More

    ಕಾಯ್ದೆ ಹಿಂಪಡೆಯಲು ಆಗ್ರಹ  ಚಿಲ್ಲರೆ ವರ್ತಕರ ಪ್ರತಿಭಟನೆ 

    ದಾವಣಗೆರೆ: ಲೈಸೆನ್ಸ್ ರಾಜ್ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ತಂಬಾಕು ಉತ್ಪನ್ನಗಳ ಚಿಲ್ಲರೆ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಸಣ್ಣ ವ್ಯಾಪಾರಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
    ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ತೆರಳಿ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ರಹಮತ್ ವುಲ್ಲಾ ಮಾತನಾಡಿ, ಲೈಸೆನ್ಸ್ ರಾಜ್ ಕಾಯ್ದೆಯಿಂದ ಸಾಕಷ್ಟು ಅನಾನುಕೂಲಗಳಿವೆ. ಸಣ್ಣಪುಟ್ಟ ಅಂಗಡಿಗಳು ಮುಚ್ಚುವ ಆತಂಕವಿದೆ ಎಂದರು.
    ಪಾಲಿಕೆ ತಂದಿರುವ ನಿಯಮದ ಪ್ರಕಾರ ಹೊಸ ಲೈಸೆನ್ಸ್ ಪಡೆಯುವುದರಿಂದ ವರ್ಷಕ್ಕೆ ೨೦೦೦ ರೂ. ಹಣ ಕಟ್ಟಬೇಕಿದೆ. ಇದರಿಂದ ಅಲ್ಪಸ್ವಲ್ಪ ಉಳಿಕೆಯನ್ನೂ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.
    ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಇದ್ದರೆ ಮಾತ್ರ ಪರವಾನಗಿ ನೀಡುವುದಾಗಿ ಪಾಲಿಕೆ ಹೇಳುತ್ತಿದೆ. ಇದರಿಂದ ನಮಗೆ ತೊಂದರೆಯಾಗಲಿದೆ. ಬಡವರು, ಅನಕ್ಷರಸ್ಥರು, ಆರ್ಥಿಕ ದುರ್ಬಲರ ಲಾಭ ಪಡೆಯಲು ಅಧಿಕಾರಿಗಳಿಂದ ಮತ್ತಷ್ಟು ಕಿರುಕುಳದ ಭಯ ಉಂಟಾಗುತ್ತಿದೆ. ಕೂಡಲೆ ಕಾಯ್ದೆ ರದ್ದು ಗೊಳಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಜಿ.ಪರಶುರಾಮ, ನಾಗೇಶ್, ಸಂಗಪ್ಪ, ರಾಜು, ಕೆ.ಎಚ್.ಶಿವಯೋಗಿ, ಶಂಕರ್, ಮಾರುತಿ, ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts