More

    ಕಾಳಸಂತೆಗೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

    ಕಲಬುರಗಿ: ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಸುಮಾರು 600 ಚೀಲ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ವೇಳೆ ಆಹಾರ ಇಲಾಖೆ ನಿರೀಕ್ಷಕರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
    ಇಲಾಖೆ ಸಹಾಯವಾಣಿಗೆ ದೊರೆತ ಖಚಿತ ಮಾಹಿತಿಯಂತೆ ಆಹಾರ ಇಲಾಖೆ ನಿರೀಕ್ಷಕರಾದ ಭಾರತಿ ಪಾಟೀಲ್ ನೇತೃತ್ವದಲ್ಲಿ ಅಮರೇಶ, ಶ್ರೀನಿವಾಸ ಇತರರು ರಾಮ ಮಂದಿರ ಬಳಿ ಶೋಧ ನಡೆಸಿದರು. ಹೋಟೆಲ್ ಎದುರು ಲಾರಿಯೊಂದು ಲೋಡ್ ಮಾಡಿಕೊಂಡು ನಿಂತಿದ್ದನ್ನು ಕಂಡು ವಿಚಾರಣೆ ನಡೆಸಿದಾಗ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ವಿಶ್ವವಿದ್ಯಾಲಯ ಠಾಣೆಗೆ ಮಾಹಿತಿ ನೀಡಿದ್ದಾರೆ.
    ಆಹಾರ ಅಧಿಕಾರಿಗಳು ಹಾಗೂ ಪಿಎಸ್ಐ ನಾಗಭೂಷಣ ಮತ್ತು ಸಿಬ್ಬಂದಿ ದೌಡಾಯಿಸಿ ಕ್ಲೀನರ್ ಇಸ್ಮಾಯಿಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಲಾರಿಯಲ್ಲಿ 6 ಲಕ್ಷ ರೂ. ಅಂದಾಜಿನ 50 ಕೆಜಿ 600 ಚೀಲಗಳಿದ್ದು, ಲಾರಿ ಜಪ್ತಿ ಮಾಡಿಕೊಳ್ಳಲಾಗಿದೆ. ಅಕ್ಕಿ ಚೀಲಗಳ ಮೇಲೆ ಹರಿಯಾಣ ಸರ್ಕಾರ ಎಂದು ಬರೆದಿದೆ. ಚೀಲ್ಗಳನ್ನು ಬ್ಯಾಗ್ ಮಾಡಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ ಎಂದು ದೂರಲಾಗಿದೆ.
    ಆಹಾರ ನಿರೀಕ್ಷಕಿ ಭಾರತಿ ಪಾಟೀಲ್ ನೀಡಿದ ದೂರಿನನ್ವಯ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ನಾಗಭೂಷಣ ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts