More

    ಕಾಡ್ಗಿಚ್ಚು ತಡೆಗೆ ಅಡೆ-ತಡೆ

    ಕೋಲಾರ: ಜಿಲ್ಲೆಯಲ್ಲಿ ಬೇಸಿಗೆ ಬಂತೆಂದರೆ ಬೆಟ್ಟ-ಗುಡ್ಡ ಮತ್ತು ಅರಣ್ಯಗಳಿಗೆ ಬೆಂಕಿ ಹಾಕುವುದು ಸಾವಾನ್ಯ. ಆದರೆ ಅವಡ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅರಣ್ಯ ಇಲಾಖೆಗೆ ಸಿಬ್ಬಂದಿ ಕೊರತೆ ಎದುರಾಗಿದ್ದು, ಸ್ಥಳೀಯರ ಸಹಕಾರ ನೆಚ್ಚಿ ಕೂರುವಂತಾಗಿದೆ.

    ಕಳೆದ ವರ್ಷ ಅಧಿಕ ಮಳೆ ಸುರಿದಿದ್ದರಿಂದ ಬೆಟ್ಟ-ಗುಡ್ಡ ಮತ್ತು ಅರಣ್ಯಗಳಲ್ಲಿ ಸಮೃದ್ಧವಾಗಿ ಹುಲ್ಲು ಬೆಳೆದು ಬಿಸಿಲಿನ ಝಳ ಏರುತ್ತಿದ್ದಂತೆ ಒಣಗುತ್ತಿದೆ. ಅದೇ ಈಗ ಮರ-ಗಿಡಗಳಿಗೆ ಕಂಟಕವಾಗಿದೆ. ದುಷ್ಕರ್ಮಿಗಳು ಇಂತಹ ಹುಲ್ಲಿಗೆ ಬೆಂಕಿ ಹಚ್ಚಿ ವಿಕೃತ ಆನಂದ ಅನುಭವಿಸುತ್ತಿದ್ದರೆ, ಸಸ್ಯ ಸಂಪತ್ತು, ಜೀವಸಂಕುಲ ಅಗ್ನಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿದೆ.

    ಜಿಲ್ಲೆಯಲ್ಲಿ ನೂರಾರು ಬೆಟ್ಟ-ಗುಡ್ಡ ಮತ್ತು ಅವುಗಳಿಗೆ ಹೊಂದಿಕೊಂಡು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವಿದೆ. ಅಂತರಗಂಗೆ, ರಾಯಲ್ಪಾಡು, ಕಾಮಸಮುದ್ರ, ಮೂತನೂರು, ಗೊಲ್ಲಹಳ್ಳಿ ಗೂಕುಂಟೆ, ವಕ್ಕಲೇರಿ, ತೊಂಡಾಲ, ಬಡವಾಕನಹಳ್ಳಿ ಸೇರಿ ಇನ್ನೂ ಹಲವೆಡೆ ಅರಣ್ಯವಿದೆ. ಮಂಗಸಂದ್ರ, ಕಲ್ಲಂಡೂರು, ಚಿಕ್ಕನಹಳ್ಳಿ, ವೆಂಕಟಾಪುರ, ಅರಾಭಿಕೊತ್ತನೂರು, ಕೆಂದಟ್ಟಿ, ಗುರಗಂಜಿಗುರ್ಕಿ, ಗರ‌್ನಹಳ್ಳಿ, ಚಲ್ಲಹಳ್ಳಿ, ಅಚ್ಚಟ್ನಹಳ್ಳಿ, ಸೂಲೂರು, ಪೆಂಬಶೆಟ್ಟಿಹಳ್ಳಿ, ಕುರ್ಕಿ, ಚಿಕ್ಕ ಅಯ್ಯೂರು, ಖಾಜಿ ಕಲ್ಲಹಳ್ಳಿ, ಸೀತಿ, ಚಂಜಿಮಲೆ, ಅಡ್ಡಗಲ್, ಅಂದ್ರಹಳ್ಳಿ, ಪುಲಗೂರುಕೊಟ… ಹೀಗೆ ನೂರಾರು ಬೆಟ್ಟಗುಡ್ಡಗಳಿದ್ದು, ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇಲ್ಲೆಲ್ಲ ಆಲ, ಹೊಂಗೆ, ಅರಳಿ, ಚಿಗರೆ, ಬೊಪ್ಪಾಲೆ, ಬೇವು, ಕಕ್ಕೆ, ನೇರಳೆ, ಶ್ರೀಗಂಧ ಮುಂತಾದ ನೂರಾರು ಬಗೆಯ ಸಸ್ಯರಾಶಿ ಇದೆ. ಎಲ್ಲಿಯಾದರೂ ಬಹತ್ ಪ್ರವಾಣದಲ್ಲಿ ಬೆಂಕಿ ಬಿದ್ದರೆ ತಂತ್ರಜ್ಞಾನದ ನೆರವಿನಿಂದ ಕೂಡಲೇ ಇಲಾಖೆಗೆ ವಾಹಿತಿ ಮುಟ್ಟುತ್ತದೆ. ಆದರೆ ಬೆರಳೆಣಿಕೆ ಸಿಬ್ಬಂದಿ ಟನಾ ಸ್ಥಳ ತಲುಪುವುದರಲ್ಲಿ ನೂರಾರು ಎಕರೆ ಭಸ್ಮವಾಗಿರುತ್ತದೆ.

    ಶೇ.50 ಹುದ್ದೆ ಖಾಲಿ: ಅರಣ್ಯ ರಕ್ಷಕರು ಮತ್ತು ವೀಕ್ಷಕರ ಹುದ್ದೆಗಳು ಶೇ.50 ಖಾಲಿ ಇವೆ. ರಕ್ಷಕರು 60 ಇರಬೇಕಾದ ಕಡೆ 30 ಮಂದಿ ಇದ್ದಾರೆ. ವೀಕ್ಷಕರ 30 ಹುದ್ದೆ ಭರ್ತಿಯಾಗಿಲ್ಲ. ಸಾವಿರಾರು ಎಕರೆ ಅರಣ್ಯ, ನೂರಾರು ಬೆಟ್ಟ-ಗುಡ್ಡ ನೋಡಿಕೊಳ್ಳಲು ಎರಡಂಕಿ ಸಿಬ್ಬಂದಿ ಇದ್ದು, ರಕ್ಷಣೆಗೆ ಹೆಣಗಾಡುವಂತಾಗಿದೆ.

    ಹುಲ್ಲು ಚಿಗುರುತ್ತದೆ ಎಂದು ಬೆಂಕಿ: ಸಾವಾನ್ಯವಾಗಿ ಕುರಿ, ಮೇಕೆ, ದನ-ಕರು ಮೇಯಿಸುವವರು ಹುಲ್ಲು ಚಿಗುರು ಬರುತ್ತದೆಂದು ಬೆಂಕಿ ಹಾಕುತ್ತಾರೆ. ಬೆಂಕಿ ಬಿದ್ದ ಕ್ಷಣಾರ್ಧದಲ್ಲಿ ಒಣ ಹುಲ್ಲು ಹೊತ್ತಿಕೊಂಡು ಗಾಳಿಗೆ ಇಡೀ ಬೆಟ್ಟಕ್ಕೆ ಆವರಿಸುತ್ತದೆ. ಸಿಬ್ಬಂದಿಗೆ ಆಗ ವಾಹಿತಿ ಸಿಕ್ಕರೂ ಬೆಟ್ಟಗಳಲ್ಲಿನ ದುರ್ಗಮ ಹಾದಿಯಲ್ಲಿ ಹೋಗಿ ಬೆಂಕಿ ಆರಿಸುವುದು ಅಷ್ಟು ಸುಲಭವಲ್ಲ. ಬೆಂಕಿ ಬಿದ್ದಾಗ ನಾಲ್ಕೈದು ಸಿಬ್ಬಂದಿ ಸ್ಥಳಕ್ಕೆ ಹೋಗಿ ಬರುವುದು ಬಿಟ್ಟರೆ ಬೆಂಕಿ ನಂದಿಸಿದ ಉದಾಹರಣೆಗಳು ತೀರಾ ಕಡಿಮೆ.

    ಫೈರ್ ಲೈನ್ಸ್: ಸೂಕ್ಷ್ಮ ಸ್ಥಳಗಳಲ್ಲಿ ಅರಣ್ಯ ಸಿಬ್ಬಂದಿ ಜನವರಿ, ಫೆಬ್ರವರಿಯಲ್ಲಿ ಹುಲ್ಲು ತೆರವುಗೊಳಿಸಿ, ತರುಗು ಗುಡ್ಡೆ ವಾಡಿ ಬೆಂಕಿ ಹಚ್ಚಿ, ಮುಂದೆ ಬೆಂಕಿ ಬಿದ್ದರೂ ಅರಣ್ಯ, ಬೆಟ್ಟ-ಗುಡ್ಡಕ್ಕೆ ವ್ಯಾಪಿಸದಂತೆ ಫೈರ್‌ಲೈನ್ ವಾಡುತ್ತಿದ್ದಾರೆ. ಇದು ಹಲವು ಬಾರಿ ಬೆಂಕಿ ನಿಗ್ರಹಕ್ಕೆ ಯಶಸ್ವಿಯೂ ಆಗಿದೆ.

    ಫೈರ್ ವಾಚರ್ಸ್‌ ನೇಮಕ: ಸಿಬ್ಬಂದಿ ಕಡಿಮೆ ಇರುವ ಕಾರಣ ಅರಣ್ಯ, ಬೆಟ್ಟಗಳ ಅಂಚಿನ ಗ್ರಾಮಗಳ ಯುವಕರನ್ನು ಮೂರು ತಿಂಗಳ ಮಟ್ಟಿಗೆ ಬೆಂಕಿ ವೀಕ್ಷಕರನ್ನಾಗಿ ನೇಮಿಸಿಕೊಳ್ಳುವ ಇಲಾಖೆ ಅಧಿಕಾರಿಗಳು ಅಗ್ನಿ ಅವಡಗಳ ತಡೆಗೆ ಇವರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಇಲ್ಲಿವರೆಗೆ ಅವಡಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಿದ ಉದಾಹರಣೆ ಕಾಣಸಿಗುವುದಿಲ್ಲ. ಜನರಲ್ಲಿ ಕಾನೂನು ಭಯವಿಲ್ಲದಿರುವುದು ಅನಾಹುತಗಳು ನಿತ್ಯ ನಿರಂತರವಾಗಿರುವುದಕ್ಕೆ ಕಾರಣ ಎನ್ನಬಹುದು.

    ಉದ್ದೇಶಪೂರ್ವಕವಾಗಿ ಯಾರೂ ಬೆಂಕಿ ಹಚ್ಚುವುದಿಲ್ಲ, ಬಹುತೇಕ ಪ್ರಕರಣಗಳು ಆಕಸ್ಮಿಕ. ಸುತ್ತಮುತ್ತಲ ಹಳ್ಳಿಯವರಿಗೆ ಬೆಂಕಿ ಹಚ್ಚದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಗೊಲ್ಲಹಳ್ಳಿ ಗೂಕುಂಟೆ, ಕಾಮಸಮುದ್ರ ಮತ್ತಿತರ ಸೂಕ್ಷ್ಮ ಅರಣ್ಯ ಇರುವ ಕಡೆ ಮೂರು ತಿಂಗಳ ಮಟ್ಟಿಗೆ ಫೈರ್ ವಾಚರ್ಸ್‌ ನೇಮಿಸಿಕೊಳ್ಳುತ್ತೇವೆ.
    ಶಿವಶಂಕರ್, ಉಪಅರಣ್ಯ ಸಂರಕ್ಷಣಾಧಿಕಾರಿ

    ಅರಣ್ಯ ನಾಶದಿಂದಾಗುವ ದುಷ್ಪರಿಣಾಮ ಕುರಿತು ಜನಜಾಗೃತಿ ಮೂಡಿಸಬೇಕಿದೆ. ಬೆಟ್ಟಕ್ಕೆ ಬೆಂಕಿ ಇಡುವ ಜನರ ಕೆಟ್ಟ ಆಲೋಚನೆಯಿಂದ ಸಣ್ಣ-ಪುಟ್ಟ ಪ್ರಾಣಿಗಳು ವಾಸಸ್ಥಾನ ಕಳೆದುಕೊಳ್ಳುತ್ತವೆ. ಜತೆಗೆ ಕಾಡುಪ್ರಾಣಿಗಳು ನಾಡಿನತ್ತ ನುಗ್ಗುವುದು ಸಹಜವಾಗುತ್ತದೆ. ಬೆಂಕಿಯಲ್ಲಿ ಬೆಂದು ಪರಿಸರ ನಾಶವಾಗುತ್ತಿರುವುದು ದುರಂತದ ಸಂಗತಿ.
    ಬಿ.ಶಿವಕುವಾರ್, ಶಿಕ್ಷಕ, ಪರಿಸರವಾದಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts