More

    ಕಾಯಂ ಪೀಠ ಸ್ಥಾಪನೆ ವಿಳಂಬಕ್ಕೆ ವಕೀಲರ ಆಕ್ರೋಶ

    ಬೆಳಗಾವಿ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸುವುದಕ್ಕೆ ಆಯೋಗದ ಅಧ್ಯಕ್ಷರು ಶಿಫಾರಸು ಮಾಡಿದರೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ವಕೀಲರು ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಬುಧವಾರವೂ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿದ ವಕೀಲರು ಕೋರ್ಟ್ ಆವರಣದಿಂದ ಪ್ರತಿಭಟನಾ ರ‌್ಯಾಲಿ ಮೂಲಕ ಚನ್ನಮ್ಮ ವೃತ್ತಕ್ಕೆ ಬಂದು, ಸಚಿವ ಉಮೇಶ ಕತ್ತಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತವರು ಜಿಲ್ಲೆಯವರೇ ಆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಅವರು ಬೆಳಗಾವಿಯಲ್ಲಿ ಆಯೋಗದ ಸಂಚಾರಿ ಕಾಯಂ ಪೀಠ ಸ್ಥಾಪಿಸುವುದರಲ್ಲಿ ನಿರ್ಲಕ್ಷೃ ವಹಿಸಿದ್ದಾರೆ. ಈ ಹಿಂದೆಯೇ ಆಯೋಗದ ಅಧ್ಯಕ್ಷರು ಬೆಳಗಾವಿಯಲ್ಲಿ ಕಾಯಂ ಪೀಠ ಸ್ಥಾಪಿಸುವುದಕ್ಕೆ ಶಿಫಾರಸು ನೀಡಿದ್ದಾರೆ. ಆದರೂ ಸಚಿವರು ಮುತುವರ್ಜಿ ವಹಿಸಿ ಮಾಡಿಸಿಲ್ಲ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

    ಮೊದಲು ಬೆಳಗಾವಿಯಲ್ಲಿ ಪೀಠ ಸ್ಥಾಪನೆ ಆಗಿಬೇಕಿತ್ತು. ಸಚಿವರು ಈ ಜಿಲ್ಲೆಯನ್ನು ನಿರ್ಲಕ್ಷಿಸಿದ್ದರಿಂದ ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರ ಮೊದಲು ಪೀಠ ಸ್ಥಾಪನೆಗೆ ಆದೇಶಿಸಿದೆ. ಸಚಿವರು ಹಾಗೂ ಸರ್ಕಾರ ಕೂಡಲೇ ಬೆಳಗಾವಿಯಲ್ಲಿ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಚನ್ನಮ್ಮ ವೃತ್ತದಲ್ಲಿ ವಾಹನ ಸಂಚಾರ ತಡೆ ಮಾಡಿದ್ದರಿಂದ ಕಾಲೇಜು ರಸ್ತೆ, ಬೋಗಾರವೇಸ್, ಗಣಪತಿ ಗಲ್ಲಿಯಲ್ಲಿ, ಖಡೇ ಬಜಾರ್, ಫೋರ್ಟ್ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಾಗಿ ಜನರಿಗೆ ಕಿರಿಕಿರಿಯಾಯಿತು. ಪ್ರಭು ಯತ್ನಟ್ಟಿ, ಬಿ.ಎನ್. ಪಾಟೀಲ, ಯಶವಂತ ಲಮಾಣಿ, ಅನಿಲ ಶಿಂಧೆ, ಎನ್.ಆರ್.ಲಾತೂರ, ಲಕ್ಕೇಶ ಹೆಗ್ಗಣ್ಣವರ, ರೋಹಿತ ಲಾತೂರ, ಸುಧೀರ ಚವ್ಹಾಣ, ಕುಮಾರ ಕಡಬಾವಿ, ಎನ್.ಎಸ್. ಪಾಟೀಲ, ರಾಘವೇಂದ್ರ ಬೀರಗೌಡರ, ಸಂಜು ಪೂಜಾರಿ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts