More

    ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

    ಯಾದಗಿರಿ: ಜಿಲ್ಲೆಯಲ್ಲಿ ಗ್ರಾಪಂಗಳಿಂದ ಅನುಷ್ಠಾಗೊಳ್ಳುವ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಅಭಿವೃದ್ಧಿ ಸಾಧಿಸಬೇಕು ಎಂದು ಜಿಪಂ ಯೋಜನಾಧಿಕಾರಿ ಬಿ.ಎಸ್. ರಾಠೋಡ ಸೂಚಿಸಿದರು.

    ನಗರದ ತಾಪಂ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಯಾದಗಿರಿ-ಗುರುಮಠಕಲ್ ಗ್ರಾಪಂಗಳಲ್ಲಿನ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನೀತಿ ಆಯೋಗ ಯಾದಗಿರಿಯನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳ ಸಾಲಿಗೆ ಸೇರಿಸಿದೆ. ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆರೋಗ್ಯ, ಶಿಕ್ಷಣ ಮತ್ತು ಮೂಲಸೌಲಭ್ಯಗಳಿಗೆ ಅನೇಕ ಕಾರ್ಯಕ್ರಮ ರೂಪಿಸಿದ್ದು, ಅವುಗಳ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

    ನಿಗಧಿತ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸದ ಅಧಿಕಾರಿ, ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಕೋಳಿ, ಕುರಿ, ಹಸು, ಹಂದಿ ಹಾಗೂ ಮೀನು ಸಾಕಾಣಿಕೆಗೆ ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ನರೇಗಾ ಯೋಜನೆಯಡಿ ಶೆಡ್ ನಿರ್ಮಿಸಿಕೊಡಿ, ಇದರಿಂದ ಅವರು ಸ್ವಯಂ ಉದ್ಯೋಗ ಕೈಗೊಂಡು ಆಥರ್ಿಕ ಪ್ರಗತಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

    ಮಕ್ಕಳು ಮತ್ತು ಮಹಿಳೆಯರಲ್ಲಿ ಕಂಡುಬರುವ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ಬಹು ಪೋಷಕಾಂಶಗಳ ಕೊರತೆ ನಿವಾರಣೆಗೆ ಪೌಷ್ಟಿಕ ಕೈತೋಟ ಹಾಗೂ ಗ್ರಾಪಂಗೆ ಒಂದರಂತೆ ಸ್ವಸಹಾಯ ಗುಂಪುಗಳ ನೇತೃತ್ವದಲ್ಲಿ ನರ್ಸರಿಗಳನ್ನು ನರೇಗಾ ಯೋಜನೆಯಡಿ ನಿಮರ್ಿಸಿಕೊಳ್ಳುವಂತೆ ಜನರಿಗೆ ಮಾಹಿತಿ ನೀಡಿ ಎಂದರು.

    2022ನೇ ಸಾಲಿನ ನರೇಗಾ ಯೋಜನೆಯ ಕಾಮರ್ಿಕ ಆಯವ್ಯಯವನ್ನು ಪಿಡಿಒ ಅವರು ಗ್ರಾಪಂಗಳಲ್ಲಿ ಗ್ರಾಮಸಭೆ ಮಾಡಿ, ಅಗತ್ಯ ಹಾಗೂ ಬೇಡಿಕೆಗನುಗುಣವಾಗಿ ಕಾಮಗಾರಿವಾರು ರೈತರ ಕ್ರೀಯಾ ಯೋಜನೆ ಸಿದ್ಧಪಡಿಸಬೇಕು. ಈ ತಿಂಗಳ ಅಂತ್ಯದೊಳಗೆ ಎಲ್ಲ ಪಿಡಿಒಗಳು ತಾಪಂಗೆ ಸಲ್ಲಿಸಬೇಕು. ಫೆ.15ರೊಳಗೆ ಜಿಲ್ಲಾ ಪಂಚಾಯಿತಿಯಿಂದ ರೈತರ ಕ್ರೀಯಾ ಯೋಜನೆಗೆ ಅನುಮೋದನೆ ನೀಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

    ಲೂಯಿ ಬ್ರೈಲ್ರ ಜನ್ಮದಿನದ ನಿಮಿತ್ತ ಅಲ್ಲಿಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶರಣಪ್ಪ ಅವರನ್ನು ಸನ್ಮಾನಿಸಲಾಯಿತು. ತಾಪಂ ಇಒ ಬಸವರಾಜ ಶರಬೈ, ಸಹಾಯಕ ನಿದರ್ೇಶಕ ಚಂದ್ರಶೇಖರ ಪವಾರ, ಖಲೀಲ್ ಅಹ್ಮದ್, ಮಲ್ಲಣ್ಣ, ರಾಮಚಂದ್ರ ಬಸೂದೆ, ತಾಪಂ ವ್ಯವಸ್ಥಾಪಕ ಶಿವರಾಯ, ನರೇಗಾ ವಿಷಯ ನಿವರ್ಾಹಕ ಅನಸರ್ ಪಟೇಲ್, ಬನ್ನಪ್ಪ,ಲಕ್ಷ್ಮೀನಾರಾಯಣ, ಪ್ರಶಾಂತ, ವೆಂಕಟೇಶ ಪವಾರ, ನಾರಾಯಣ ಸಿರರ್ಾ ಸಭೆಯಲ್ಲಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts