More

    ಕಿಮ್ಸ್​ಗೆ 5.50 ಕೋಟಿ ಉಪಕರಣ

    ಹುಬ್ಬಳ್ಳಿ: ಐಒಸಿಎಲ್​ನ 50 ಲಕ್ಷ ರೂ. ಹಾಗೂ ಕೋಲ್ ಇಂಡಿಯಾದ 5 ಕೋಟಿ ರೂ. ಮೊತ್ತದ ವೈದ್ಯಕೀಯ ಉಪಕರಣಗಳನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಶನಿವಾರ ಇಲ್ಲಿನ ಕಿಮ್ಸ್​ಗೆ ಹಸ್ತಾಂತರಿಸಿದರು.

    ಸಚಿವ ಜೋಶಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸಿಗದ ವೈದ್ಯಕೀಯ ಉಪಕರಣಗಳು ಕಿಮ್ಸ್​ನಲ್ಲಿ ಲಭ್ಯವಿವೆ. ಕಿಮ್ಸ್​ನ ವೈದ್ಯಕೀಯ, ವೈದ್ಯಕೀಯೇತರ ಹಾಗೂ ಸ್ವಚ್ಛತಾ ಸಿಬ್ಬಂದಿ ಕೋವಿಡ್ ಸಮಯದಲ್ಲಿ ತೋರಿದ ಉತ್ಸುಕತೆಯನ್ನು ಭವಿಷ್ಯದಲ್ಲಿಯೂ ಮುಂದುವರಿಸಬೇಕು ಎಂದರು.

    ಕಿಮ್್ಸ ಸೇರಿದಂತೆ ಇತರ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಗೊಳಿಸುವ ಜತೆ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಒದಗಿಸುವ ಅಗತ್ಯವಿದೆ. ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚುತ್ತಿವೆ. ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

    ಕೋವಿಡ್ ಸಮಯದಲ್ಲಿ ಕಿಮ್್ಸ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಜನವರಿಯಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ಬರುವ ಸಾಧ್ಯತೆ ಇದೆ ಎಂದರು.

    ಶಾಸಕ ಅರವಿಂದ ಬೆಲ್ಲದ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಒಂದು ಕಾಲದಲ್ಲಿ ಕಿಮ್್ಸ ಬಗ್ಗೆ ಜನರಲ್ಲಿ ತಾತ್ಸಾರ ಮನೋಭಾವನೆ ಇತ್ತು. ಆದರೆ, ಕೋವಿಡ್ ಸಮಯದಲ್ಲಿ ಕಿಮ್್ಸ ತೋರಿದ ಕಾರ್ಯವೈಖರಿಯಿಂದಾಗಿ ರಾಜ್ಯದಾದ್ಯಂತ ಉತ್ತಮ ಹೆಸರು ಪಡೆಯಿತು ಎಂದರು.

    ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಪ್ರಾಸ್ತಾವಿಕ ಮಾತನಾಡಿದರು. ಐಒಸಿಎಲ್ ಕರ್ನಾಟಕ ಮುಖ್ಯಸ್ಥ ಡಿ.ಎಲ್. ಪ್ರಮೋದ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು.

    ಕಿಮ್್ಸ ಪ್ರಾಚಾರ್ಯ ಡಾ. ಎಂ.ಸಿ. ಚಂದ್ರು, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಸಲಹಾ ಸಮಿತಿ ಸದಸ್ಯ ಡಾ. ಜಿ.ಬಿ. ಸತ್ತೂರ, ಐಒಸಿಎಲ್ ಮುಖ್ಯಸ್ಥರಾದ ರಮೇಶಬಾಬು, ಎಂ. ಗೌಸ್ ಭಾಷಾ ಇತರರಿದ್ದರು.

    ನಿತ್ಯ 20 ಜನರಲ್ಲಿ ಮಾತ್ರ ಸೋಂಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ 240 ಐಸಿಯು ಬೆಡ್​ಗಳಿವೆ. ಕಿಮ್ಸ್​ಗೆ ದಾಖಲಾದ ಶೇ. 95ಕ್ಕೂ ಹೆಚ್ಚು ಕರೊನಾ ಸೋಂಕಿತರು ಗುಣಹೊಂದಿದ್ದಾರೆ. ನಿತ್ಯ 3 ಸಾವಿರ ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, 15-20 ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ ಎಂದು ತಿಳಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts