More

    ಕಾಡುಹಂದಿ ದಾಳಿಗೆ ಅಡಕೆ ಸಸಿ ನಾಶ

    ಸಿದ್ದಾಪುರ: ತಾಲೂಕಿನ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಕುಡೆಗೋಡ, ಹುಕ್ಕಳಗದ್ದೆ ಹಾಗೂ ಕುಡಗುಂದದ ಅಡಕೆ ತೋಟಕ್ಕೆ ಕಾಡುಹಂದಿಗಳು ದಾಳಿ ನಡೆಸಿ ಒಂದು ಸಾವಿರಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿವೆ.

    ರಾಮನಾಥ ಗಿರಿಯಪ್ಪ ಹೆಗಡೆ, ಶ್ರೀಧರ ಗಣಪತಿ ಹೆಗಡೆ, ಮಂಜುನಾಥ ಪ. ಹೆಗಡೆ, ಸದಾನಂದ ಸು. ಹೆಗಡೆ ಹುಕ್ಕಳಗದ್ದೆ, ಪ್ರಕಾಶ ಆರ್. ಹೆಗಡೆ ಕುಡೆಗೋಡ ಹಾಗೂ ತಿಮ್ಮ ನಾಯ್ಕ ಕುಡಗುಂದ ಎಂಬುವರ ಅಡಕೆ ತೋಟಗಳಿಗೆ ಕಾಡು ಹಂದಿಗಳು ದಾಳಿ ನಡೆಸಿವೆ. ಅಂದಾಜು 4 ರಿಂದ 5 ವರ್ಷದ ಅಡಕೆ ಸಸಿಗಳನ್ನು ನಾಶಪಡಿಸಿವೆ. ಅಲ್ಲದೆ, ಬಾಳೆ ಗಿಡಿಗಳನ್ನು ಕಿತ್ತು ಹಾಕಿವೆ ಎಂದು ಬೆಳೆಗಾರರು ಅಳಲನ್ನು ತೋಡಿಕೊಂಡಿದ್ದಾರೆ.

    ಶಾಶ್ವತ ಪರಿಹಾರಕ್ಕೆ ಆಗ್ರಹ: ಬೆಳೆ ಹಾನಿಯ ಪರಿಹಾರ ನೀಡುವುದರ ಜತೆಗೆ ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳಿಂದ ಯಾವುದೇ ಹಾನಿ ಆಗದಂತೆ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಬೆಳೆಹಾನಿಗೊಳಗಾದ ರೈತರು ಹಾಗೂ ಸುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಕುಡೆಗೋಡ, ಹುಕ್ಕಳಗದ್ದೆ ಹಾಗೂ ಕುಡಗುಂದದಲ್ಲಿ ಕಾಡುಹಂದಿಗಳು ಬೆಳೆ ನಾಶಪಡಿಸಿವೆ. ಆಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬೆಳೆಗಾರರು ಇಲಾಖೆಗೆ ಬೆಳೆಹಾನಿ ಆದ ಕುರಿತು ಅರ್ಜಿ ನೀಡಬೇಕು. ನಂತರ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ. | ಶ್ರೀಕಾಂತ ಇಟಗಿ ಉಪವಲಯ ಅರಣ್ಯಾಧಿಕಾರಿ ಕ್ಯಾದಗಿ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts