More

    ಕಿತ್ತೂರು ಇತಿಹಾಸ ಹೆಕ್ಕಿ ತೆಗೆಯಲು ಯತ್ನ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಇತಿಹಾಸದ ಕಾಲಗರ್ಭದಲ್ಲಿ ಕಿತ್ತೂರು ಇತಿಹಾಸ ಕುರಿತು ಅನೇಕ ಸತ್ಯಗಳು ಅಡಗಿ ಹೋಗಿವೆ. ಅವನ್ನೆಲ್ಲ ಹೆಕ್ಕಿ ತೆಗೆದು ವಿರೋಚಿತ ನೈಜ ಇತಿಹಾಸವನ್ನು ಜನರ ಮುಂದಿಡುವ ಸಲುವಾಗಿ ಹಾಗೂ ರಾಜ್ಯದ ಪ್ರತಿ ಮನೆಗಳಲ್ಲಿ ಚನ್ನಮ್ಮಾಜಿ ಉತ್ಸವ ಆಚರಿಸುವಂತೆ ಮಾಡಲು ಕಿತ್ತೂರು ರಾಣಿ ಚನ್ನಮ್ಮ ಸಂಶೋಧನೆ ಸಂಸ್ಥೆ ಸ್ಥಾಪಿಸಲಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ಎಂ. ಗಂಗಾಧರಯ್ಯ ಹೇಳಿದರು.

    ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಬ್ರಿಟಿಷರು ವಸಾಹತು ವಿಸ್ತರಿಸಿ ದೇಶವನ್ನೇ ಆಳಿದರು. ವಸಾಹತುಶಾಹಿ ತುಂಬ ಅಪಾಯಕಾರಿಯಾದದ್ದು ಎಂಬುದು ಇತಿಹಾಸದಿಂದ ಕಂಡುಕೊಂಡ ಸತ್ಯವಾಗಿದೆ. ಈ ವಸಾಹತುಗಳ ವಿರುದ್ಧ ರಾಣಿ ಚನ್ನಮ್ಮ ಹಾಗೂ ನಾಡಿನ ವೀರರ ಹೋರಾಟವನ್ನು ಜಗತ್ತಿಗೆ ಪರಿಚಯಸಿ ಕೊಡಬೇಕಿದೆ. ವಾಸ್ತವದ ನೆಲೆಗಟ್ಟಿನ ಮೇಲೆ ಇತಿಹಾಸ ಬರೆಯಬೇಕಾದ್ದರಿಂದ ಗ್ರಾಮೀಣ ಭಾಗದಲ್ಲಿ ಯಾರಲ್ಲಾದರೂ ಇತಿಹಾಸ ಕುರಿತು ದಾಖಲೆಗಳಿದ್ದರೆ ಅವುಗಳನ್ನು ಸಂಶೋಧನಾ ಕೇಂದ್ರಕ್ಕೆ ತಲುಪಿಸಲು ವಿನಂತಿಸಿದರು. ರಾಜಗುರು ಮಡಿವಾಳ ರಾಜಯೋಗಿಂದ್ರ ಶ್ರೀಗಳು ಮಾತನಾಡಿ, ಕಿತ್ತೂರು ಸಂಸ್ಥಾನ ಚಿಕ್ಕದಾದರೂ ಇತಿಹಾಸ ಮಾತ್ರ ದೇಶಕ್ಕೆ ಮಾದರಿಯಾಗಿದೆ. ಅನೇಕ ಸತ್ಯಾಸತ್ಯತೆ ಇನ್ನೂ

    ಹೊರಬರಬೇಕಿದೆ. ಕಿತ್ತೂರು ಇತಿಹಾಸ ಕುರಿತು ಅನೇಕ ಸಂಶೋಧನೆಗಳು ನಡೆದಿದ್ದು ಅವೆಲ್ಲ ಒಂದೆಡೆ ಕ್ರೋಢಿಕರಣಗೊಳ್ಳಬೇಕಿದೆ. ಮುಖ್ಯವಾಗಿ ಆಂಗ್ಲ ಭಾಷೆ ಹಾಗೂ ಹಿಂದಿ ಭಾಷೆಯಲ್ಲಿ ಚನ್ನಮ್ಮನ ಇತಿಹಾಸ ಪ್ರಕಟಿಸಿ ದೇಶಾದ್ಯಂತ ಬಿತ್ತರಿಸಬೇಕಿದೆ ಎಂದರು.

    ಸರ್ಕಾರ ರಾಣಿ ಚನ್ನಮ್ಮನ ಅಧ್ಯಯನ ಸಂಸ್ಥೆ ಸ್ಥಾಪಿಸಿದೆ. ಆದರೆ ಅದಕ್ಕಾಗಿ ನಯಾಪೈಸೆ ಅನುದಾನ ಮೀಸಲಾಗಿರಿಸಿಲ್ಲ ಎಂಬುದು ವಿಷಾದನೀಯ. ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸಿದ ಕಾರಣ ಸ್ವಂತವಾಗಿ ರಾಣಿ ಚನ್ನಮ್ಮಾಜಿ ಸಂಶೋಧನಾ ಸಂಸ್ಥೆಯನ್ನು ಎಲ್ಲ 9 ಸದಸ್ಯರು ಸೇರಿ ಖಾಸಗಿಯಾಗಿ ಸಂಸ್ಥಾಪಿಸುತ್ತಿದ್ದೇವೆ ಎಂದು ಹೇಳಿದರು.
    ಕಿತ್ತೂರು ರಾಣಿ ಚನ್ನಮ್ಮ ಸಂಶೋಧನೆ ಸಂಸ್ಥೆಯ ಅಧ್ಯಕ್ಷ ಡಾ. ಆರ್.ಎಂ.ಷಡಕ್ಷರಯ್ಯ ಮಾತನಾಡಿ, ಯಾರ ಜತೆ ಸ್ಪರ್ಧಾತ್ಮಕವಾಗಿ ಈ ಸಂಸ್ಥೆ ಸ್ಥಾಪಿಸಿಲ್ಲ. ಅನೇಕ ಸತ್ಯ ಘಟನೆಗಳನ್ನು ಜನರ ಮುಂದೆ ಇಡಬೇಕಿದೆ. ಮುಂದಿನ ಪೀಳಿಗೆ ಇತಿಹಾಸದ ಸತ್ಯವನ್ನು ಅರಿಯಬೇಕು ಆ ನಿಟ್ಟಿನಲ್ಲಿ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರೊ.
    ಡಾ. ಪ್ರಭಯ್ಯನವರಮಠ, ಕ್ಯೂರೇಟರ್ ರಾಘವೇಂದ್ರ, ಎಸ್.ಕೆ. ವಾಸುದೇವ, ಇಂದುಮತಿ ಚಿನ್ಮಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts