More

    ಕಾಲುವೆ ಒತ್ತುವರಿ ತೆರವಿಗೆ ಕ್ರಮವಹಿಸಿ

    ಹನೂರು: ಕಾಲುವೆ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ ಸೂಚಿಸಿದರು.

    ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ಬಳಿಕ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
    ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕೆರೆಗೆ ಮಳೆಗಾಲದ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಸಮೀಪವಿರುವ ಕಾಲುವೆ(ಓಣಿ)ಯ ಮೂಲಕ ಯಥೇಚ್ಛವಾದ ನೀರು ಹರಿದು ಬರುತ್ತಿತ್ತು. ಆದರೆ 2 ವರ್ಷದಿಂದ ಲೇಔಟ್ ನಿರ್ಮಿಸಿರುವ ವ್ಯಕ್ತಿಯೊಬ್ಬರೂ ಕಾಲುವೆಯನ್ನು ಅತಿಕ್ರಮಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮಣ್ಣು ಸುರಿದು ಎತ್ತರ ಮಾಡಿದ್ದಾರೆ. ಇದರಿಂದ ಮಳೆ ನೀರು ಕೆರೆಗೆ ಹರಿದು ಬರುತ್ತಿಲ್ಲ. ನಿಂತಲ್ಲೇ ನಿಲ್ಲುತ್ತಿದೆ. ಪರಿಣಾಮ ಈ ಭಾಗದ ರೈತರು ಜಮೀನುಗಳಿಗೆ ಸುತ್ತಿ ಬಳಸಿ ತೆರಳುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ನಕ್ಷೆಯಂತೆ ಕ್ರಮವಹಿಸಿ: ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಇಒ ನಕ್ಷೆಯನ್ನು ಪರಿಶೀಲಿಸಿ, ಒತ್ತುವರಿ ತೆರವುಗೊಳಿಸಿ ಕೆರೆಗೆ ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಪಿಡಿಒ ದೊರೆಯಾ ಹಾಗೂ ತಾಪಂ ಶ್ರೀನಿವಾಸ್ ಅವರಿಗೆ ತಾಕೀತು ಮಾಡಿದರು.

    ಬಳಿಕ ಚುನಾವಣಾ ಸಿದ್ಧತೆ ಸಂಬಂಧ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಿದ ಸಿಇಒ, ದುರಸ್ತಿಗೊಂಡಿರುವ ಗೋಡೆ ಹಾಗೂ ಇಳಿಜಾರನ್ನು ಗಮನಿಸಿ ಕೂಡಲೇ ರಿಪೇರಿ ಮಾಡಿಸುವಂತೆ ಸೂಚಿಸಿದರು. ಗ್ರಂಥಾಲಯಕ್ಕೆ ತೆರಳಿ ನೋಂದಾಯಿತ ಸದಸ್ಯರ ಬಗ್ಗೆ ಮಾಹಿತಿ ಪಡೆದು ಉತ್ತಮ ಸೇವೆ ನೀಡುವಂತೆ ಸಂಬಂಧಪಟ್ಟವರಿಗೆ ತಿಳಿಸಿದರು.

    ಸಿಇಒ ಗ್ರಾಪಂಗೆ ಭೇಟಿ ನೀಡಿದ ವೇಳೆ ಸದಸ್ಯ ರಾಜಪ್ಪ ಮಾತನಾಡಿ, ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಬೇಕಾದರೆ ಕ್ರಿಯಾಯೋಜನೆ ಪಡೆಯಲು ಇಂಜಿನಿಯರ್ ದುಡ್ಡು ಕೊಡಬೇಕಿದೆ. ಬಿಲ್ ಕಲೆಕ್ಟರ್ ಇಲ್ಲದೆ ವಸೂಲಾತಿ ಆಗುತ್ತಿಲ್ಲ. ಗ್ರಾಮದಲ್ಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕುವಂತೆಯೂ ಕೋರಿದರು. ಜಿಪಂ ಉಪ ಕಾರ್ಯದರ್ಶಿ ಸರಸ್ವತಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರವೀಂದ್ರ, ಗ್ರಾಪಂ ಅಧ್ಯಕ್ಷ ಕನಕರಾಜು, ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts