More

    ಕಾಯ್ದೆಗಳ ತಿದ್ದುಪಡಿ, ಜಾರಿಗೆ ವಿರೋಧ

    ಗೌರಿಬಿದನೂರು : ಕರೊನಾ ನಷ್ಟ ಪರಿಹಾರ, ಕಾಯ್ದೆಗಳ ತಿದ್ದುಪಡಿ ಹಾಗೂ ಜಾರಿ ಖಂಡಿಸಿ ಸೋಮವಾರ ಸಿಪಿಎಂ ತಾಪಂ ಆವರಣದಲ್ಲಿ ಪ್ರತಿಭಟನೆ ನಡೆಸಿ ಇಒ ಮುನಿರಾಜುಗೆ ಮನವಿ ಸಲ್ಲಿಸಿತು.

    ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ನೋಟ್‌ಬ್ಯಾನ್, ಜಿಎಸ್‌ಟಿ, ಪೌರತ್ ಸೇರಿ ಇತರ ನೀತಿಗಳಿಂದ ದೇಶಕ್ಕೆ ನಷ್ಟವಾಗಿದೆ ಎಂದು ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ಆರೋಪಿಸಿದರು.

    ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೆ ಮಾಸಿಕ 7,500 ರೂ, ನಗದು ನೀಡಬೇಕು, ಪ್ರತಿಯೊಬ್ಬರಿಗೆ ತಿಂಗಳಿಗೆ 10 ಕೆ.ಜಿ. ಪಡಿತರವನ್ನು ಅರು ತಿಂಗಳು ನೀಡುವುದು, ನರೇಗಾ ಕೂಲಿಯನ್ನೂ 100ರಿಂದ 200 ದಿನಗಳಿಗೆ ಹೆಚ್ಚಿಸುವ ಜತೆಗೆ ದಿನಕ್ಕೆ 600 ರೂ.ನಿಗದಿ ಮಾಡಬೇಕೆಂದು ಆಗ್ರಹಿಸಿದರು.

    ರೈತರ, ಕೂಲಿ ಕಾರ್ಮಿಕರ, ಅಂಸಘಟಿತ ಕಾರ್ಮಿಕರ ಬದುಕು ರೂಪಿಸುವ ಕಾಯ್ದೆಗಳು ಬೇಕೇ ಹೊರತು ಕಾರ್ಪೋರೇಟ್ ಕಂಪನಿಗಳ ಒಳಿತಿಗೆ ಮಾಡುವ ಕಾಯ್ದೆಗಳು ಈ ದೇಶಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಸಮಿತಿ ಸದಸ್ಯ ಎನ್.ಅರ್.ರವಿಚಂದ್ರರೆಡ್ಡಿ ಎಚ್ಚರಿಸಿದರು.ಕಾರ್ಯಕರ್ತರಾದ ವೆಂಕಟಲಕ್ಷ್ಮಮ್ಮ, ಮಂಜುನಾಥ್, ಗಂಗಾಧರಪ್ಪ, ವೆಂಕಟಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts