More

    ಕಾನ್ಸರ್ ರೋಗ ತಡೆಗಟ್ಟಲು ಜನ-ಜಾಗೃತಿ ಅತ್ಯಗತ್ಯ

    ಚಿಕ್ಕೋಡಿ: ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗ ತಡೆಗಟ್ಟುವುದಕ್ಕೆ ಜಾಗೃತಿ ಅಗತ್ಯ ಎಂದು ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕಿರಣ ಮುತ್ನಾಳಿ ಹೇಳಿದರು.

    ಪಟ್ಟಣದ ಕೆ.ಎಲ್.ಇ ಆಯುರ್ವೇದ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಉಚಿತ ತಪಾಸಣೆ ಹಾಗೂ ಸಲಹಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಕಾಲದಲ್ಲಿ ನಾವು ಎಲ್ಲ ರೋಗಕ್ಕೂ ಚಿಕಿತ್ಸೆ ಕಂಡು ಹಿಡಿದಿದ್ದೇವೆ. ಆದರೆ, ಕ್ಯಾನ್ಸರ್ ಎಂಬ ಮಾರಣಾಂತಿಕ ರೋಗಕ್ಕೆ ಸಂಪೂರ್ಣ ಮದ್ದಿಲ್ಲ.

    ಪ್ರತಿವರ್ಷ ಫೆ. 4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ತಡೆಗಟ್ಟಲು ಅಂತಾರಾಷ್ಟ್ರೀಯ ಸಮುದಾಯ ಒಟ್ಟುಗೂಡಿಸಲು ಈ ದಿನ ಅಗತ್ಯ. ಈ ವರ್ಷ ‘ಕ್ಲೋಸ್ ದಿ ಕೇರ್ ಗ್ಯಾಪ್’ ಎಂಬ ವಿಷಯದೊಂದಿಗೆ ಆಚರಿಸಲಾಗುತ್ತಿದೆ. ಕ್ಯಾನ್ಸರ್‌ನಿಂದ ವಿಶ್ವದಲ್ಲಿ ಪ್ರತಿವರ್ಷ 10 ಲಕ್ಷ ಜನರು ಮರಣ ಹೊಂದುತ್ತಿದ್ದಾರೆ. ಆಧುನಿಕ ಚಿಕಿತ್ಸೆ ಜತೆಗೆ ಆಯುರ್ವೇದ ಔಷಧೋಪಚಾರ ಪಂಚಕರ್ಮ, ಯೋಗ, ಉತ್ತಮ ಆರೋಗ್ಯ ಪದ್ಧತಿ ಹಾಗೂ ಜೀವನಶೈಲಿ ಮೂಲಕ ಕ್ಯಾನ್ಸರ್ ರೋಗದಿಂದ ಮುಕ್ತಿ ಹೊಂದಲು ಸಾಧ್ಯವಾಗಿದೆ. ತಂಬಾಕು ಸೇವನೆಯಿಂದ ಅತಿ ಹೆಚ್ಚು ರೋಗಿಗಳು ಕಂಡು ಬರುತ್ತಿವೆ. ತಂಬಾಕು ತ್ಯಜಿಸಬೇಕು ಎಂದರು.
    ನಮ್ಮ ದೇಶದಲ್ಲಿ ಮಹಿಳೆಯರಲ್ಲಿ ಆಗುವ ಹಾರ್ಮೋನ್ ಬದಲಾವಣೆಯಿಂದ ಸ್ತನ ಕ್ಯಾನ್ಸರ್ ಹಾಗೂ ಗರ್ಭಾಶಯ ಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿವೆ. ಅದನ್ನು ಸಹ ಸೂಕ್ತ ಸಲಹೆ, ಉಪಚಾರಗಳಿಂದ ನಿವಾರಿಸಿಕೊಳ್ಳಬಹುದು ಎಂದರು.

    ಶಿಬಿರದಲ್ಲಿ ಆಸ್ಪತ್ರೆ ಉಪಅಧೀಕ್ಷ್ಷಕ ಡಾ. ಬಾಹುಬಲಿ ಮಹಾಜನ, ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ, ಡಾ. ಅರ್ಚನಾ ಚೌಗಲಾ, ವೈದ್ಯರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts