More

    ಕಾರ್ವಿುಕರಿಗೆ ನೀಡಿದ ಅವಲಕ್ಕಿಯಲ್ಲಿ ಹುಳು

    ಧಾರವಾಡ: ಕರೊನಾ ಹಾವಳಿ ಮಧ್ಯೆಯೂ ಅವಳಿ ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ವಿುಕರಿಗೆ ಬೆಳಗ್ಗೆ ನೀಡಿದ ಉಪಾಹಾರ(ಅವಲಕ್ಕಿ)ದಲ್ಲಿ ಹುಳುಗಳು ಪತ್ತೆಯಾದ ಘಟನೆ ಇಲ್ಲಿನ ವಾರ್ಡ್ ನಂ.19ರಲ್ಲಿ ಶುಕ್ರವಾರ ನಡೆದಿದೆ.

    ಬೆಳಗ್ಗೆ ಉಪಾಹಾರ ಸೇವಿಸುವ ಸಂದರ್ಭದಲ್ಲಿ ಹುಳುಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ವಿುಕರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಜೂ. 6 ಹಾಗೂ ಜೂ. 12ರಂದು ಪೂರೈಕೆ ಮಾಡಿದ್ದ ಇಡ್ಲಿ ಹಾಗೂ ಅವಲಕ್ಕಿಯಲ್ಲಿ ಹುಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ವಿುಕರ ಮತ್ತು ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗಿತ್ತು. ಆದಾಗ್ಯೂ ಮತ್ತೆ ಕಳಪೆ ಆಹಾರ ಪೂರೈಕೆ ಮಾಡಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದೇ ವಿಷಯವಾಗಿ ಪಾಲಿಕೆ ಆಯುಕ್ತರಿಗೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಜೂ. 19ರಂದು ಪತ್ರ ಬರೆದಿದ್ದು, ಈ ಹಿಂದೆ ಕಳಪೆ ಆಹಾರ ಪೂರೈಕೆ ಕುರಿತು ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿತ್ತು. ಆದರೂ ಕಳಪೆ ಆಹಾರ ಪೂರೈಕೆಯಾಗಿದೆ. ಪೌರ ಕಾರ್ವಿುಕರ ಹಿತ ಕಾಯುವುದು ಪಾಲಿಕೆ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಿ ಗುಣಮಟ್ಟದ ಆಹಾರ ಪೂರೈಕೆಗೆ ಕ್ರಮಕೈಗೊಳ್ಳಬೇಕು. ಘಟನೆಗೆ ಸಂಬಂಧಿಸಿ, ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಆಯೋಗದ ಕಾರ್ಯದರ್ಶಿ ಸೂಚಿಸಿರುವುದಾಗಿ ಪೌರ ಕಾರ್ವಿುಕರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts