತಿಗೆ ಭೂಸ್ವಾಧಿನ ಪ್ರಕ್ರಿಯೆಗೆ ಒಪ್ಪಿಗೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ರೈತರ ಭೂಮಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇನ್ಮುಂದೆ ಈ ಗ್ರಾಮಗಳ ಕೃಷಿ ಉತ್ಪನ್ನಗಳು ಸರಾಗವಾಗಿ ಪಟ್ಟಣ ಸೇರುತ್ತವೆ. ಅಲ್ಲದೆ ಹೆಚ್ಚಿನ ಬೇಡಿಕೆ ದೊರೆಯಲಿದೆ. ಇದರಿಂದ ಆರ್ಥಿಕ ಸುಧಾರಣೆಯಾಗಲಿದೆ. ಹಾಗಾಗಿ ಒಳ್ಳೆಯ ಕೆಲಸಕ್ಕೆ ಪಕ್ಷಭೇದ ಮರೆತು ಸಹಕಾರ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಅರಣ್ಯ ಹಾಗೂ ಬಗರ್‌ಹುಕುಂ ರೈತರಿಗೆ ಕಾನೂನಿನ ಅನ್ವಯ ಮಂಜೂರಾತಿ ದೊರೆಯಲಿದೆ ಎಂದರು.
    ರೈತ ರಾಮಪ್ಪ ಮಾತನಾಡಿ, ಸೇತುವೆ ನಿರ್ಮಾಣಕ್ಕಾಗಿ ತೊಂದರೆ ನೀಡದೆ ಭೂಮಿ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿದ್ದೇವೆ. ನಮಗೆ ತ್ವರಿತವಾಗಿ ಪರಿಹಾರ ನೀಡಬೇಕು. ಶರಾವತಿ ಸಂತ್ರಸ್ತರಂತೆ ಕಚೇರಿ ಅಲೆಯುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts