More

    ಕಾಯಕ ಫೌಂಡೇಷನ್ ವಿಜ್ಞಾನ ವಸತಿ ಕಾಲೇಜಿಗೆ ಶೇ.99 ಫಲಿತಾಂಶ

    ಸಾಧನೆ ಮೆರೆದ ಗ್ರಾಮೀಣ ವಿದ್ಯಾರ್ಥಿಗಳು > ಸಂಸ್ಥೆ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್, ಅಧ್ಯಕ್ಷೆ ಸಪ್ನಾರಡ್ಡಿ ಪಾಟೀಲ್ ಹರ್ಷ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಸತಿಸಹಿತ ವಿಜ್ಞಾನ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ದಾಖಲೆ ಫಲಿತಾಂಶ ಲಭಿಸಿದೆ. ಶೇ.೯೮ ರಿಸಲ್ಟ್ನೊಂದಿಗೆ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
    ಪರೀಕ್ಷೆ ಬರೆದ ೭೪ ವಿದ್ಯಾರ್ಥಿಗಳಲ್ಲಿ ೭೨ ಪಾಸಾಗಿದ್ದು, ಈ ಪೈಕಿ ೧೦ ಡಿಸ್ಟಿಂಕ್ಷನ್, ೫೩ ಪ್ರಥಮ ದರ್ಜೆ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಾನಸಾ ಮಲ್ಲಿಕಾರ್ಜುನ ಶೇ.೯೩ ಅಂಕದೊAದಿಗೆ ಕಾಲೇಜಿಗೆ ಟಾಪರ್, ಶಾಲಿನಿ ಸೈಮೊನ್ ಶೇ.೯೨, ಅನಿತಾ ಅಶೋಕ ಶೇ.೯೦ ಅಂಕ ಪಡೆದು ದ್ವಿತೀಯ ಮತ್ತು ತೃತೀಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
    ಮೊಹಮ್ಮದ್ ಸೋಹಿಲ್ ಮದರ್‌ಸಾಬ, ಇಂದು ದೇವಿಂದ್ರ, ಸೈಯದ್ ಸುಫಿಯಾನ್ ಅಲಿ ಇನಾಯತ್ ಅಲಿ, ರಮ್ಯಾ ರೇವಣಸಿದ್ದ, ವರ್ಷಾರಾಣಿ ವಿರುಪಾಕ್ಷಯ್ಯ, ಮೊಹಮ್ಮದ್ ಅಫ್ತಾಬ್ ಮಂಜೂರ್ ಅಹ್ಮದ್ ಹಾಗೂ ಅಶೋಕಕುಮಾರ ಹನಮಂತ ಶೇ.೮೫ ಅಂಕಗಳೊAದಿಗೆ ಡಿಸ್ಟಿಂಕ್ಷನ್ ಬಂದಿದ್ದಾರೆ.
    ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್, ಅಧ್ಯಕ್ಷೆ ಸಪ್ನಾರಡ್ಡಿ ಶಿವರಾಜ ಪಾಟೀಲ್ ಹಾಗೂ ಪ್ರಾಂಶುಪಾಲ ನಾಗರಾಜ ಕಾಮಾ ಸಂತಸ ವ್ಯಕ್ತಪಡಿಸಿದ್ದಾರೆ. ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಇಷ್ಟೊಂದು ಸಾಧನೆ ಮಾಡಿರುವುದು ವಿಶೇಷ.


    ಕಾಲೇಜಿನಲ್ಲಿರುವ ಅತ್ಯುನ್ನತ ದರ್ಜೆ ಬೋಧನಾ ಕ್ರಮ, ಹೈಟೆಕ್ ಶೈಕ್ಷಣಿಕ ಪರಿಕರ, ಪರಿಣತ ಉಪನ್ಯಾಸರ ತಂಡ ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಪಾಠಗಳ ಪುನರ್‌ಮನನ, ಮೇಲಿಂದ ಮೇಲೆ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಹಳೆಯ ಪ್ರಶ್ನೆಪತ್ರಿಕೆ ಬಿಡಿಸುವ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಿದ್ದಗೊಳಿಸಿದ್ದಕ್ಕಾಗಿ ಅತ್ಯುತ್ತಮ ಫಲಿತಾಂಶ ಲಭಿಸಿದೆ.
    | ಶಿವರಾಜ ಟಿ.ಪಾಟೀಲ್
    ಸಂಸ್ಥಾಪಕ, ಕಾಯಕ ಫೌಂಡೇಷನ್ ಶಾಲಾ-ಕಾಲೇಜುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts