More

    ಕಾಡು ಉಳಿಸಿಕೊಳ್ಳುವುದೇ ಕಷ್ಟ: ಡಿಸಿಎಫ್ ಎಂ.ರಾಮಕೃಷ್ಣಪ್ಪ

    ಸಾಗರ: ಅರಣ್ಯ ಸಂರಕ್ಷಣೆ ಸವಾಲಿನ ಕೆಲಸ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅರಣ್ಯ ಸಂರಕ್ಷಣೆ ಮಾಡುವ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಗೌರವಾದರಗಳಿಂದ ನೋಡುವಂತಾಗಬೇಕು ಎಂದು ಡಿಸಿಎಫ್ ಎಂ.ರಾಮಕೃಷ್ಣಪ್ಪ ಹೇಳಿದರು.
    ಸಾಗರದ ಅರಣ್ಯ ಇಲಾಖೆ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದಂದು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಅರಣ್ಯ ಉಳಿಸಿಕೊಳ್ಳುವುದೇ ಕಷ್ಟಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
    ಪರಿಸರ ಸಮತೋಲವಾಗಿರಬೇಕಾದರೆ ಇಷ್ಟು ಪ್ರಮಾಣದ ಅರಣ್ಯ ಇರಬೇಕು ಎನ್ನುವ ನಿಯಮವಿದೆ. ಆದರೆ ಬೇರೆಬೇರೆ ಉದ್ದೇಶಕ್ಕೆ ಅರಣ್ಯ ನಾಶ ಹೆಚ್ಚುತ್ತಿದೆ. ಅರಣ್ಯನಾಶ ತಡೆಯಲು ನಮ್ಮ ಅಧಿಕಾರಿ, ಸಿಬ್ಬಂದಿ ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ. ಅಧಿಕಾರಿ, ಸಿಬ್ಬಂದಿ ಹೆಚ್ಚು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಈ ವರ್ಷ ಸಾಗರ ವ್ಯಾಪ್ತಿಯಲ್ಲಿ ಬೇರೆಬೇರೆ ಕಾರಣದಿಂದ ಐದು ಜನ ಹುತಾತ್ಮರಾಗಿದ್ದಾರೆ ಎಂದು ಹೇಳಿದರು.
    ವಲಯ ಅರಣ್ಯಾಧಿಕಾರಿ ಡಿ.ಆರ್.ಪ್ರಮೋದ್ ಮಾತನಾಡಿ, 1730ರ ಸೆಪ್ಟೆಂಬರ್ 11ರಂದು ರಾಜಸ್ಥಾನದ ಜೋಧಪುರದಲ್ಲಿ ಅರಣ್ಯ ರಕ್ಷಣೆಗಾಗಿ ಪ್ರಾಣತೆತ್ತವರ ನೆನಪಿನಾರ್ಥವಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 11ರಂದು ಅರಣ್ಯ ಹುತಾತ್ಮರ ದಿನವನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಈವರೆಗೆ ಅರಣ್ಯ ಸಂರಕ್ಷಣೆ ಮಾಡಲು ಹೋಗಿ 54 ವಿವಿಧ ವೃಂದದ ಅಧಿಕಾರಿ, ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು, ಗೌರವ ಸಲ್ಲಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts