More

    ಕಾರ್ವಿುಕರ ಮಕ್ಕಳಿಗೆ ಸಿಕ್ತು ಶಾಲೆ ಭಾಗ್ಯ

    ಕಾರವಾರ: ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ತೆಲಂಗಾಣದಿಂದ ಬಂದ ಕಾರ್ವಿುಕರ 11 ಮಕ್ಕಳನ್ನು ಶುಕ್ರವಾರ ಗುರುತಿಸಿ ಶಾಲೆಗೆ ಸೇರ್ಪಡೆ ಮಾಡಲಾಯಿತು.

    ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ವಣಕ್ಕೆ ಸಿದ್ಧತೆ ನಡೆದಿದೆ. ಬಿಎಸ್​ಆರ್ ಎಂಬ ಕಂಪನಿ ಗುತ್ತಿಗೆ ಪಡೆದಿದ್ದು, ಅದರಡಿ 30 ಕ್ಕೂ ಅಧಿಕ ಕಾರ್ವಿುಕ ಕುಟುಂಗಳು ಈಗಾಗಲೇ ಬಂದು ಹಳೆಯ ಕಟ್ಟಡ ತೆರವು ಕಾರ್ಯವನ್ನು ಪ್ರಾರಂಭಿಸಿವೆ.

    ಕಾರ್ವಿುಕರ ಮಕ್ಕಳು ಶಾಲೆ ಬಿಟ್ಟು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಓಡಾಡಿಕೊಂಡಿದ್ದವು. ಇಲ್ಲಿನ ಪೊಲೀಸ್ ಹೆಡ್​ಕ್ವಾಟ್ರಸ್ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸಂಜೀವಿನಿ ಪಿ. ನಾಯಕ, ಸಹ ಶಿಕ್ಷಕಿಯರಾದ ದೇವಾಂಗಿನಿ ನಾಯಕ, ಲತಾ ನಾಯಕ, ಸಿಸಿಲಿಯಾ ಫರ್ನಾಂಡೀಸ್ ಆ ಮಕ್ಕಳನ್ನು ಗುರುತಿಸಿ ಪಾಲಕರನ್ನು ಭೇಟಿಯಾಗಿ ಶಾಲೆಗೆ ಕಳಿಸುವಂತೆ ಪ್ರೇರೇಪಿಸಿದರು.

    ಪರಿಣಾಮ 5 ರಿಂದ 7 ನೇ ತರಗತಿಯ ನಾಲ್ವರು ಮಕ್ಕಳು, 1 ರಿಂದ ನಾಲ್ಕನೇ ತರಗತಿಯ 7 ಮಕ್ಕಳು ಶಾಲೆಗೆ ಬರಲು ಸಿದ್ಧರಾಗಿದ್ದಾರೆ. ಬಿಇಒ ಶಾಂತೇಶ ನಾಯಕ, ಬಿಆರ್​ಸಿ ಸುರೇಶ ಗಾಂವಕರ್, ಹಾಜರಾರಿ ಅಧಿಕಾರಿ ಸುಜಾತಾ ಜಾವಕರ್ ತೆರಳಿ ಪರಿಶೀಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಅನುಮತಿ ನೀಡಿದರು. ‘ಸದ್ಯ ಕೋವಿಡ್ ಕಾರಣ ಆರು ಹಾಗೂ ಏಳನೇ ತರಗತಿಯ ಮಕ್ಕಳನ್ನು ಶಾಲೆಗೆ ಕರೆದು ಅವರಿಗೆ ಉಚಿತ ನೋಟ್​ಬುಕ್, ಸಮವಸ್ತ್ರ, ಬ್ಯಾಗ್ ಮುಂತಾದವನ್ನು ನೀಡಲಾಯಿತು. 1 ರಿಂದ 5 ನೇ ತರಗತಿ ಮಕ್ಕಳನ್ನು ಹಾಜರಾತಿ ಮಾಡಿಸಿಕೊಂಡು ಅವರಿಗೆ ಆಹಾರ ಧಾನ್ಯಗಳನ್ನು ಒದಗಿಸಲಾಗುವುದು ಪುಸ್ತಕ ನೀಡಿ ಓದಲು ಪ್ರೇರೇಪಿಸಲಾಗುವುದು’ ಎಂದು ಶಿಕ್ಷಕಿ ಸಂಜೀವಿನಿ ನಾಯಕ ತಿಳಿಸಿದ್ದಾರೆ.

    ಕರ್ನಾಟಕ ರಾಜ್ಯದ ವಲಸೆ ಕಾರ್ವಿುಕರ ಮಕ್ಕಳಿಗಾಗಿ ಎಲ್ಲಿ ವಲಸೆ ಅಲ್ಲಿ ಶಾಲೆ ಎಂಬ ಯೋಜನೆ ಇದೆ. ಆದರೆ, ಇವರು ಹೊರ ರಾಜ್ಯದ ಮಕ್ಕಳಾಗಿರುವುದರಿಂದ ವರ್ಗಾವಣೆ ಪ್ರಮಾಣಪತ್ರ ಇಲ್ಲದೇ ಆನ್​ಲೈನ್​ನಲ್ಲಿ ದಾಖಲಾತಿಯಾಗದು. ಇದರಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಾವು ಅವರನ್ನು ಶಾಲೆಗೆ ದಾಖಲು ಮಾಡಲು ಅನುಕೂಲ ಮಾಡಿಕೊಡುತ್ತೇವೆ. ಮಕ್ಕಳು ಕಲಿಯುವುದು ಮುಖ್ಯ.

    ಶಾಂತೇಶ ನಾಯಕ ಬಿಇಒ, ಕಾರವಾರ

    ನಮ್ಮ ಮಕ್ಕಳು ಚುರುಕಾಗಿದ್ದಾರೆ. ಓದುವ ಆಸಕ್ತಿ ಇದೆ. ಹಿಂದೆ ಕಲಿತ ಶಾಲೆಯಿಂದ ವರ್ಗಾವಣೆ ಪ್ರಮಾಣಪತ್ರವನ್ನೂ ಪಡೆದು ಬಂದಿದ್ದೆವು. ಆದರೆ, ಕೋವಿಡ್ ಕಾರಣ ಸಂಕಷ್ಟವಾಗಿದ್ದು, ನಿರ್ಮಾಣ ಕಾರ್ಯಕ್ಕಾಗಿ ಕುಟುಂಬ ಸಮೇತ ಇಲ್ಲಿಗೆ ಬರಬೇಕಾಯಿತು. ದಾಖಲೆ ಊರಲ್ಲೇ ಉಳಿಯಿತು. ಈಗ ಇಲ್ಲಿಯೂ ಅವರಿಗೆ ಶಾಲೆ ವ್ಯವಸ್ಥೆ ಸಿಕ್ಕಿರುವುದು ಸಂತಸದ ಸಂಗತಿ.

    ಶ್ರೀನಿವಾಸ ಗೌಡು ಕಟ್ಟಡ ಕಾರ್ವಿುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts